ಜೀವನ ಬುನಾದಿ -10
ಅಥರ್ವ ವೇದ ಭಕ್ತನ ಬಾಯಿಯಿಂದ ಪ್ರಭುವಿನ ಮುಂದೆ ಈ ಬೇಡಿಕೆಯನ್ನು ಮೂಡಿಸುತ್ತದೆ:
ಮೇಧಾಂ ಸಾಯಂ ಮೇಧಾಂ ಪ್ರಾತ್ರರ್ಮೇಧಾಂ ಮಧ್ಯಂದಿನಂ ಪರಿ|
ಮೇಧಾಂ ಸೂರ್ಯಸ್ಯ ರಶ್ಮಿಭರ್ವಚಸಾ ವೇಶಯಾಮಹೇ|| (ಅಥರ್ವ.6.108.5)
[ಸಾಯಂ] ಸಂಜೆ, [ಮೇಧಾಂ] ಬುದ್ಧಿಯನ್ನು [ಆವೇಶಯಾಮಹೇ] ಜೀವನಗಳಿಗೆ ಇಳಿಸಿಕೊಳ್ಳುತ್ತೇವೆ. [ಪ್ರಾತಃ] ಬೆಳಿಗ್ಗೆ [ಮೇಧಾಂ] ಬುದ್ಧಿಯನ್ನು ಜೀವನಗತಮಾಡಿಕೊಳ್ಳುತ್ತೇವೆ. [ಮಧ್ಯಂದಿನಂ ಪರಿ] ಮಧ್ಯಾಹ್ನದಲ್ಲಿಯೂ [ಮೇಧಾಂ] ಬುದ್ಧಿಶಕ್ತಿಯನ್ನೇ ತುಂಬಿಕೊಳ್ಳುತ್ತೇವೆ. [ಸೂರ್ಯಸ್ಯ ರಶ್ಮಿ ಭಿಃ] ಸೂರ್ಯನ ಕಿರಣಗಳೊಂದಿಗೆ [ವಚಸಾ] ವಿದ್ವಜ್ಜನರ ಉಪದೇಶ ವಚನಗಳಿಂದ [ಮೇಧಾಂ ಆವೇಶಯಾಮಹೇ] ಬುದ್ಧಿಯನ್ನು ಬಾಳಿಗೆ ಬೆಸೆದುಕೊಳ್ಳುತ್ತೇವೆ. ಬೇರೆ ಮತ-ಮತಾಂತರಗಳ ಶಾಸ್ತ್ರಗಳಿಗೂ, ಭಗವದ್ದತ್ತವಾದ ವೈಜ್ಞಾನಿಕ ಶಾಸ್ತ್ರಗಳಾದ ವೇದಗಳಿಗೂ ಇರುವ ವ್ಯತ್ಯಾಸವಿದೇ. ಭಕ್ತನು ಭಗವಂತನಲ್ಲಿ ಸ ಮೇ ಶ್ರದ್ಧಾಂ ಚ ಮೇಧಾಂ ಚ ಜಾತವೇದಾ| ಪ್ರ ಯಚ್ಛತು|| (ಅಥರ್ವ.19.64.1) [ಸ ಜಾತವೇದಾ] ಆ ಸರ್ವವ್ಯಾಪಕ ಸರ್ವಜ್ಞನಾದ ಭಗವಂತನು [ಮೇ] ನನಗೆ [ಶ್ರದ್ಧಾಂ ಚ ಮೇಧಾಂ ಚ ಪ್ರಯಚ್ಛತು] ಶ್ರದ್ಧೆಯನ್ನೂ ಬುದ್ಧಿಯನ್ನೂ ಕರುಣಿಸಲಿ - ಎಂದೇ ಬಿನ್ನಹ ಮಾಡಿಸುತ್ತದೆ. ಬುದ್ಧಿಸಂಗತವಾದ ವೇದಗಳು ಎಷ್ಟು ಸೊಗಸಾಗಿ ಶ್ರದ್ಧೆಗೆ ಸಲ್ಲಬೇಕಾದ ಸ್ಥಳವನ್ನು ನಿರೂಪಿಸುತ್ತದೆ ನೋಡಿರಿ.
