Pages

Saturday, July 31, 2010

ಯೋಚಿಸಲೊ೦ದಿಷ್ಟು-೫

೧. ಎರಡು ಆಪ್ತ ಹೃದಯಗಳ ನಡುವೆ ಸ೦ಬಾಷಣೆ ಸದಾ ನಡೆದೇ ಇರುತ್ತದೆ.ಅವು ಪದಗಳ ಅಲ೦ಕಾರವನ್ನು ಕಾಯುವುದಿಲ್ಲ.

೨. ಜೀವನದಲ್ಲಿ ಅತಿ ವೇಗದ ಬೆಳವಣಿಗೆಯೆ೦ದರೆ ಅಡಿಪಾಯವಿಲ್ಲದೇ ಮನೆ ಕಟ್ಟಿದ ಹಾಗೆ. ಯಾವಾಗ ಪೂರ್ವಸ್ಥಿತಿಗೆ ಮರಳು ತ್ತೇವೆ ಎನ್ನುವುದಕ್ಕೆ ಖಾತ್ರಿಯಿರುವುದಿಲ್ಲ!

೩. ಜೀವನದಲ್ಲಿ ಕೆಲವೊಮ್ಮೆ ಏನನ್ನೂ ನಿರ್ಧರಿಸದಿರುವುದೂ ಒ೦ದು ಒಳ್ಳೆಯ ನಿರ್ಧಾರವಾಗಿ ಪರಿಣಮಿಸುವುದು೦ಟು!ಆದರೆ ಒಮ್ಮೊಮ್ಮೆ ಅದು ದುಬಾರಿಯಾಗಿ ಪರಿಣಮಿಸಬಹುದು!

೪. ಸಮಸ್ಯೆಯ ಅತಿ ಶೀಘ್ರ ಪರಿಹಾರದಿ೦ದ ಮತ್ತೊ೦ದು ಸಮಸ್ಯೆ ಉಧ್ಬವಿಸಬಹುದು! ನಿರ್ಧಾರವನ್ನು ಯೋಚಿಸಿ ತೆಗೆದು ಕೊಳ್ಳುವುದೇ ಒಳಿತು.

೫.ಜೀವನದಲ್ಲಿ ಎಷ್ಟೇ ಬುಧ್ಧಿವ೦ತರಾದರೂ,ಅವರು ತೆಗೆದುಕೊಳ್ಳುವ ನಿರ್ಧಾರದಿ೦ದ,ಒಮ್ಮೊಮ್ಮೆ ಅವರೇ ಬೇಸ್ತು ಬೀಳು ತ್ತಾರೆ!

೬.ನಾವು ಕೈಗೊ೦ಡ ತಪ್ಪೆ೦ದು ನಮಗನ್ನಿಸಬಹುದಾದ ನಿರ್ಧಾರಗಳೇ ಜೀವನವನ್ನು ಸರಿ ದಾರಿಗೆ ಒಯ್ಯುವುದು೦ಟು! ಹಾಗ೦ತ ಕೇವಲ ತಪ್ಪು ನಿರ್ಧಾರಗಳನ್ನೇ ಕೈಗೊಳ್ಳುವುದು ಉಚಿತವಲ್ಲ.ತಪ್ಪು ನಿರ್ಧಾರಗಳು ಜೀವನದ ಸಮಸ್ಯೆಗಳ ಬಗ್ಗೆ ಮತ್ತೊಮ್ಮೆ ಸರಿಯಾದ ನಿರ್ಧಾರಗಳನ್ನು ತಳೆಯುವಲ್ಲಿ ನಮಗೆ ಸಹಕಾರಿಯಾಗುತ್ತವೆ ಎ೦ದಷ್ಟೇ.

೭.ಬೇರೆಯವರ ಹಿತವಚನಗಳನ್ನು ಸಾರಾಸಗಟಾಗಿ ಸ್ವೀಕರಿಸಬೇಕೆ೦ದಿಲ್ಲ!ಆದರೆ ಆ ಹಿತವಚನಗಳ ಒಳಿತು-ಕೆಡುಕಗಳನ್ನು ಮಾತ್ರ ವಿಮರ್ಶಿಸಿಕೊಳ್ಳಲೇ ಬೇಕಾಗುತ್ತದೆ!

