Pages

Saturday, March 31, 2012

ಧರೆಯ ಬದುಕೇನದರ ಪರಿಯೇನು - ವೇದಸುಧೆ » Vedasudhe

27 ನೇ ಪದ್ಯದಲ್ಲಿ ಜೀವನದ ಗುರಿಯ ಬಗ್ಗೆ  ಪ್ರಶ್ನೆ ಹಾಕಿಕೊಳ್ಳುವ ಡಿ.ವಿ.ಜಿ ಯವರು ಮುಂದೆ 271 ನೇ ಪದ್ಯದಲ್ಲಿ ಅದಕ್ಕೆ ಉತ್ತರವನ್ನೂ ಸಹ ಕೊಟ್ಟಿದ್ದಾರೆ.ಕೆಳಗಿನ ಕೊಂಡಿಯಲ್ಲಿ ವ್ಯಾಖ್ಯಾನವನ್ನು ಕೇಳಿ


ಧರೆಯ ಬದುಕೇನದರ ಪರಿಯೇನು - ವೇದಸುಧೆ » Vedasudhe





ಧರೆಯ ಬದುಕೇನದರ ಗುರಿಯೇನು ಫಲವೇನು?
ಬರಿ ಬಳಸು ಬಡಿದಾಟ ಬರಿ ಪರಿ ಭ್ರಮಣೆ||
ತಿರಿತಿರುಗಿ ಹೊಟ್ಟೆ ಹೊರಕೊಳುವ ಮೃಗ ಖಗಕ್ಕಿಂತ
ನರನು ಸಾಧಿಪುದೇನು ಮಂಕುತಿಮ್ಮ|| 27||

ವ್ಯರ್ಥವೀ ಜೀವನದ ಬಡಿದಾಟವೆನ್ನದಿರು|
ಅರ್ಥವಹುದದು ನಿನಗೆ ಪೂರ್ಣ ದರ್ಶನದಿಂ||
ನರ್ತಿಪನು ಜಡಜೀವರೂಪಂಗಳಲಿ ಬೊಮ್ಮ|
ಪೂರ್ತಿಯಿದನರಿಯೆ ಸೊಗ ಮಂಕುತಿಮ್ಮ||271||

ಸ್ಥಾನದ ಅರಿವು - ವೇದಸುಧೆ » Vedasudhe


ಧ್ವನಿಯನ್ನು ಕೇಳಲು.....ಕೆಳಗಿನ ಕೊಂಡಿ ಕ್ಲಿಕ್ಕಿಸಿ

ಸ್ಥಾನದ ಅರಿವು - ವೇದಸುಧೆ » Vedasudhe





ಕಟ್ಟಡದ ಪರಿಯನಿಟ್ಟಿಗೆಯೆಂತು ಕಂಡೀತು?
ಗಟ್ಟಿ ನಿಲದದು ಬೀಳೆ    ಗೋಡೆ ಬಿರಿಯುವುದು
ಸೃಷ್ಟಿಕೋಟೆಯಲಿ ನೀನೊಂದಿಟ್ಟಿಗೆಯು
ಸೊಟ್ಟಾಗೆ ಪೆಟ್ಟು ತಿನ್ನುವೆ ಜೋಕೆ-ಮಂಕುತಿಮ್ಮ||

Friday, March 30, 2012




ಸತ್ಯವೂ,   ಮುಕ್ತವೂ   ಸುಂದರವೂ  




ಒಂದು ದಿನದ ಬದುಕೇ ಬಾಳಲ್ಲ
ಪ್ರತಿಕ್ಷಣವು ಬದುಕು ಅಮೂಲ್ಯ
ಕಳೆದ ನಿನ್ನೆ ಇಂದಿಗೆ ಪ್ರಸ್ತುತ
ಇಂದಿನ ಘಳಿಗೆ ರಸಮಯವೆಂತಾದರೆ
ಕಾಣುವ ನಾಳೆ ವೈವಿಧ್ಯಮಯ.


ಬಾಳು   ಭರವಸೆಯ ಪ್ರತೀಕ
ನಿರಾಸೆಯ ಗೂಡಲ್ಲ.  ನಡೆವ ಹಾದಿ
ಹೂವಿನ ಹಾಸಿಗೆಯಲ್ಲ....ಸರಿ.
ಮುಳ್ಳಿನ ಹಾದಿಯೇ ಎಲ್ಲವು ಅಲ್ಲ.
ದಾರಿಗುಂಟ ಕಲ್ಲುಮುಳ್ಳುಗಳ ಮಧ್ಯೆ
ಸುಂದರ ಕಾಡು ಹೂವು, ಹುಲ್ಲಿನ ಹಾಸೂ
ಮುದನೀದಲು ಕಾದಿದೆ,  ಗಮನಿಸಬೇಕು...ಅಷ್ಟೇ


ನಾಮಪದದಷ್ಟೇ ಕ್ರಿಯಾಪದವು ಮುಖ್ಯ ನೆಮ್ಮದಿಗೆ.
ನಾನು ಬೆಳೆದೆ, ಓದಿದೆ, ಕಲಿತೆ, ದುಡಿದೆ ಎನ್ನುವ
ಗತಕಾಲದ ವೈಭವಕಿಂತ ........  ನಾನು
ಬೆಳೆಯುತ್ತಿದ್ದೇನೆ, ಓದುತ್ತಿದ್ದೇನೆ, ಕಲಿಯುತ್ತಿದ್ದೇನೆ,
ದುಡಿಯುತ್ತಿದ್ದೇನೆ ಎನ್ನುವ  ವಿನಯ
ಸುಪ್ತ ಅಹಂಕಾರದ ಪ್ರತಿಷ್ಠೆಯನ್ನು ಮೆಟ್ಟಿ ನಿಲ್ಲುತ್ತದೆ


ಒಂದು ಹಂತದಲಿ......ಬದುಕಿಗೆ ಇಷ್ಟು ಸಾಕು ಎನಿಸಬೇಕು
ಲಭ್ಯವಾದುದರಲ್ಲೇ  ಸಂತೋಷವ ತುಂಬಿ,
ಬಾರದುದಕೆ ಕಾಯದೆ , ಸಿಗದುದಕೆ ವಿಷಾದಿಸದೆ,
ಸಂತಸದೆ ಬದುಕುವ ಬಗೆಯೇ ತೃಪ್ತಿ.
ಪದೋನ್ನತಿ ಬೇಡವೆಂದೇನೋ ಅಲ್ಲ ಅದಕಾಗಿ
ಕೋಪ ತಾಪಗಳಿಲ್ಲ,  ಬೇಡದ ಗೊಣಗಾಟವಿಲ್ಲ.