///// ಆನೋ ಭದ್ರಾಃ ಕ್ರತವೋ ಯಂತು ವಿಶ್ವತಃ ////// ಕೃಣ್ವಂತೋ ವಿಶ್ವಮಾರ್ಯಂ //// //// ಮಾತಾ ಭೂಮಿಃ ಪುತ್ರೋಹಂ ಪೃಥಿವ್ಯಾಃ /////
Wednesday, July 28, 2010
ಮತ್ತೇನೂ ಬೇಡ..
ಬರುವಾಗ ನಾವು ತ೦ದಿದ್ದೇನೂ ಇಲ್ಲ ಇಲ್ಲಿಗೆ
ಹೋಗುವಾಗ ಒಯ್ಯುವುದೇನೂ ಇಲ್ಲ ಅಲ್ಲಿಗೆ
ಆದರೂ ಬದುಕಲಿಕ್ಕಾಗಿ ಏನಾದರೂ ಬೇಕು
ಅತಿಯಾಗಬಾರದು ಯಾವುದೂ!
ಪ್ರೀತಿಯಿರಲಿ,ನ೦ಬಿಕೆಯಿರಲಿ,
ನಾನು-ನನ್ನವರೆನ್ನದೆ ಎಲ್ಲರೂ
ನನ್ನವರೆ೦ಬ ವಿಶ್ವಾಸವಿರಲಿ
ಯಾರನ್ನೂ ಹೊತ್ತುಕೊಳ್ಳಲೂಬಾರದು
ಇಳಿಸಲೂ ಬಾರದು!
ಎಲ್ಲರೊಳೂ ಒ೦ದಾಗಿ ಸ್ವ೦ತಿಕೆಯ ಮೆರೆಯಬೇಕು,
ಬದುಕಿನ ಬ೦ಡಿಯ ನೊಗವ ಸಮನಾಗಿ ಎಳೆದು,
ಪರಸ್ಪರ ವಿಶ್ವಾಸದಲಿ ಒಟ್ಟಿಗೇ
ಉ೦ಡೆದ್ದು ಕೈತೊಳೆಯಬೇಕು!
ಸಮಪಾಲು-ಸಮಬಾಳು
ಹ೦ಚಿ ತಿನ್ನುವ ಸೌಭಾಗ್ಯ,
ಮುಖದಲೊ೦ದು ಸ೦ತಸದ ನಗು
ಬಾಯ್ತು೦ಬಾ ಮಾತು,
ತು೦ಬಿದ ಹೃದಯದ ಹಾರೈಕೆ
ಮತ್ತೇನು ಬೇಕು ಸ೦ತಸದ ನೆಲೆಗೆ,
ಬದುಕ ಕಟ್ಟಿಕೊಳ್ಳುವುದು ನಾವು
ನಮ್ಮ ಬೇಡಿಕೆಯ ಅರಿವು ನಮಗಿರಬೇಕು
ಮತ್ತೇನೂ ಬೇಡ,ಅಷ್ಟಿದ್ದರೆ ಸಾಕು!
Monday, July 26, 2010
ಏನಂತೆ? ? . . .! !
ಏನಂತೆ? ? . . .! !
ಏನಂತೆ? ಸೋತರೇನಂತೆ?
ಸೋಲೆಂಬುದೇನೆಂದು ತಿಳಿಯಿತಂತೆ!
ಗೆಲುವಿನ ದಾರಿಯದು ಕಂಡಿತಂತೆ!!
ಏನಂತೆ? ಬಿದ್ದರೇನಂತೆ?
ನೋವೆಂಬುದೇನೆಂದು ತಿಳಿಯಿತಂತೆ!
ನೋಡಿ ನಡೆಯಲು ಕಲಿತೆನಂತೆ!!
ಏನಂತೆ? ಹಸಿವಾದರೇನಂತೆ?
