ಈ ದೇಹ ನೀನೆಂದು ತಿಳಿದಿರುವೆ ನೀನು|
ನಿಜತಿಳಿಯಬೇಕೇನು? ದೇಹವಲ್ಲವು ನೀನು||
ಶಿಶುವಾಗಿ ಜನಿಸಿ, ಬೆಳೆದು ಯೌವ್ವನ ಪಡೆದು|
ವೃದ್ಧಾಪ್ಯದೆಡೆಗೆ, ದಿನದಿನವು ಸಾಗಿ
ಮುಪ್ಪು, ಮರಣವು ಬರಲು ನಿನಗೇಕೆ ಚಿಂತೆ?
ಹುಟ್ಟಿದಾ ದೇಹಕೆ ಅಂತ್ಯವಿದೆಯಂತೆ||
ಮೊದಲು ಬಾಲ್ಯದ ಆಟ, ನಡುನಡುವೆ ಹುಡುಗಾಟ
ಯೌವ್ವನವು ಕಾಲಿಡಲು, ಸಂಸಾರದಾಟ|
ಆಡಿದವನಾರು? ಆಡಿಸಿದವನಾರು?
ಆಡುವಾ ದೇಹದೊಳು ಇರುವ ನೀನಾರು?||
ನೀ ಹುಟ್ಟಲಿಲ್ಲ,ತಾರುಣ್ಯ ನಿನದಲ್ಲ
ವೃದ್ಧಾಪ್ಯ ಬರಲಿಲ್ಲ , ಸಾವೆಂಬ ಸುಳಿವಿಲ್ಲ|
ಅಂಗಿ ಬದಲಿಸಿದಂತೆ ದೇಹ ಬದಲಿಸಿದೆ ನೀನು
ಚೈತನ್ಯವೇ ನೀನು, ಅಮೃತಾತ್ಮನು ನೀನು||
ನಿಜತಿಳಿಯಬೇಕೇನು? ದೇಹವಲ್ಲವು ನೀನು||
ಶಿಶುವಾಗಿ ಜನಿಸಿ, ಬೆಳೆದು ಯೌವ್ವನ ಪಡೆದು|
ವೃದ್ಧಾಪ್ಯದೆಡೆಗೆ, ದಿನದಿನವು ಸಾಗಿ
ಮುಪ್ಪು, ಮರಣವು ಬರಲು ನಿನಗೇಕೆ ಚಿಂತೆ?
ಹುಟ್ಟಿದಾ ದೇಹಕೆ ಅಂತ್ಯವಿದೆಯಂತೆ||
ಮೊದಲು ಬಾಲ್ಯದ ಆಟ, ನಡುನಡುವೆ ಹುಡುಗಾಟ
ಯೌವ್ವನವು ಕಾಲಿಡಲು, ಸಂಸಾರದಾಟ|
ಆಡಿದವನಾರು? ಆಡಿಸಿದವನಾರು?
ಆಡುವಾ ದೇಹದೊಳು ಇರುವ ನೀನಾರು?||
ನೀ ಹುಟ್ಟಲಿಲ್ಲ,ತಾರುಣ್ಯ ನಿನದಲ್ಲ
ವೃದ್ಧಾಪ್ಯ ಬರಲಿಲ್ಲ , ಸಾವೆಂಬ ಸುಳಿವಿಲ್ಲ|
ಅಂಗಿ ಬದಲಿಸಿದಂತೆ ದೇಹ ಬದಲಿಸಿದೆ ನೀನು
ಚೈತನ್ಯವೇ ನೀನು, ಅಮೃತಾತ್ಮನು ನೀನು||
ಚೆನ್ನಾಗಿದೆ ಸಾರ್.
ReplyDeleteಧನ್ಯವಾದಗಳು ಸಾರ್
ReplyDeleteಹೌದು,ಅವನು ಅಮೃತಾತ್ಮನೇ,
ReplyDeleteಚೆ೦ದದ ಗೀತೆ.
ನಮಸ್ಕಾರಗಳೊ೦ದಿಗೆ.
ಅನಿಸಿಕೆ ಮತ್ತು ಅನುಭೂತಿ ಮಿಳಿತ ಕವನ, ಚೆನ್ನಾಗಿದೆ, ಧನ್ಯವಾದಗಳು.
ReplyDeleteವೇದಾ೦ತದ ಸಾರವನ್ನು ಸು೦ದರವಾಗಿ ಸೆರೆಹಿದಿದೆದೆ ಶ್ರೀಧರ್ ನಿಮ್ಮ ಕವನ .ನಮ್ಮ ಶುಭಾಶಯಗಳು
ReplyDeleteಶ್ರೀಧರ್, ಮೆಚ್ಚುಗೆಯಾಯಿತು. ಇದೇ ಅರ್ಥ ಬರುವ ಕವನ ರಚಿಸುವ ಪ್ರಯತ್ನ ಮಾಡುತ್ತಿದ್ದಾಗ ನಿಮ್ಮ ಕವನದರ್ಶನವಾಯಿತು, ಮುದ ನೀಡಿತು.
ReplyDeleteಮಾಯೆಯ ಬದುಕ ಬೆಂಬತ್ತಿ ಸಾವಿಗಂಜುವವನಿಗೆ ಮಾರ್ಮಿಕವಾದ ಆಧ್ಯಾತ್ಮದ ತಿರುಳನ್ನು ಎಡೆನೀಡಿ ಕ್ಲೆಷೆ ಕಳೆವಲ್ಲಿ ಕವನ ಮಹತ್ತರವಾಗಿ ಹೊರಹೊಮ್ಮಿದೆ.
ReplyDelete