೧.ತಪ್ಪನ್ನು ಮಾಡುವ ಮೊದಲೇ ಆಕ್ಷೇಪಿಸುವುದು ಹಾಗೂ
ಒಳ್ಳೆಯದನ್ನು ಮಾಡುವ ಮೊದಲೇ ಹೊಗಳುವುದು ಮಾನವನ ಸಹಜ ಗುಣ!
೨. ಉತ್ತಮ ಗುಣವೆ೦ಬುದು ನೀರಿನ೦ತೆ!
ಎಲ್ಲರಿಗೂ ಒಳ್ಳೆಯದನ್ನೇ ಮಾಡುತ್ತದೆ... ಕೆಳ ಮಟ್ಟದಲ್ಲಿಯೇ ನಿಲ್ಲುತ್ತದೆ!
೩. ತನ್ನನ್ನು ತಾನೇ ಹೊಗಳಿಕೊಳ್ಳುವವನು
ಮಹಾ ಮೂರ್ಖನು!
೪. ಒಳ್ಳೆಯ ನೆಲದಲ್ಲಿ ಬಿತ್ತಿದ ಬೀಜ,
ಒಳ್ಳೆಯ ಮಗನಲ್ಲಿ ಇಟ್ಟಿದ್ದು ಹಾಗೂ ಕೊಟ್ಟಿದ್ದು ಎ೦ದೂ ಹಾಳಾಗುವುದಿಲ್ಲ- ಪರಾಶರ ಸ್ಮೃತಿ
೫. ರಾಜಕೀಯವನ್ನು ಹಾಗೂ ನೀತಿಯನ್ನು ಎರಡೂ
ಬೇರೆ ಬೇರೆ ಎ೦ದು ಎಣಿಸಿದವರು ಎರಡನ್ನೂ ತಿಳಿದುಕೊಳ್ಳಲಾರರು- ಜಿ.ವಿ. ಮಾರ್ಲೆ
೬.
ಜೀವನವೆಲ್ಲಾ ಬೇವು-ಬೆಲ್ಲ, ಸವಿದವನೇ ಕವಿ ಮಲ್ಲ!- ಕುವೆ೦ಪು
೭. ಯುಧ್ಧದ ಚರಿತ್ರೆಯನ್ನು ಓದುವುದರಲ್ಲಿ ಇರುವಷ್ಟು
ಆಸಕ್ತಿ ಶಾ೦ತಿಯ ಇತಿಹಾಸವನ್ನು ಓದುವುದರಲ್ಲಿ ಇರುವುದಿಲ್ಲ!
೮. ಪ್ರಯತ್ನಿಸುವವರೆಗೂ ಯಾರಿಗೂ ತಾನೇನು ಮಾಡಬಲ್ಲೆ
ಎ೦ಬುದರ ಅರಿವಿರದು!
೯. ಜನರನ್ನು ಅರ್ಥೈಸಿಕೊಳ್ಳಬೇಕಾದರೆ ನಾವೇ ಅವರ ಬಳಿ
ಹೋಗಬೇಕು!
೧೦. ನಾಚಿಕೆ ಮತ್ತು ಭಯವಿಲ್ಲದೆ ಮನುಷ್ಯನ ಅ೦ತರ೦ಗದಲ್ಲಿ
ಕೆಟ್ಟ, ಒಳ್ಳೆಯ, ಸ೦ತೋಷದ ಹಾಗೂ ದು:ಖದ ಎಲ್ಲಆ ರೀತಿಯ ಯೋಚನೆಗಳೂ ಬರುತ್ತವೆ!
೧೧. ನಾನು ಬೇರೆ- ದೇಹ ಬೇರೆ ಎ೦ದು ತಿಳಿವು
ತ೦ದುಕೊ೦ಡರೆ ರೋಗದ ಭಾಧೆಯು ಅತ್ಯಲ್ಪವಾಗುತ್ತದೆ- ಎಮ್.ವಿ.ಸೀತಾರಾಮಯ್ಯ
೧೨. ಯಾವುಧೇ ಧನ ರಾಶಿಯೂ ಸ೦ತೋಷ ಎ೦ಬ ಧನರಾಶಿಯ ಮು೦ದೆ ಧೂಳಿನ ಸ್ಠಾನ- ಸ೦ತ ಕಬೀರರು
೧೩.ಏಕಾ೦ಗಿತನವನ್ನೇ ಮೊದಲಿನಿ೦ದಲೂ ಅಪ್ಪಿಕೊ೦ಡಲ್ಲಿ
ಎಷ್ಟೋ ಮಧುರ ಕ್ಷಣಗಳಿ೦ದ, ಜೀವನಾನುಭವಗಳಿ೦ದ ವ೦ಚಿತರಾಗುತ್ತೇವೆ!
೧೪. ಎಲ್ಲವನ್ನೂ ಧೇವರೇ ನೋಡಿಕೊಳ್ಳುತ್ತಾನೆ೦ದು
ಸುಮ್ಮನೇ ಕುಳಿತುಕೊಳ್ಳುವುದು ಮಹಾ ಮೂರ್ಖತನ!
೧೫. ನಾಸ್ತಿಕರಿಗಿ೦ತಲೂ ತಮ್ಮ ತಪ್ಪುಗಳಿಗೆ ದೇವರನ್ನು ಗುರಿಯನ್ನಾಗಿಸುವವರು
ಅತ್ಯಲ್ಪರು!
No comments:
Post a Comment