ದುಡಿದು ಉಣ್ಣಲು ಮಾರ್ಗವಂತೆ!
ಹಳಸಿದ ಅನ್ನವೂ ರುಚಿಯಂತೆ!!
ಏನಂತೆ? ದುಃಖವಾದರೇನಂತೆ?
ಸಂತೋಷದ ದಾರಿ ಸಿಕ್ಕಿತಂತೆ!
ಸುಖವೆಂಬುದೊಳಗೇ ಇದೆಯಂತೆ!!
ಏನಂತೆ? ತಪ್ಪಾದರೇನಂತೆ?
ನಡೆ ತಿದ್ದಿ ಸಾಗುವ ಮನಸಂತೆ!
ತಲೆ ಎತ್ತಿ ನಡೆಯುವ ಕನಸಂತೆ!
ಏನಂತೆ? ನಿಂದಿಸಿದರೇನಂತೆ?
ನಿಂದಕರ ಬಾಯಿ ಹೊಲಸಂತೆ!
ನಾನಾರೆಂದು ನನಗೆ ತಿಳಿಯಿತಂತೆ!!
ಏನಂತೆ? ಸೂರಿಲ್ಲದಿರೇನಂತೆ?
ಲೋಕವೆ ನನ್ನ ಮನೆಯಂತೆ!
ಬಹು ದೊಡ್ಡ ಮನೆಯೇ ನನ್ನದಂತೆ!!
ಏನಂತೆ? ದಿಕ್ಕಿಲ್ಲದಿರೇನಂತೆ?
ಜನರೆಲ್ಲ ನನ್ನ ಬಂಧುಗಳಂತೆ!
ಬಲು ದೊಡ್ಡ ಸಂಸಾರ ನನ್ನದಂತೆ!!
? ? ! !
ಏನಂತೆ? ಸೋತರೇನಂತೆ?
ಸೋಲೆಂಬುದೇನೆಂದು ತಿಳಿಯಿತಂತೆ!
ಗೆಲುವಿನ ದಾರಿಯದು ಕಂಡಿತಂತೆ!!
ಏನಂತೆ? ಬಿದ್ದರೇನಂತೆ?
ನೋವೆಂಬುದೇನೆಂದು ತಿಳಿಯಿತಂತೆ!
ನೋಡಿ ನಡೆಯಲು ಕಲಿತೆನಂತೆ!!
ಏನಂತೆ? ಹಸಿವಾದರೇನಂತೆ?
ದುಡಿದು ಉಣ್ಣಲು ಮಾರ್ಗವಂತೆ!
ಹಳಸಿದ ಅನ್ನವೂ ರುಚಿಯಂತೆ!!
ಏನಂತೆ? ದುಃಖವಾದರೇನಂತೆ?
ಸಂತೋಷದ ದಾರಿ ಸಿಕ್ಕಿತಂತೆ!
ಸುಖವೆಂಬುದೊಳಗೇ ಇದೆಯಂತೆ!!
ಏನಂತೆ? ತಪ್ಪಾದರೇನಂತೆ?
ನಡೆ ತಿದ್ದಿ ಸಾಗುವ ಮನಸಂತೆ!
ತಲೆ ಎತ್ತಿ ನಡೆಯುವ ಕನಸಂತೆ!
ಏನಂತೆ? ನಿಂದಿಸಿದರೇನಂತೆ?
ನಿಂದಕರ ಬಾಯಿ ಹೊಲಸಂತೆ!
ನಾನಾರೆಂದು ನನಗೆ ತಿಳಿಯಿತಂತೆ!!
ಏನಂತೆ? ಸೂರಿಲ್ಲದಿರೇನಂತೆ?
ಲೋಕವೆ ನನ್ನ ಮನೆಯಂತೆ!
ಬಹು ದೊಡ್ಡ ಮನೆಯೇ ನನ್ನದಂತೆ!!
ಏನಂತೆ? ದಿಕ್ಕಿಲ್ಲದಿರೇನಂತೆ?
