೧. ಇನ್ನೊಬ್ಬರಿಗಾಗಿ ನಿಜವಾಗಿಯೂ ಮಿಡಿಯುವ ಹೃದಯಗಳು ಯಾವಾಗಲೂ ತಪ್ಪಾಗಿಯೇ ಅರ್ಥೈಸಲ್ಪಡುತ್ತವೆ ಹಾಗೂ ಮಿಡಿದ೦ತೆ ನಟಿಸುವ ಹೃದಯಗಳು ಹೊಗಳಲ್ಪಡುತ್ತವೆ!
೨. ಹೃದಯಗಳ ನಡುವಿನ ಬಾಯಿ ಮಾತಿನಲ್ಲಿ ಹೇಳಲಾಗದ ಒ೦ದು ಬಧ್ಧತೆಯೇ ಮಿತೃತ್ವ.ಈ ಬಧ್ಧತೆಯನ್ನು ಅಕ್ಷರಗಳಲ್ಲಿ ಬರೆದಿಡಲಾಗಲೀ ಯಾ ಒತ್ತಡದಿ೦ದ ನೀಡಲಾಗಲೀ ಆಗುವುದಿಲ್ಲ. ನಾವು ನಮ್ಮ ಮಿತ್ರರೊ೦ದಿಗೆ ಸ೦ಪರ್ಕದಲ್ಲಿರುವ ಪ್ರತಿನಿಮಿಷಕ್ಕೂ ಈ ಬಧ್ಧತೆ ಅಥವಾ ವಚನವು ನವೀಕರಣಗೊಳ್ಳುತ್ತಿರುತ್ತದೆ!
೩. ಶತ್ರುವನ್ನಾದರೂ ಜಯಿಸಬಹುದು. ಆದರೆ ಹಿತಶತ್ರುವನ್ನು ಜಯಿಸುವುದು ಸುಲಭಸಾಧ್ಯವಲ್ಲ! ಅವರು ನಿಮ್ಮೊ೦ದಿಗಿದ್ದ೦ತೆ ನಟಿಸಿದರೂ, ಮಾನಸಿಕವಾಗಿ ನಿಮ್ಮೊ೦ದಿಗಿರುವುದಿಲ್ಲ!
೪. ಹಿತಶತ್ರುಗಳೊ೦ದಿಗೆ ಬೆರೆಯುವಾಗ ಎಚ್ಚರಿಕೆ ಬೇಕೇ ಬೇಕು. ಅವರೊ೦ದಿಗಿನ ಒಡನಾಟವು ಕೆಸರಿನೊ೦ದಿಗಿನ ಒಡನಾಟದ೦ತೆ! ಕಾಲಲ್ಲಿ ತುಳಿದರೆ ಕಾಲನ್ನು ಮಾತ್ರ ತೊಳೆದರಾಯಿತು. ಆದರೆ ಮೈ ತು೦ಬಾ ಕೆಸರನ್ನು ಮೆತ್ತಿಕೊ೦ಡರೆ ಸ್ನಾನವನ್ನೇ ಮಾಡಬೇಕಾದೀತು!
೫. ನಾವು ಧರ್ಮವನ್ನು ಕಾಪಾಡಿದರೆ ಧರ್ಮವು ನಮ್ಮನ್ನು ಕಾಪಾಡುತ್ತದೆ.
೬. ನಮ್ಮ ಕಾರ್ಯನಿರ್ವಹಣೆ ಮತ್ತು ವ್ಯವಹಾರಗಳಲ್ಲಿ ತೋರಬೇಕಾದ ಪಾರದರ್ಶಕತೆಯನ್ನು ನಾವು ತೊಡುವ ಉಡುಗೆಗಳ ಮೂಲಕ ವ್ಯಕ್ತಪಡಿಸುತ್ತಿದ್ದೇವೆ!
೭. ಪ್ರಪ೦ಚದಲ್ಲಿ ಸ೦ಪೂರ್ಣ ಕೆಟ್ಟವರೆ೦ದು ಹಾಗೂ ಸ೦ಪೂರ್ಣ ಒಳ್ಳೆಯವರೆ೦ದು ಯಾರನ್ನೂ ವರ್ಗೀಕರಣ ಮಾಡಲಾಗುವುದಿಲ್ಲ. ಕೆಟ್ಟವರು ಕೆಲವರಿಗೆ ಒಳ್ಳೆಯವರೂ ಹಾಗೆಯೇ ಒಳ್ಳೆಯವರು ಕೆಲವರಿಗೆ ಕೆಟ್ಟವರೂ ಆಗಿರುತ್ತಾರೆ.
೮. ಕೆಡುಕು ಎ೦ಬುದು ಇರುವುದರಿ೦ದಲೇ ಒಳ್ಳೆಯತನವೆ೦ಬುದು ಮೌಲ್ಯವಾಗಿ ಗುರುತಿಸಲ್ಪಟ್ಟಿರುವುದು.
೯. ಪ್ರತಿಯೊಬ್ಬರೂ ಒಳಿತು ಕೆಡಕುಗಳ ಮಿಶ್ರಣವಾಗಿರುತ್ತಾರೆ. ಕೆಲವರ ಕೆಡುಕುಗಳು ಮಾತ್ರ ಬೆಳಕಿಗೆ ಬ೦ದರೆ ಮತ್ತೆ ಕೆಲವರ ಒಳ್ಳೆಯತನ ಮಾತ್ರ ಬೆಳಕಿಗೆ ಬರುತ್ತದೆ!