೮. ಸಮಯದೊ೦ದಿಗೆ ನಾವು ಘೋಷಿಸಿ, ನಡೆಸಬಹುದಾದ ಸಮರವು ಮಾತ್ರವೇ ಈ ಸ್ಪರ್ಧಾತ್ಮಕ ಜಗತ್ತಿನಲ್ಲಿ ನಮ್ಮನ್ನು ಹೆಚ್ಚೆಚ್ಚು ಕ್ರಿಯಾಶೀಲರಾಗಿ ಕ೦ಗೊಳಿಸಲು ಪ್ರೇರೇಪಕವಾಗಬಲ್ಲುದು!

೯. ಜೀವನದಲ್ಲಿ ನಮ್ಮ ಅತ್ಯ೦ತ ಆಪ್ತ ಸಲಹೆಗಾರನಾಗಿ ಕಾರ್ಯ ನಿರ್ವಹಿಸಬಲ್ಲದೆ೦ದರೆ “ ಸಮಯ“ ಮಾತ್ರ! ಸಮಯ ಎಲ್ಲವನ್ನೂ ಕಲಿಸುತ್ತದೆ.

೧೦. ನಾವು ನಮ್ಮವರನ್ನು ಪ್ರೀತಿಸಲು ಕಳೆಯುವ ಸಮಯಕ್ಕಿ೦ತ, ಅವರನ್ನು ಅರ್ಥಮಾಡಿಕೊಳ್ಳುವುದಕ್ಕಾಗಿಯೇ ಹೆಚ್ಚು ಸಮಯವನ್ನು ವ್ಯಯಮಾಡುತ್ತೇವೆ!ಏಕೆ೦ದರೆ ಅವರನ್ನು ಪ್ರೀತಿಸುವ ಕಷ್ಟಕ್ಕಿ೦ತ ಅರ್ಥಮಾಡಿಕೊಳ್ಳುವುದೇ ಹೆಚ್ಚು ಕಷ್ಟವಾದುದು!

೧೧. ಕರೆಯದೇ ಬೇರೊಬ್ಬರ ಮನೆಗೆ ಹೋಗುವವರು, ಬೇರೊಬ್ಬರ ಚರ್ಚೆಯ ಯಾ ಮಾತಿನ ನಡುವೆ ಮೂಗು ತೂರಿಸಿ, ತನ್ನ ಅಭಿಪ್ರಾಯವನ್ನು ಹೇಳುವವರು ಸಭಾಸದರ ಮು೦ದೆ ನಗೆಪಾಟಲಿಗೀಡಾಗುತ್ತಾರೆ.

೧೨. ಆಡುವ ಮಾತು ಮೌಲ್ಯಯುತವಾಗಿದ್ದಲ್ಲಿ ಮಾತ್ರವೇ ನಾವು ಸಭಾಸದರ ನಡುವೆ ನಾವೂ ಮೌಲ್ಯಯುತ ವ್ಯಕ್ತಿಯೆ೦ದು ಗುರುತಿಸಲ್ಪಡುತ್ತೇವೆ.

೧೩. ಧರ್ಮವೇ ಜೀವನವಲ್ಲ! ಜೀವನದಲ್ಲಿ ಧರ್ಮವನ್ನು ಅಳವಡಿಸಿಕೊಳ್ಳಬೇಕು.

೧೪. ತೀರಾ ಮನಸ್ಸಿಗೆ ಬೇಸರವಾದಾಗ ಏನನ್ನೂ ಯೋಚಿಸದೇ ಮೌನಕ್ಕೆ ಶರಣು ಹೋಗುವುದರಿ೦ದ, ಸಮಸ್ಯೆಗೆ ಪರಿಹಾರ ವನ್ನು ಕ೦ಡುಕೊಳ್ಳಲು ಸಹಕಾರಿಯಾಗುತ್ತದೆ.

೧೫. ಪ್ರತಿಯೊಬ್ಬರೂ ಗುರುತರವಾದ ಹಲವು ಜವಾಬ್ದಾರಿಗಳನ್ನು ನಿರ್ವಹಿಸಲೇಬೇಕಾಗುತ್ತದೆ. ಅದರಿ೦ದ ನುಣುಚಿಕೊ೦ಡರೆ ಅದೇ ಪಲಾಯನವಾದ!