ಜನರೆಲ್ಲ ನನ್ನ ಬಂಧುಗಳಂತೆ!
ಬಲು ದೊಡ್ಡ ಸಂಸಾರ ನನ್ನದಂತೆ!!
? ? ! !
ಯಾರು ?
ಚಿತ್ರ ಋಣ: ಅಂತರ್ಜಾಲ
ಯಾರು ?
ಸೌರಮಂಡಲದಲ್ಲಿ ಇರುವೆಲ್ಲ ಕಾಯಗಳ
ಗೌರವದಿ ಹಿಡಿದಿಟ್ಟು ನಡೆಸುವುದು ಯಾರು ?
ಪೌರುಷದಿ ಕುಂಟ ಕುರುಡಾದಿ ಹಲವರ ಸೃಜಿಸಿ
ರೌರವದ ನರಕವನು ಉಣಿಸುವರು ಯಾರು ?
ಬುದ್ಧಿಮಾಂದ್ಯರ ತಂದು ಬುದ್ಧಿವಂತರನಡುವೆ
ಇದ್ದುಬಿಡಿ ನೀವೆಂತ ಹುಟ್ಟಿಸುವರಾರು ?
ಎದ್ದೇಳಲಾಗದಾ ಪೋಲಿಯೋ ಹಬ್ಬಿಸುತ
ಒದ್ದಾಟ ಮೂಡಿಸುವ ಆ ಅದುವೆ ಯಾರು ?
ದೇಹದೊಳಗೊಂದೇನೋ ಕಾಣದುದನಿಳಿಬಿಟ್ಟು
ದಾಹ ತಣಿಸಿಕೊ ಎಂದು ಕಳಿಸಿದವರಾರು ?
'ಆಹಾ ಇದು ಏನು ಮಹಾ' ಹಾರಾಟ ಜೋರಾಗೆ
ವಾಹ ವಾ ಬಾ ಎಂದು ಕಿತ್ತವರು ಯಾರು ?
ಅಂಚಿರದ ಆಗಸವ ಕಟ್ಟಿನಿಲ್ಲಿಸುತಲ್ಲಿ
ಕಂಚು-ತಾಮ್ರಗಳನ್ನು ಕೊಟ್ಟವರು ಯಾರು?
ಮಂಚ ಮಾನಿನಿ ಮದ್ಯ ಮಾಂಸಾದಿಗಳ ತುಂಬಿ
ಸಂಚಿನಲಿ ಸಿಲುಕಿಸುತ ಬಂಧಿಸುವರಾರು?
ಬಿರುಗಾಳಿ ನೆರೆಗಳನು ಥರಥರದಿ ತಂದಿಡುತ
ಒರೆಹಚ್ಚಿ ಓರೆಯಲಿ ನೋಡುವುದದಾರು?
ತೆರೆಯೆಳೆದು ಹಲವಕ್ಕೆ ಮರುಮಾತಲೆಕ್ಕಿಸದೆ
ಅರಿವಿಡದೆ ಕರೆದೊಯ್ವ ಅಗೋಚರವಾರು?
ವೈದ್ಯರನು ಕಂಡು ನಸುನಕ್ಕು ತಾ ಮುಸುಕಿನಲಿ
ವೇದ್ಯವಾಗದ ಅವಧಿ ನೀಡುವವರಾರು?
ವಾದ್ಯಮೇಳಗಳಲ್ಲಿ ಖಾದ್ಯ ತೈಲಗಳಲ್ಲಿ
ಬಾಧ್ಯಸ್ಥವಾಗಿರುವ ಅಣುರೂಪವಾರು?
ಬಾಂಬು ಗರ್ನಾಲು ತೋಪು ತಪರಾಕಿಗಳ
ಕಾಂಬಕೈಯಲೆ ಕೊಟ್ಟು ಆಡಿಸುವರಾರು ?
ಸಾಂಬ ನಿನ್ನಯ ರೂಪ ಕಾಣುವೆನು ಕಣಕಣದಿ
ಮಾಂಬರದಿ ಕುಳಿತ ನೀನಲ್ಲದಿನ್ಯಾರು?