ಸಮೃದ್ಧವಾದ ಈ  ಜಗತ್ತಿನಲಿ
ವಿಶಾಲತೆ,  ಗಹನತೆಗಳು ಅನೇಕವಿದೆ.
ಕೊರತೆಗಳು ನಮ್ಮ ದೃಷ್ಟಿ ದೋಷ.
ಎಲ್ಲವೂ ಇಲ್ಲೇ ಇದೆಯೆನ್ನುವ ಪ್ರಯತ್ನಕ್ಕೆ
ಸುಲಭದ   ದಾರಿ ಹತ್ತಾರು.


ಭಗವಂತನ ದಿವ್ಯಾನುಗ್ರಹ ಈ ದೇಹ.
ಮನಸಿನ ಆರೋಗ್ಯ ದೇಹದ ಪ್ರತಿರೂಪ,
ದಿನನಿತ್ಯದ ಬದುಕು ನಾವು ಬೆಳೆಯುವ ಪರಿ.
ಪ್ರೀತಿಯ ಸಸಿಗೆ ನೀರೆರೆದಾಗ  ಸಮೃದ್ದಿಯಫಲ
ಪವಿತ್ರ ಬದುಕಿಗೆ, ಮುಕ್ತ ಮನಸಿನ
ನಿರ್ಮಲ ಭಾವ....... ಸಂತೃಪ್ತಿ


ಮನಸು, ದೇಹ ಸಂಯಮದಲಿ ಸ್ಪಂದಿಸಿದರೆ
ತಾಪ ಪರಿತಾಪಗಳ ಹೊಯ್ದಾಟವಿಲ್ಲ.
ವಿಶ್ವಾತ್ಮ ಭಾವ ಮನದಲುದಯಿಸಿದಾಗ
ಸಹಜ ಶಾಂತಿಯ, ದಿವ್ಯಾನುಭೂತಿಯ
ಮಧುರ ಬದುಕಿನ ಕ್ಷಣಗಳು
ಸತ್ಯವೂ,   ಮುಕ್ತವೂ   ಸುಂದರವೂ ಹೌದು.


ಹೆಚ್  ಏನ್  ಪ್ರಕಾಶ್

ಸ್ಮರಣೆ

ಸ್ಮರಿಸು ...........


ಆ ದಿವ್ಯ ಚೈತನ್ಯದ  ಶಕ್ತಿಯ .....ಒಮ್ಮೆ ಸ್ಮರಿಸು.
ಭೂಮಿಗಿಳಿದ ಆ ದಿನದಿಂದ ಈ  ತನಕ
ಸಲಹುತಿರುವ ಆ ದಿವ್ಯ ಚೇತನವ
ದೃಡದಲಿ ನಂಬಿ  .......ಒಮ್ಮೆ ಸ್ಮರಿಸು.




ಅಡಗಿರುವ ಸೃಜನಶೀಲ ನವೀನ ಚಿಂತನೆಯ ಹೊರಗೆಳೆದು
ನಿತ್ಯಕರ್ಮದಲಿ  ವಿವೇಕ ಬೆರೆಸು.
ಕಷ್ಟ ಇದೆನ್ನುವ  ನೂರು ಕಾರಣವ ಗಾಳಿಗೆ ತೂರಿ
ಸಾಧ್ಯಮಾಡುವ  ಸಾವಿರಾರು ಅವಕಾಶಗಳ ಹೆಕ್ಕಿ ತೆಗಿ,


ಪ್ರೀತಿ ಪ್ರೇಮ, ಶ್ರದ್ಧೆ ವಿಶ್ವಾಸದಲಿ ಈ  ದಿನದ
ಬದುಕಿಗೆ ವಿದಾಯ ಹೇಳಿ ಶುಭ್ರ  ನಾಳೆಯ
ಎದುರುಗೊಳ್ಳುವ ಮುನ್ನ........ ಒಮ್ಮೆ ಸ್ಮರಿಸು.
ನಿನ್ನೆಯ ಕಹಿ ಸಿಹಿ ನೆನಪು ನಿನ್ನೆಗೆ  ಕೊನೆ.


ನಾಳೆ,  ಅರಿವಿರದ ರಹಸ್ಯದ  ಗಂಟು,
ಇಂದು ಮಾತ್ರ ನಿನ್ನ ಕೈಯೊಳು ಸಿದ್ದವಿಹುದು
ನಿನ್ನೊಳಗಿನ ಶಕ್ತಿಯ ನಂಬು, ಶಂಕೆಯ ಜಾಡಿಸು
ಬಾಳು ರಹಸ್ಯವಲ್ಲ ತೆರೆದ ಪುಸ್ತಕ


ಸಾಲುಗಳು ಕಠಿಣವಿರೆ ಅರ್ಥ ತಿಳಿಯಲು ......ಒಮ್ಮೆ ಸ್ಮರಿಸು.
ಉದಯವಾದರೆ  ರವಿ, ನಿನ್ನಾಯುಷ್ಯದ ಒಂದು ದಿನವ  ಕಳೆವ
ಹೋದ ಮಾನ , ಬಿಟ್ಟ ಬಾಣ,ಕೊಟ್ಟ ಮಾತು
ಹಿಂದೆ ಪಡೆವ   ವ್ಯರ್ಥಸಾಹಸಕೆ ಮನಸು ಬೇಡ.


ಇಂದಿನಾ ದಿನದ ಬಾಳಿನಲಿ ಅಂಟು ಇರದ ಕರ್ಮದಲಿ
ಧನ್ಯತೆಯ ಸವಿ ಬೆರೆಸಿ ಸಂತೃಪ್ತಿಯ ಭಾವದಲಿ
ನಿದ್ದೆಗೆ ಜಾರುವ ಮುನ್ನ ..........ಒಮ್ಮೆ .ಸ್ಮರಿಸು.