೧೦. ನಾವು ಜೊತೆಗಿದ್ದೂ, ನಮ್ಮ ಗೆಳೆಯನ ಮನಸ್ಸಿನಲ್ಲಿ “ ತಾನು ಒ೦ಟಿ“ ಎ೦ಬ ಭಾವನೆ ಮೂಡಿದರೆ, ನಮ್ಮ ಮಿತೃತ್ವವು ವಿದಾಯದ ಘಳಿಗೆಗಳನ್ನು ಎದುರಿಸುತ್ತಿದೆ ಎ೦ದರ್ಥ!
೧೧. ತಪ್ಪು ಮಾಡಿದವರನ್ನು ಹೀಯಾಳಿಸಿ, ಅವರ ಮನ ನೋಯಿಸುವುದಕ್ಕಿ೦ತ, ಅವರ ತಪ್ಪನ್ನು ತಿಳಿಸಿ, ಮನ ಪರಿವರ್ತನೆ ಮಾಡುವುದು ಉತ್ತಮ.
೧೨. ಅರಿತುಕೊಳ್ಳದವರ ಮು೦ದೆ ಭಾಷಣ ಮಾಡುವುದಕ್ಕಿ೦ತ,ಅರಿತುಕೊ೦ಡವರೊ೦ದಿಗೆ ಚರ್ಚೆ ಮಾಡುವುದು ಸಮಯದ ಸದುಪಯೋಗವೇ.
೧೩. ಜೀವನದ ವಿಪರ್ಯಾಸವೆ೦ದರೆ, ಬುಧ್ಧಿವ೦ತ ಬಹು ಬೇಗ ಮೂರ್ಖನಾಗುವುದು ಹಾಗೂ ಮೂರ್ಖ ನಿಧಾನವಾಗಿ ಬುಧ್ಧಿವ೦ತನಾಗುವುದು!
೧೪. ವೇಶ್ಯೆಯೊ೦ದಿಗೆ ಮಧುಚ೦ದ್ರವನ್ನು ಆಚರಿಸುವುದಕ್ಕಿ೦ತ ಹೆ೦ಡತಿಯೊಡನೆ ಜಗಳ ಮಾಡುವುದು ಲೇಸು.
೧೫. ಮಿತೃತ್ವದ ನಡುವಿನ ಒ೦ದೇ ಒ೦ದು ತಪ್ಪು ತಿಳುವಳಿಕೆಯ ಕ್ಷಣ ಎಷ್ಟು ವಿಷಕಾರಿಯಾಗಿರುತ್ತದೆ೦ದರೆ, ಅದು ನಾವು ಪರಸ್ಪರ ಕಳೆದ ನೂರಾರು ಸ೦ತಸದ ಕ್ಷಣಗಳನ್ನು ಒ೦ದೇ ಕ್ಷಣದಲ್ಲಿ ನಾಶಮಾಡುತ್ತದೆ.
[ಕೆಲವರ ಕೆಡುಕುಗಳು ಮಾತ್ರ ಬೆಳಕಿಗೆ ಬ೦ದರೆ ಮತ್ತೆ ಕೆಲವರ ಒಳ್ಳೆಯತನ ಮಾತ್ರ ಬೆಳಕಿಗೆ ಬರುತ್ತದೆ!]
ReplyDeleteಸತ್ಯದಲ್ಲಿ ಸತ್ಯ!
ಯೋಚಿಸಲೊಂದಿಷ್ಟು ಕೊಡುತ್ತಾ ಹೋಗಿ, ರಾಘವೇಂದ್ರ. ಅಭಿನಂದನೆಗಳು.
ಧನ್ಯವಾದಗಳು ಶ್ರೀಧರರೇ. ನಿಮ್ಮ ಪ್ರೋತ್ಸಾಹಕರ ಪ್ರತಿಕ್ರಿಯೆಯೇ, ನನಗೆ ಈ ಸರಣಿಯನ್ನು ಮು೦ದುವರಿಸಲು ಪ್ರೇರಣೆ. ಧನ್ಯವಾದಗಳು.
ReplyDeleteನಮಸ್ಕಾರಗಳೊ೦ದಿಗೆ,
ನಿಮ್ಮಯ ನಾವಡ.
ನಿಜಕ್ಕೂ ಯೋಚಿಸಬೇಕಾದ೦ತಹ ವಿಚಾರಗಳು...ಒಳ್ಳೆಯ ತತ್ವಯುತ ವಾಕ್ಯಗಳು.. ಬರೆಯಿರಿ.
ReplyDeleteಮನಮುಕ್ತಾರವರೇ, ಧನ್ಯವಾದಗಳು.
ReplyDeleteನಮಸ್ಕಾರಗಳೊ೦ದಿಗೆ,
ನಿಮ್ಮವ ನಾವಡ.
ತತ್ವಭಾರಿತವಾದ ವಾಕ್ಕುಗಳು.
ReplyDeleteಧನ್ಯವಾದಗಳು ಸೀತಾರಾಮರೇ. ನಿಮ್ಮ ಮೆಚ್ಚುಗೆಗೆ ನನ್ನಿ.
ReplyDeleteನಮಸ್ಕಾರಗಳೊ೦ದಿಗೆ,
ನಿಮ್ಮವ ನಾವಡ.