--ನಿಮ್ಮೊಡನೆ ವಿ.ಆರ್.ಭಟ್ ಮಾಲಿಕೆಯ ’ಹೀಗೊಂದು ಪ್ರಯತ್ನ’ ಸಂಕಲನದಿಂದ
Sunday, July 25, 2010
ನಮ್ಮ ಆಚರಣೆಗಳು-2
ಕೃಪೆ: ಕನ್ನಡ ಆಡಿಯೋ ಡಾಟ್ಕಾಮ್
ವೇದೋಕ್ತ ಜೀವನ ಪಥ
ಜೀವನ ಬುನಾದಿ -9
ವೈಜ್ಞಾನಿಕ ಪರಿಪಾಟಿಯ ಪ್ರಬಲ ಪೋಷಕಗಳಾದ ವೇದಗಳು ಅಂಧವಿಶ್ವಾಸಕ್ಕೆ, ಕಣ್ಣುಮುಚ್ಚಿ ನಡೆಯುವ ಅಂಧಪರಂಪರೆಗೆ ಘೋರವಿರೋಧಿಗಳಾಗಿವೆ. ಶ್ರದ್ಧೆಯ ಶತ್ರು ವೇದಗಳಲ್ಲ. ವೇದಾನುಯಾಯಿಗಳ ಹೃದಯಾಂತರಾಳದಿಂದ ವೇದಗಳು ಈ ಪ್ರಾರ್ಥನೆಯನ್ನು ಹೊರಡಿಸುತ್ತವೆ:
ಶ್ರದ್ಧಾಂ ಪ್ರಾತರ್ಹವಾಮಹೇ ಶ್ರದ್ಧಾಂ ಮಧ್ಯಂದಿನಂ ಪರಿ|
ಶ್ರದ್ಧಾಂ ಸೂರ್ಯಸ್ಯ ನಿಮೃಚಿ ಶ್ರದ್ಧೇ ಶ್ರದ್ಧಾಪಯೇಹ ನಃ|| (ಋಕ್.10.151.5)
[ಪ್ರಾತಃ] ಬೆಳಗಿನ ಹೊತ್ತು {ಶ್ರದ್ಧಾಂ ಹವಾಮಹೇ] ಶ್ರದ್ಧೆಯನ್ನು ಆಹ್ವಾನಿಸುತ್ತೇವೆ. [ಮಧ್ಯಂದಿನಂ ಪರಿ] ನಡುಹಗಲಿನಲ್ಲಿಯೂ [ಶ್ರದ್ಧಾಂ] ಶ್ರದ್ಧೆಯನ್ನು ಆಹ್ವಾನಿಸುತ್ತೇವೆ. [ಸೂರ್ಯಸ್ಯ ನಿಮೃಚಿ] ಸೂರ್ಯನ ಅಸ್ತಕಾಲದಲ್ಲಿಯೂ [ಶ್ರದ್ಧಾಂ] ಶ್ರದ್ದೆಯನ್ನೇ ಆವಾಹನೆ ಮಾಡುತ್ತೇವೆ. [ಶ್ರದ್ಧೇ] ಓ ಶ್ರದ್ಧೇ! [ಇಹ] ಈ ಜಗತ್ತಿನಲ್ಲಿ [ನ ಶ್ರದ್ಧಾಪಯ] ನಮ್ಮನ್ನು ಶ್ರದ್ಧಾನ್ವಿತರನ್ನಾಗಿ ಮಾಡು. ಶ್ರದ್ಧೆ ಬೇಕು. ಆದರೆ ವೈಜ್ಞಾನಿಕವಾದ ದೃಷ್ಟಿಯನ್ನೇ ಬೆಳೆಸಿಕೊಳ್ಳಬೇಕೆಂದು ಬೋಧಿಸುವ ವೇದಗಳು, ಬುದ್ಧಿಯ, ಮೇಧಾಶಕ್ತಿಯ ಬೆಂಬಲವಿಲ್ಲದಿದ್ದರೆ ಆ ಶ್ರದ್ಧೆ ಅಂಧವಿಶ್ವಾಸವಾಗಿ ಮಾರ್ಪಡುವುದರಲ್ಲಿ ವಿಳಂಬವಾಗದೆಂಬುದನ್ನು ಬಲ್ಲವು.