ಹೆಚ್  ಏನ್  ಪ್ರಕಾಶ್

ನಿನ್ನ ದುಡಿತದ ಬೆಮರೋ - ವೇದಸುಧೆ » Vedasudhe

ನಿನ್ನ ದುಡಿತದ ಬೆಮರೋ - ವೇದಸುಧೆ » Vedasudhe

Tuesday, March 27, 2012

ದೈವಾಂಶ ಸಂಭೂತರಿಗೆ ಮಾತ್ರ ಎಲ್ಲರಲ್ಲೂ ದೇವರು ಕಾಣುತ್ತಾನೆ

ಓದುವುದನ್ನು ಆರಂಭಿಸಿದಾಗಿನಿಂದ ಬ್ರಾಹ್ಮಣರ ಬಗ್ಗೆ ಒಂದು ವರ್ಗದ ಆಪಾದನೆಗಳನ್ನು ಕೇಳುತ್ತಲೇ ಬಂದಿದ್ದೇನೆ. ಅದೇನೋ ಎಲ್ಲರೂ 'ಪುರೋಹಿತ ಶಾಹಿ' ಅನ್ನೋ ಪದದ ಧಾರಾಳ ಬಳಕೆ ಮಾಡುತ್ತಾರೆ. ಹಾಗಂದರೇನು ಅಂಥ ನಂಗೆ ಗೊತ್ತಿಲ್ಲ ಶೋಷಿತವರ್ಗ ಶೋಷಣೆ ಗಳನ್ನ ಮರೆಯೋದು ಅಷ್ಟು ಸುಲಭವಲ್ಲವೇನೋ? ಆದರೆ ತೆಗಳಿಕೆ ಯಾರಿಗೆ ಇಷ್ಟವಾಗತ್ತೆ? ನಂಗೂ ಬೇಜಾರಾಗ್ತಿತ್ತು. ಈಗ ಅಷ್ಟಾಗಲ್ಲ. ಈ ಘಟನೆ ನಡೆದ ಮೇಲೆ ಬೇಸರದ ಭಾವ ಇನ್ನೂ ಕಡಿಮೆಯಾಗಿದೆ. ಗುಡಿಯ ಸಂಭ್ರಮ ಅಂಥ ಒಂದು ಕಾರ್ಯಕ್ರಮವನ್ನ, ಬೆಂಗಳೂರಿನ ಕೆಲವು ಗುಡಿಗಳಲ್ಲಿ ಆಯೋಜಿಸಿದ್ದರು. ಮಲ್ಲೇಶ್ವರದ ವೇಣುಗೋಪಾಲ ಸ್ವಾಮಿಯ ಗುಡಿ ನಾನು ಯಾವಾಗಲೂ ಹೋಗುವ ಗುಡಿಗಳಲ್ಲೊಂದು. ಅಲ್ಲೂ ಗುಡಿಯ ಸಂಭ್ರಮದ ಕಾರ್ಯಕ್ರಮವಿತ್ತು, ಪ್ರಕಾಶ್ ಬೆಳವಾಡಿಯವರ ಒಂದು ನಾಟಕ ಇತ್ತು. ನೋಡೋಕೆ ಹೋಗಿದ್ದೆವು. ಆವತ್ತು ಗುಡಿಯಲ್ಲಿ ಏನೋ ವಿಶೇಷ ಪೂಜೆ. ಸ್ವಾಮಿ ಗರುಡ ವಾಹನದ ಮೇಲೆ ಅಲಂಕೃತ ನಾಗಿ ಮೆರವಣಿಗೆಗೆ ಸಿಧ್ಧನಾಗಿ ಕುಳಿತಿದ್ದ. ಉತ್ಸವ ಮುಗಿದ ಮೇಲೆ, ಒಳಗೆ ಗರ್ಭಗುಡಿಯ ದೇವರ ನೋಡಲು ನಾನು ಮತ್ತು ನನ್ನ ಮಗ ಹೋದೆವು. ಅಲ್ಲೇ ಪ್ರಾಂಗಣದಲ್ಲಿ ಸಾಲಾಗಿ ಒಂದಷ್ಟು ಜನ ಕೂತಿದ್ದರು. ಅವರೆಲ್ಲರೂ ಶ್ರೀ ವೈಷ್ಣವರು . ಆ ಗುಡಿಗೆ ಶ್ರೀ ವೈಷ್ಣವ ಭಕ್ತರೇ ಪ್ರಮುಖರು . ಹಾಗೆ ಕೂತವರ ಮುಂದೆ ಎಲೆ ಇತ್ತು, ಪ್ರಸಾದ ಬಡಿಸುತ್ತಿದ್ದರು. ನಾವು ದೇವರ ನೋಡಿ ನಮಸ್ಕಾರ ಮಾಡಿ ಹೊರ ಬರುವಾಗ ಮಗನ ಕಣ್ಣು ಎಲೆಯ ಮೇಲೆ ಹೋಯಿತು. ಎಂದೂ ಬಾಯ್ತೆರೆದು ತಿನ್ನಲು ಕೇಳದ ಮಗ " ಅಮ್ಮ, ಓರು ಓಲಕ್ಕಿ ತಿಂತಿದಾರೆ, ನಂಗೂ ಬೇಕು" ಅಂದ. ಹೇಗೆ ಕೇಳೋದು?, ಅಲ್ಲಿ ಸಾರ್ವ ಜನಿಕರನ್ನ ಅವರು ಕರೆಯುತ್ತಿರಲಿಲ್ಲ. ಹಾಗೆ ಮರೆಸಿ ಹೊರಗೆ ಕರಕೊಂಡು ಬಂದೆ. ಅವ ಮರೆಯಲಿಲ್ಲ. ಸರಿ ಎಂದೂ ತಿನ್ನಲು ಕೇಳದ ಮಗ ಕೇಳುತ್ತಿದ್ದಾನೆ, ತಿಂತಾನೇನೋ ಅನ್ನೋ ಆಸೆ ಇಂದ, ನಾನು ನನ್ನ ಪತಿ ಮತ್ತೆ ದೇವಳದ ಒಳಗೆ ಹೋದೆವು. ಅಷ್ಟು ಹೊತ್ತಿಗೆ ಕಚ್ಚೆ ಉಟ್ಟ ಶ್ರೀ ವೈಷ್ಣವ ಹೆಂಗಸರು, ಗಂಡಸರು ತಿಂದ ಎಲೆ ಹಿಡಿದು ಕೊಂಡು ಕೈ ತೊಳೆಯಲು ಹೊರ ಬರುತ್ತಿದ್ದರು. ಆದರೂ ಬಡಿಸುತ್ತಿದ್ದವರನ್ನ "ಸ್ವಲ್ಪ ಪ್ರಸಾದ ಕೊಡ್ತಿರಾ" ಅಂದೆ. "ಖಾಲಿಯಾಯ್ತು" ಅನ್ನೋ ಉತ್ತರ ಬಂತು. ಮತ್ತೆ ಮಗ ಕೇಳಿದ. ಅಲ್ಲೇ ಇದ್ದ ಒಬ್ಬ ಹೆಂಗಸು ಅಲ್ಲಿ ಹಾಲ್ ನ ಒಳಗೆ ಕೊಡ್ತಾರೆ ಹೋಗಿ ಕೇಳಿ ಅಂದರು. ಸರಿ ಅಲ್ಲೂ ಹೋದೆವು. ಮತ್ತೆ ಕೇಳಿದೆವು. ನೋಡ್ತೀನಿ ಅಂದ ಒಬ್ಬ ಪುಣ್ಯಾತ್ಮ ಫೋನ್ ಬಂದು ಮಾಯವಾದರು . ಅಷ್ಟು ಹೊತ್ತಿಗೆ ಮೊದಲು ಕೇಳಿದ್ದ ವ್ಯಕ್ತಿ ಮತ್ತೆ ಬಂದರು. ಈ ಬಾರಿ ನೋಡ್ತೀನಿ ಅಂತ ಒಳ ಹೋದರು. ಹಾಲ್ ನಲ್ಲಿ ನಮ್ಮ ಮುಂದೆ ಸಾಲಾಗಿ ಎಲೆ ಇಟ್ಟು, ಪುಷ್ಕಳವಾಗಿ ಕದಂಬಂ, ಪೊಂಗಲ್ ಮತ್ತಿನ್ನಿನೇನೋ ಹೆಸರುಗಳ ಪ್ರಸಾದಗಳನ್ನ ಬಡಿಸುತ್ತಿದ್ದರು. ಬಕೆಟ್ ತುಂಬಾ ಇದ್ದ ಪ್ರಸಾದಗಳು ನಮ್ಮ ಕಣ್ಣು ಕುಕ್ಕುತ್ತಿದ್ದವು. ಮುಂದೆಯೇ ರಾಶಿ ಬಾಳೆಯೂ ಬಿದ್ದಿತ್ತು. ಸರಿ ಬಿಡು ಒಂದು ಎಲೆಯಲ್ಲಿ ಕೊಡ್ತಾರೆ ಅಂಥ ನಾವು ನಿಂತೆವು . ಒಳ ಹೋದಾತ ಬಂದರು "ತಗೋಳಮ್ಮ" ಅಂಥ ಒಂದು ಸೌಟಿನಲ್ಲಿ ಪೊಂಗಲ್ ತಂದಿದ್ದರು. ನಾನು ಒಂದು ಬಾಳೆ ಎಲೆ ಕೇಳೋಣ ಅನ್ನೋ ಅಷ್ಟರಲ್ಲಿ, ತುದಿ ಇಂದ ಒಂದು ತುತ್ತು ಪೊಂಗಲನ್ನು ನನ್ನ ಕೈಗೆ ಹಾಕಿ ಹೊರಟು ಹೋದರು . ಮಗ "ಇದು ಓಲಕ್ಕಿ ಅಲ್ಲ, ನಂಗೆ ಬೇಡ" ಅಂಥ ಮೂತಿ ತಿರುವಿದ. ಸರಿ ಹೊರ ಹೋಗಿ ಅವನಿಗೆ ಬೇರೇನೋ ಕೊಡಸಿ ಸಮಾಧಾನ ಮಾಡಿದೆವು. ಅವರು ಒಳಕರೆದು ಪ್ರಸಾದ ಕೊಡಲೆಂದು ನಾ ನೀರಿಕ್ಷಿಸಿರಲಿಲ್ಲ, ಕೇಳಿದ್ದು ನಾನೂ ಅಲ್ಲ. ಒಂದು ಮಗು ಅಷ್ಟು ಸ್ಪಷ್ಟವಾಗಿ ನನಗೆ ಪ್ರಸಾದ ಬೇಕು ಅಂದಾಗಲೂ ಕೊಡದೆ ಹೋದದ್ದು ಎಷ್ಟರ ಮಟ್ಟಿಗೆ ಸರಿ? ಇಂಥ ವರ್ತನೆಗಳು ಬ್ರಾಹ್ಮಣರ ವಿರುಧ್ಧದ ಆರೋಪಗಳಿಗೆ ತುಪ್ಪ ಸುರಿಯಲಾರವೇ? ಭಗವಂತನ ನಾಮವನ್ನ ಎಲ್ಲ ಸ್ತರದವರಿಗೆ ತಲುಪಿಸುವ ಸಲುವಾಗಿ ಗೋಪುರದ ಮೇಲಿಂದ ನಾಮವನ್ನ ಉಚ್ಚರಿಸಿದ ಭಗವದ್ ರಾಮಾನುಜರ ಶಿಷ್ಯ ಪರಂಪರೆ ಇಲ್ಲಿಗೆ ಬಂತೇ? ಕಲ್ಲು ಕೃಷ್ಣನ ಕೈಗೆ ಬೆಣ್ಣೆ ಮುದ್ದೆಯನಿಟ್ಟವರಿಗೆ ಒಂದು ಮಗುವಿನಲ್ಲಿ ಕೃಷ್ಣ ಕಾಣಲಿಲ್ಲವೇ? ಈ ಬರಹದ ಹಿಂದಿನ ಉದ್ದೇಶ ಯಾರನ್ನೂ ಹಳಿಯುವುದಲ್ಲ. ನನಗೆ ವೇಣುಗೋಪಾಲನ ಸನ್ನಿಧಿ ಇಂದಿಗೂ ಪ್ರಿಯವೇ. ಆದರೆ ಪುರದ ಹಿತವನ್ನ ಬಯಸಬೇಕಾದ ಪುರೋಹಿತ , ಒಳಿತನ್ನು ಆಚರಿಸಿ ತೋರಿಸಬೇಕಾದ ಜ್ಞಾನಿ ಆಚಾರ್ಯ ಎಲ್ಲಿ ಕಳೆದು ಹೋದ? ಎಂಬ ಪ್ರಶ್ನೆ ಕಾಡುತ್ತೆ. ಮಾರನೆ ದಿನ ನನ್ನ ಸಹೋದ್ಯೋಗಿಗಳೊಂದಿಗೆ ಈ ಪ್ರಸಂಗ ಹೇಳುತ್ತಿದ್ದೆ . ಒಬ್ಬರೆಂದರು, "ನಾನು ಗುರು ರಾಘವೇಂದ್ರ ವೈಭವ ನೋಡುತ್ತೇನೆ. ಅದರಲ್ಲಿ ಗುರುಗಳು ಎಲ್ಲರನ್ನೂ ಎಷ್ಟು ಪ್ರೀತಿ ಇಂದ ಕಾಣುತ್ತಾರೆ. ಆದರೆ ಇಂದಿನ ರಾಯರ ಮಠಗಳಿಂದ ಅದನ್ನ ನೀರಿಕ್ಷಿಸಬಹುದೇ? ಬಹುಶಃ ದೈವಾಂಶ ಸಂಭೂತರಿಗೆ ಮಾತ್ರ ಎಲ್ಲರಲ್ಲೂ ದೇವರು ಕಾಣುತ್ತಾನೆ". ಅವರ ಮಾತು ನನ್ನ ಮನಸನ್ನ ಇನ್ನೂ ತಿಳಿಯಾಗಿಸಿತು. ನನಗೆ ಅಲ್ಲಿದ್ದ ಯಾರೂ ವೈಯುಕ್ತಿವಾಗಿ ಪರಿಚಯದವರಲ್ಲಿ. ಯಾವ ವರ್ಗದ ಬಗ್ಗೆಯೂ ನನಗೆ ಸಿಟ್ಟಿಲ್ಲ. ಇದು, ಉಣ್ಣಲು ಕೇಳಿದ ಮಗುವಿಗೆ ಇಕ್ಕಲಾಗದೇ ಹೋದ ತಾಯ ಭಾವ ಮಾತ್ರ.
 -ಸ್ವರ್ಣ