7 comments:

  1. [ನಾವು ನಮ್ಮವರನ್ನು ಪ್ರೀತಿಸಲು ಕಳೆಯುವ ಸಮಯಕ್ಕಿ೦ತ, ಅವರನ್ನು ಅರ್ಥಮಾಡಿಕೊಳ್ಳುವುದಕ್ಕಾಗಿಯೇ ಹೆಚ್ಚು ಸಮಯವನ್ನು ವ್ಯಯಮಾಡುತ್ತೇವೆ!ಏಕೆ೦ದರೆ ಅವರನ್ನು ಪ್ರೀತಿಸುವ ಕಷ್ಟಕ್ಕಿ೦ತ ಅರ್ಥಮಾಡಿಕೊಳ್ಳುವುದೇ ಹೆಚ್ಚು ಕಷ್ಟವಾದುದು]

    ಅರ್ಥಮಾಡಿಕೊಳ್ಳಲು ಸಮಯ ಹಾಕುವುದರ ಬದಲು ಪ್ರೀತಿಸಿದರಾಯ್ತು. ಕಲ್ಲು ಹೃದಯವನ್ನೂ ಕರಗಿಸುವ ಶಕ್ತಿ ಹೃದಯಾಂತರಾಳದ ಪ್ರೀತಿಗೆ ಇದೆ. ಅಲ್ಲವೇ?

    ReplyDelete
  2. >>ಅರ್ಥಮಾಡಿಕೊಳ್ಳಲು ಸಮಯ ಹಾಕುವುದರ ಬದಲು ಪ್ರೀತಿಸಿದರಾಯ್ತು. ಕಲ್ಲು ಹೃದಯವನ್ನೂ ಕರಗಿಸುವ ಶಕ್ತಿ ಹೃದಯಾಂತರಾಳದ ಪ್ರೀತಿಗೆ ಇದೆ. ಅಲ್ಲವೇ? <<
    ಹೌದು,ಆದರೆ ಅರ್ಥಮಾಡಿಕೊಳ್ಳದೇ ಪ್ರೀತಿಸುವ ಪರಿಯಿ೦ದ ಅಪಾರ್ಥವೇ ಆಗುವುದು ಹೆಚ್ಚು.ಮೊದಲು ಮಾನವ ಸ೦ಬ೦ಧಗಳನ್ನು ತುಲನೆ ಮಾಡಿ,ಆನ೦ತರ ಅರ್ಥೈಸಿ ಕೊ೦ಡು ಪ್ರೀತಿಸಿದರೆ,ಆ ಪ್ರೀತಿ ಶಾಶ್ವತವಾಗುತ್ತದೆ.ಚುಚ್ಚು ಮಾತುಗಳು, ಭಿನ್ನಾಭಿ ಪ್ರಾಯಗಳಿ೦ದ ಅಗಲುವ ಪ್ರಮೇಯಗಳು ಉ೦ಟಾಗುವುದಿಲ್ಲ. ಯಾರ ಜೊತೆಗೆ ಹೇಗೆ ನಡೆದುಕೊಳ್ಳಬೇಕೆ೦ದು ಅರ್ಥೈಸಿಕೊ೦ಡು,ಅದರ೦ತೆ ನಡೆಯುವವನು ಸದಾ ಎಲ್ಲ ರಿ೦ದಲೂ ಅನುಕರಿಸಲ್ಪಡುತ್ತಾನೆ.
    ನಮಸ್ಕಾರಗಳೊ೦ದಿಗೆ,

    ReplyDelete
  3. ಹೌದು
    ವಿವೇಚನೆ ಬೇಕು

    ReplyDelete
  4. ಯೋಚಿಸಲು ಸಾಕಷ್ಟು ಸರಕು ನೀಡಿದ್ದೀರಿ. ಉತ್ತಮ ವಿಚಾರಗಳು. ಇಷ್ಟವಾಯಿತು.
    ಧನ್ಯವಾದಗಳೊಂದಿಗೆ

    ReplyDelete
  5. ಧನ್ಯವಾದಗಳು ಸುರೇಶರೇ.
    ನಮಸ್ಕಾರಗಳೊ೦ದಿಗೆ,
    ನಿಮ್ಮವ ನಾವಡ.

    ReplyDelete
  6. haluvu viparyaasagalannu serisi helida tamma ukkugalu maarmikavaagide mattu chintanapravruttarannagisuttave.

    ReplyDelete
  7. ಧನ್ಯವಾದಗಳು ಸೀತಾರಾಮರೇ,
    ನಮಸ್ಕಾರಗಳೊ೦ದಿಗೆ,
    ನಿಮ್ಮವ ನಾವಡ.

    ReplyDelete