ವೈಜ್ಞಾನಿಕ ಪರಿಪಾಟಿಯ ಪ್ರಬಲ ಪೋಷಕಗಳಾದ ವೇದಗಳು ಅಂಧವಿಶ್ವಾಸಕ್ಕೆ, ಕಣ್ಣುಮುಚ್ಚಿ ನಡೆಯುವ ಅಂಧಪರಂಪರೆಗೆ ಘೋರವಿರೋಧಿಗಳಾಗಿವೆ. ಶ್ರದ್ಧೆಯ ಶತ್ರು ವೇದಗಳಲ್ಲ. ವೇದಾನುಯಾಯಿಗಳ ಹೃದಯಾಂತರಾಳದಿಂದ ವೇದಗಳು ಈ ಪ್ರಾರ್ಥನೆಯನ್ನು ಹೊರಡಿಸುತ್ತವೆ:
ಶ್ರದ್ಧಾಂ ಪ್ರಾತರ್ಹವಾಮಹೇ ಶ್ರದ್ಧಾಂ ಮಧ್ಯಂದಿನಂ ಪರಿ|
ಶ್ರದ್ಧಾಂ ಸೂರ್ಯಸ್ಯ ನಿಮೃಚಿ ಶ್ರದ್ಧೇ ಶ್ರದ್ಧಾಪಯೇಹ ನಃ|| (ಋಕ್.10.151.5)
[ಪ್ರಾತಃ] ಬೆಳಗಿನ ಹೊತ್ತು {ಶ್ರದ್ಧಾಂ ಹವಾಮಹೇ] ಶ್ರದ್ಧೆಯನ್ನು ಆಹ್ವಾನಿಸುತ್ತೇವೆ. [ಮಧ್ಯಂದಿನಂ ಪರಿ] ನಡುಹಗಲಿನಲ್ಲಿಯೂ [ಶ್ರದ್ಧಾಂ] ಶ್ರದ್ಧೆಯನ್ನು ಆಹ್ವಾನಿಸುತ್ತೇವೆ. [ಸೂರ್ಯಸ್ಯ ನಿಮೃಚಿ] ಸೂರ್ಯನ ಅಸ್ತಕಾಲದಲ್ಲಿಯೂ [ಶ್ರದ್ಧಾಂ] ಶ್ರದ್ದೆಯನ್ನೇ ಆವಾಹನೆ ಮಾಡುತ್ತೇವೆ. [ಶ್ರದ್ಧೇ] ಓ ಶ್ರದ್ಧೇ! [ಇಹ] ಈ ಜಗತ್ತಿನಲ್ಲಿ [ನ ಶ್ರದ್ಧಾಪಯ] ನಮ್ಮನ್ನು ಶ್ರದ್ಧಾನ್ವಿತರನ್ನಾಗಿ ಮಾಡು. ಶ್ರದ್ಧೆ ಬೇಕು. ಆದರೆ ವೈಜ್ಞಾನಿಕವಾದ ದೃಷ್ಟಿಯನ್ನೇ ಬೆಳೆಸಿಕೊಳ್ಳಬೇಕೆಂದು ಬೋಧಿಸುವ ವೇದಗಳು, ಬುದ್ಧಿಯ, ಮೇಧಾಶಕ್ತಿಯ ಬೆಂಬಲವಿಲ್ಲದಿದ್ದರೆ ಆ ಶ್ರದ್ಧೆ ಅಂಧವಿಶ್ವಾಸವಾಗಿ ಮಾರ್ಪಡುವುದರಲ್ಲಿ ವಿಳಂಬವಾಗದೆಂಬುದನ್ನು ಬಲ್ಲವು.
Subscribe to:
Posts (Atom)