 [ಸೋದರೀ ಸ್ವರ್ಣ ಅವರು ಮೇಲಿನ ತಮ್ಮ ಆ೦ತರಾಳದ ಮಾತನ್ನು ತಮ್ಮ ಬ್ಲಾಗ್ ನಲ್ಲಿ ಪ್ರಕಟಿಸಿ ನನಗೆ ನೋಡಲು ಮೇಲ್ ಮಾಡಿದ್ದರು. ಅದನ್ನಿಲ್ಲಿ ಪ್ರಕಟಿಸಲಾಗಿದೆ. ಹಲವು ದೇವಾಲಯಗಳಲ್ಲಿ ಇಂದಿಗೂ ನಡೆಯುತ್ತಿರುವ ಭೇಧಭಾವವನ್ನು ಗಮನಿಸಿದರೆ ಇನ್ನೂ ಯಾವ ಕಾಲಕ್ಕೆ ಈ ವ್ಯವಸ್ಥೆಗಳು ಮಾನವೀಯ ನೆಲೆಯಮೇಲೆ ಮಾರ್ಪಾಡಾಗುತ್ತದೆ! ಎಂಬ ಬೇಸರ ಕಾಡುತ್ತದೆ] -ಹರಿಹರಪುರ ಶ್ರೀಧರ್, ಸಂಪಾದಕ,ವೇದಸುಧೆ



                ಮಗನ ಮದುವೆ ಹತ್ತಿರವಾಗುತ್ತಿದೆ. ಇನ್ನು ಆಹ್ವಾನ ಪತ್ರಿಕೆ ಹಿಡಿದು ಸುತ್ತಲೇ ಬೇಕು. ಮೇ 7 ಕ್ಕೆ ಮದುವೆ.
ಬೆಂಗಳೂರಿನಲ್ಲಿ.ಅಂತರ್ಜಾಲ ತಾಣದ ಮಿತ್ರರೆಲ್ಲರಿಗೆ ಮೇಲ್ ಮೂಲಕವೇ ಆಹ್ವಾನಿಸುವೆ. ಸಮಯ ಇನ್ನೂ ಇದೆ. ಇನ್ನು 
ಬರೆಯಲು ಓದಲು ಅವಕಾಶ ಬಲು ಕಡಿಮೆ. ಈಗಾಗಲೇ ಶೆಡ್ಯೂಲ್ ಮಾಡಿರುವ ಲೇಖನಗಳು/ ಪ್ರವಚನಗಳು ಅದರಂತೆ 
ಪ್ರಕಟವಾಗಲಿವೆ. ಆದರೆ ನಿತ್ಯ ಕುಳಿತು ಅಂತರ್ಜಾಲ ಜಾಲಾಡುವ ಪರಿಸ್ಥಿತಿ ಏನಿದ್ದರೂ ಮೇ 20 ರ ನಂತರವೇ. ಅಲ್ಲಿಯವರಗೆ 
ಆಗ್ಗಾಗ್ಗೆ ಸಮಯ ಸಿಕ್ಕಾಗ ಇಲ್ಲಿ ತಲೆ ಹಾಕುವೆ.
-ಹರಿಹರಪುರಶ್ರೀಧರ್
ಸಂಪಾದಕ


ಸ್ಮಿತವಿರಲಿ ವದನದಲಿ - ವೇದಸುಧೆ » Vedasudhe

ಸ್ಮಿತವಿರಲಿ ವದನದಲಿ - ವೇದಸುಧೆ » Vedasudhe




ಸ್ಮಿತವಿರಲಿ ವದನದಲಿ, ಕಿವಿಗೆ ಕೇಳಿಸದಿರಲಿ|
ಹಿತವಿರಲಿ ವಚನದಲಿ , ಋತವ ಬಿಡದಿರಲಿ|
ಮಿತವಿರಲಿ ಮನಸಿನುದ್ವೇಗದಲಿ, ಭೋಗದಲಿ
ಅತಿ ಬೇಡವೆಲ್ಲಿಯುಂ ಮಂಕುತಿಲ್ಲ|

Sunday, March 25, 2012

ಯೋಚಿಸಲೊ೦ದಿಷ್ಟು...೪೮

೧. “ ಸೋಹ೦ ಎ೦ದೆನಿಸದೇ ದಾಸೋಹ ಎ೦ದೆನಿಸಯ್ಯಾ..“- ಬಸವಣ್ಣ
೨. ಓದಿ ಮರುಳಾಗಬಾರದು, ಓದದೆಯೂ ಮರುಳಾಗಬಾರದು.. ಓದಿ ಓದಿ ಹುರುಳಾಗಬೇಕು!!- ವಿ.ಕೃ.ಗೋಕಾಕ್
೩. ಎಲ್ಲರೂ ತಮ್ಮದೇ ಅತಿ ದೊಡ್ಡ “ಕಷ್ಟ“ ವೆ೦ದುಕೊಳ್ಳುತ್ತಾರೆ!!
೪.“ ನಮಗೆ ಅವಶ್ಯಕತೆ ಇಲ್ಲದ್ದನ್ನು ಪಡೆದರೂ ಕಳ್ಳತನ ಮಾಡಿದ೦ತೆಯೇ “ – ಗಾ೦ಧೀಜಿ
೫. ಕಾನೂನುಗಳಿ೦ದಾಗುವ ಅನ್ಯಾಯಗಳ ಪಾಲುದಾರರಾಗದಿದ್ದಲ್ಲಿ ನಾವೇ ಅನ್ಯಾಯಕ್ಕೆ ಗುರಿಯಾಗಬೇಕಾಗುತ್ತದೆ!!
೬. ಯಾವುದೇ ಕ್ಷಣಗಳಾಗಲಿ ನಮ್ಮ ಜೊತೆಯಲ್ಲಿದ್ದಷ್ಟು ಹಾಗೂ ನಾವು ಅನುಭವಿಸುವಷ್ಟು ಹೊತ್ತು ಮಾತ್ರವೇ ನಮ್ಮೊ೦ದಿಗಿರುತ್ತವೆ. ಅಲ್ಲಿವರೆಗೂ ಅವು ನಮ್ಮದಾಗಿರುತ್ತವೆ!!
೭. ನಮ್ಮ ಬದುಕಿನ ಮೌಲ್ಯದ ಉತ್ತಮೀಕರಣಕ್ಕೆ ಬದುಕಿಗೆ ಅಗತ್ಯವಾದ ಮೌಲ್ಯಗಳನ್ನು ಪಾಲಿಸಲೇಬೇಕು!!
೮. ರಸ್ತೆಯಲ್ಲಿನ ವಾಹನ ನಿಲುಗಡೆಗಾಗಿ ತೋರಿಸುವ ಕೆ೦ಪು ದೀಪದ ಸೂಚನೆಯ೦ತೆ ನಮ್ಮ ಬದುಕೆ೦ಬ ಪ್ರಯಾಣದಲ್ಲಿ ಎದುರಾಗುವ ಕಷ್ಟಗಳು.. ನಾವು ಸ್ವಲ್ಪ ಹೊತ್ತು ತಾಳ್ಮೆಯಿ೦ದ ಕಾಯ್ದರೆ.. ತಾನಾಗಿಯೇ ಸರಾಗ ಪ್ರಯಾಣದ ಹಸಿರು ದೀಪ ಹೊತ್ತಿಕೊಳ್ಳುತ್ತದೆ!!
೯. ನಮ್ಮವರಿಗಾಗಿ “ನಮ್ಮದು“ ಎ೦ಬುದನ್ನು ನೀಡೋಣ.
೧೦. “ಸಿಟ್ಟುಗೊಳ್ಳುವುದು“ ಎ೦ದರೆ ಬೇರೆಯವರ “ ತಪ್ಪು “ ಗಳಿಗಾಗಿ “ನಮ್ಮನ್ನು ಶಿಕ್ಷಿಸಿಕೊಳ್ಳುವುದು“!!
೧೧. ಯಾರೂ ಪರಿಪೂರ್ಣರಲ್ಲ. ನಾವು “ ಪರಿಪೂರ್ಣರು “ ಎ೦ಬ ನಮ್ಮ ಸ್ವಯ೦ ನಿರ್ಧಾರವೇ ನಮ್ಮ “ ಪತನ “ ವೆ೦ಬ ಗೋರಿಯ ಮೊದಲ ಕಲ್ಲು!
೧೨. ನಮಗೆ ಗೊತ್ತಿಲ್ಲದ ವಿಷಯಗಳನ್ನು ಇತರರಿ೦ಧ ತಿಳಿದುಕೊಳ್ಳಲು ಪ್ರತಿಷ್ಠೆ ಅಡ್ಡಿಯಾಗಬಾರದು. ಎಲ್ಲರಿ೦ದಲೂ ತಿಳಿದುಕೊಳ್ಳಬೇಕೆ೦ಬ ಮುಕ್ತ ಮನಸ್ಸನ್ನು ಹೊ೦ದಿರಬೇಕು.
೧೩. ಧನವನ್ನು ಹೊ೦ದಿರದ ವ್ಯಕ್ತಿಯೊಬ್ಬನು ಬಡವನಲ್ಲ.. ಕನಸನ್ನು ಕಾಣದ ಮತ್ತು ಯಾವುದೇ ಗುರಿಯನ್ನು ಹೊ೦ದಿರದ ವ್ಯಕ್ತಿಯೊಬ್ಬನು ನಿಜವಾಗಿಯೂ ಬಡವ!- ಸ್ವಾಮಿ ವಿವೇಕಾನ೦ದ
೧೪. ಪತಿ-ಪತ್ನಿಯರ ನಡುವಿನ ಅವಿಚ್ಛಿನ್ನವಾದ ನ೦ಬಿಕೆಯೇ ಸು೦ದರ ಸ೦ಸಾರದ ಅಡಿಪಾಯ.
೧೫. ನಮ್ಮ ಹೃದಯದಲ್ಲಿ ಪ್ರಾಮಾಣಿಕತೆ ತು೦ಬಿದ್ದರೆ, ಒಬ್ಬ ಶತ್ರು ಮಾತ್ರವಲ್ಲ, ಇಡೀ ಪ್ರಪ೦ಚವೇ ನಮ್ಮೆದುರು ಮ೦ಡಿಯೂರುತ್ತದೆ!- ಸ್ವಾಮಿ ವಿವೇಕಾನ೦ದರು

ಮರ್ಯಾದಾ ಪುರುಷೋತ್ತಮ ಶ್ರೀರಾಮನ ನೆನೆಯೋಣ

      ನೂತನ ನಂದನ ಸಂವತ್ಸರ ಕಾಲಿರಿಸಿದೆ. ಎಲ್ಲಾ ಓದುಗರಿಗೂ ನೂತನ ವರ್ಷ ಮಂಗಳಕರವಾಗಿರಲಿ ಎಂದು ಹಾರೈಸುತ್ತಾ, ಯುಗಾದಿಯ ಹಾಗೂ ಬರಲಿರುವ ಶ್ರೀರಾಮನವಮಿಯ ಶುಭಾಶಯಗಳನ್ನು ಕೋರುತ್ತೇನೆ.
      ಇತ್ತೀಚೆಗೆ ವೇದಸುಧೆ ಅಂತರ್ಜಾಲ ತಾಣದಲ್ಲಿ ಮತ್ತು ಫೇಸ್ ಬುಕ್ಕಿನ ಸುಮನಸ ಗುಂಪಿನಲ್ಲಿ 'ಯಜ್ಞದಲ್ಲಿ ಪ್ರಾಣಿಬಲಿ' ಎಂಬ ವಿಷಯ ಕುರಿತು ವ್ಯಾಪಕವಾದ ಚರ್ಚೆಯಾಯಿತು. ಚರ್ಚೆಯ ಫಲಾಫಲಗಳು ಏನೇ ಇರಲಿ, ಭಾಗವಹಿಸಿದವರು ಮನಃಪೂರ್ವಕವಾಗಿ ಚರ್ಚೆಯಲ್ಲಿ ತೊಡಗಿಸಿಕೊಂಡದ್ದು ವಿಶೇಷ. ಚರ್ಚೆಯಲ್ಲಿ ಇನ್ನಿತರ ತಜ್ಞರೂ, ವಿದ್ವಾಂಸರೂ, ವೇದಗಳನ್ನು ಅರಿತವರೂ ಭಾಗವಹಿಸಿದ್ದರೆ ಚೆನ್ನಾಗಿರುತ್ತಿತ್ತು. ಚರ್ಚೆಯಲ್ಲಿ ಶ್ರೀಮದ್ವಾಲ್ಮೀಕಿ ರಾಮಾಯಣದಲ್ಲೂ ಪ್ರಾಣಿಬಲಿ ನೀಡಿರುವುದಕ್ಕೆ ಸಮರ್ಥನೆಯಿದೆ ಎಂಬ ಅಂಶವೂ ಪ್ರಸ್ತಾಪವಾಗಿತ್ತು. ಇದನ್ನು ಅಲ್ಲಗಳೆಯಲು ನನ್ನಂತಹ ಅಲ್ಪಮತಿಗಳಿಗೆ ಕಷ್ಟವಾಗಿತ್ತು. ಏಕೆಂದರೆ ಸಂಸ್ಕೃತದ ಆ ರಾಮಾಯಣವನ್ನು ಪೂರ್ಣವಾಗಿ ಓದಿರುವವರ ಸಂಖ್ಯೆ ಕಡಿಮೆಯೆಂದರೆ ತಪ್ಪಲ್ಲ. ನಾನೂ ಅವರಲ್ಲಿ ಒಬ್ಬನಾಗಿದ್ದೇನೆ. ಆದರೆ ರಾಮೋತ್ಸವದ ಸಂದರ್ಭದಲ್ಲಿ ರಾಮಾಯಣ ಕುರಿತು ಪ್ರವಚನಗಳು, ಹರಿಕಥೆಗಳನ್ನು ಚಿಕ್ಕಂದಿನಿಂದಲೂ ಕೇಳುತ್ತಾ ಬಂದು ಶ್ರೀರಾಮನ ಗುಣಗಳಿಂದ ಪ್ರಭಾವಿತನಾಗಿರುವುದು ಮಾತ್ರ ಸತ್ಯ. ರಾಮಾಯಣದಲ್ಲಿ ಪ್ರಾಣಿಬಲಿಗೆ ಸಮರ್ಥನೆಯಿದೆಯಂಬುದನ್ನು ಕೇಳಿ ಮನಸ್ಸಿಗೆ ಕಸಿವಿಸಿಯಾಗಿದ್ದ ಸಂದರ್ಭದಲ್ಲಿ ಪಂ. ಸುಧಾಕರ ಚತುರ್ವೇದಿಯವರು ರಚಿಸಿದ ಒಂದು ಪುಸ್ತಕ 'ಮರ್ಯಾದಾ ಪುರುಷೋತ್ತಮ ಭಗವಾನ್ ಶ್ರೀ ರಾಮಚಂದ್ರ' ನನ್ನ ಕೈಗೆ ಸಿಕ್ಕಿತು. ಅದನ್ನು ಓದಿದಾಗ ಹಿತವೆನಿಸಿತು. ೧೯೬೪ರಲ್ಲಿ 'ವಾಲ್ಮೀಕಿ ಕಂಡ ಶ್ರೀರಾಮ' ಎಂಬ ಹೆಸರಿನಲ್ಲಿ ಪ್ರಥಮವಾಗಿ ಮುದ್ರಿತವಾದ ಈ ಪುಸ್ತಕ ಈಗಾಗಲೇ ಐದು ಮುದ್ರಣಗಳನ್ನು ಕಂಡಿದೆ. ಶ್ರೀಮದ್ವಾಲ್ಮೀಕಿ ರಾಮಾಯಣದಲ್ಲಿ ಆಗಿರುವ ಅನೇಕ ಪ್ರಕ್ಷೇಪಣೆಗಳ ಕುರಿತು ಲೇಖಕರು ಈ ಪುಸ್ತಕದಲ್ಲಿ ಸೋದಾಹರಣವಾಗಿ ಪ್ರಸ್ತಾಪಿಸಿದ್ದಾರೆ. ೧೧೬ ವರ್ಷಗಳ ಪಂ. ಸುಧಾಕರ ಚತುರ್ವೇದಿಯವರು ನಾಲ್ಕು ವೇದಗಳನ್ನು ಅಧ್ಯಯನ ಮಾಡಿದವರಾಗಿದ್ದು, ಈ ಕಾರಣದಿಂದಲೇ ಅವರಿಗೆ ಚತುರ್ವೇದಿ ಎಂಬ ಹೆಸರು ಬಂದಿದ್ದಾಗಿದೆ. ಇಂದಿಗೂ ಅವರು ವೇದಮಂತ್ರಗಳ ಅರ್ಥ, ವಿಮರ್ಶೆಗಳನ್ನು ಆಸಕ್ತರಿಗೆ ಮಾಡಿಕೊಡುತ್ತಿದ್ದಾರೆ. ಪ್ರತಿ ಶನಿವಾರ ಬೆಂಗಳೂರಿನ ಅವರ ನಿವಾಸದಲ್ಲಿ ನಡೆಯುವ ಸತ್ಸಂಗದಲ್ಲಿ ಅವರ ಪ್ರಖರ ವಿಚಾರಧಾರೆ ಸವಿಯಬಹುದಾಗಿದೆ. ಇಂತಹ ವಯೋವೃದ್ಧ, ಜ್ಞಾನವೃದ್ಧ, ಸತ್ಯನಿಷ್ಠ ಲೇಖಕರ ಈ ಪುಸ್ತಕವನ್ನು ಜಿಜ್ಞಾಸುಗಳು ಓದಲೇಬೇಕು. ಈ ಪುಸ್ತಕದ ಮುನ್ನುಡಿಯನ್ನು ಮಾತ್ರ ಯಥಾವತ್ತಾಗಿ ಇಲ್ಲಿ ಓದುಗರ ಗಮನಕ್ಕಾಗಿ ಕೊಟ್ಟಿರುವೆ. ಇದನ್ನು ಪಂಡಿತರು ೧೯೬೪ರಲ್ಲಿ ಬರೆದದ್ದಾದರೂ ಇಂದಿಗೂ ಪ್ರಸ್ತುತವಿದೆ, ಅರ್ಥವಿದೆ. [ಪುಸ್ತಕ ದೊರೆಯುವ ಸ್ಥಳ: ಆರ್ಯಸಮಾಜ, ಶ್ರದ್ಧಾನಂದ ಭವನ, ವಿಶ್ವೇಶ್ವಪುರಂ, ಬೆಂಗಳೂರು.] ಮುನ್ನುಡಿಯಲ್ಲೇ ವ್ಯಾಪಕ ವಿಷಯಗಳಿದ್ದು, ಪುಸ್ತಕದಲ್ಲಿ ಮತ್ತೂ ಹೆಚ್ಚಿನ ಮನನೀಯ ವಿಚಾರಗಳಿವೆ. ಚರ್ಚೆಯನ್ನು ಪುನಃ ಪ್ರಾರಂಭಿಸುವ ಪ್ರಯತ್ನ ಇದಲ್ಲವೆಂಬುದನ್ನು ನಮ್ರಪೂರ್ವಕ ತಿಳಿಸಬಯಸುತ್ತೇನೆ. ಈಗ ಚಂದನ ದೂರದರ್ಶನದಲ್ಲಿ ಹೊಸಬೆಳಕು ಶೀರ್ಷಿಕೆಯಲ್ಲಿ ವೇದಗಳ ಕುರಿತು ಚಿಂತನಾ ಕಾರ್ಯಕ್ರಮ ನಡೆಸಿಕೊಡುತ್ತಿರುವ ವೇದಾಧ್ಯಾಯಿ ಶ್ರೀ ಸುಧಾಕರ ಶರ್ಮರವರು ಪಂ. ಸುಧಾಕರ ಚತುರ್ವೇದಿಯವರ ಶಿಷ್ಯರಾಗಿದ್ದಾರೆ. ನನಗೆ ತಿಳಿದ ಸಂಗತಿಯನ್ನು ತಮ್ಮೊಡನೆ ಹಂಚಿಕೊಳ್ಳುವ ಪ್ರಯತ್ನ ಮಾತ್ರವಿದು. ವಾಚಕರೂ ಸಹ ತಮ್ಮ ಅನಿಸಿಕೆ, ಅಭಿಪ್ರಾಯಗಳನ್ನು ಹಾಗೂ ಹೊಸ ವಿಷಯಗಳಿದ್ದಲ್ಲಿ ತಿಳಿಸಬಹುದಾಗಿದೆ. ಪ್ರಾಸಂಗಿಕವಾಗಿ ಒಂದು ಉವಾಚ:
 ಕಾಣುವುದು ನಿಜವಲ್ಲ ಕಾಣದಿರೆ ಸುಳ್ಳಲ್ಲ
ತಿಳಿದದ್ದು ನಿಜವಲ್ಲ ತಿಳಿಯದಿರೆ ಸುಳ್ಳಲ್ಲ |
ಕೇಳುವುದು ನಿಜವಲ್ಲ ಕೇಳದಿರೆ ಸುಳ್ಳಲ್ಲ
ಆತ್ಮಾನಾತ್ಮರರಿವು ಅವನೆ ಬಲ್ಲ ಮೂಢ ||
-ಕ.ವೆಂ.ನಾಗರಾಜ್.

ಪಂ. ಸುಧಾಕರ ಚತುರ್ವೇದಿಗಳೊಂದಿಗೆ


 ಪಂಡಿತ ಸುಧಾಕರ ಚತುರ್ವೇದಿಯವರ . . . .
 . . . . ಕಾಮನೆ 


     ಜಗದೀಶ್ವರ ಜೀವಮಾತ್ರರಿಗೆ ಅಸಂಖ್ಯ ವರದಾನ ಮಾಡಿದ್ದಾನೆ. ಮಾನವನಿಗೆ ಆ ದಯಾಮಯನಿಂದ ಬೇರಾವ ಜೀವರಿಗೂ ಸಿಕ್ಕದಿರುವ ಒಂದು ಅನುಪಮ ಹಾಗೂ ಅದ್ಭುತ ವರ ಸಿಕ್ಕಿದೆ. ಸತ್ಯವನ್ನು ಅಸತ್ಯದಿಂದ ಬೇರೆ ಮಾಡಬಲ್ಲ ವಿವೇಕಯುಕ್ತವಾದ ಮಸ್ತಿಷ್ಕವೇ ಆ ಅನುಪಮವಾದ, ಅದ್ಭುತವಾದ ಭಗವದ್ದತ್ತ ವರ. ಈ ಅಸದೃಶ ವರವನ್ನು ಪಡೆದೂ ಸಹ, 'ಶಾಸ್ತ್ರಾದ್ರೂಢಿರ್ಬಲೀಯಸೀ' - ಎಂಬ ಸಂಪ್ರದಾಯ ಶರಣರ ಮನೋಭಾವಕ್ಕೆ ಬಲಿಬಿದ್ದು, ಸತ್ಯಾಸತ್ಯವಿವೇಚನೆ ಮಾಡದೆ, ಈ ಅಮೂಲ್ಯವಾದ ನರಜನ್ಮವನ್ನು ವ್ಯರ್ಥಪಡಿಸಿಕೊಳ್ಳುವುದು ಮಹಾಪಾತಕವೇ ಎಂದೆನ್ನಬಹುದು. ಏಕೆಂದರೆ, ಸತ್ಯಾಸತ್ಯವಿವೇಚನೆ ಮಾಡದೆ, ಸತ್ಯದರ್ಶನವಾಗದು; ಸತ್ಯದರ್ಶನವಾಗದೆ, ಸತ್ಯಸ್ವರೂಪನಾದ ಭಗವಂತನ ಸಾಕ್ಷಾತ್ಕಾರವೂ ಆಗದು. ಭಗವತ್ಸಾಕ್ಷಾತ್ಕಾರಕ್ಕೊದಗದ ಜನ್ಮ, ಮಾನವಜನ್ಮವಾದರೇನು? ದಾನವಜನ್ಮವಾದರೇನು?
     ಅನೇಕ ದಶಕಗಳಿಂದ ಶ್ರೀಮದ್ವಾಲ್ಮೀಕಿ ರಾಮಾಯಣವನ್ನು ವಿವೇಚನಾತ್ಮಕ ದೃಷ್ಟಿಯಿಂದ ಅದೆಷ್ಟೋ ಸಾರಿ ಓದುತ್ತಾ ಬಂದಿದ್ದೇನೆ. ಮೊದಮೊದಲು ಪರಂಪರಾಗತ ನಂಬಿಕೆಯಂತೆ ಶ್ರೀರಾಮನು ದೇವರು ಎಂದರಿತೇ ಓದಿದೆ. ಆ ನಂಬಿಕೆಯಿದ್ದಾಗಲೂ ಒಂದಾದಮೇಲೊಂದರಂತೆ ನಾನಾ ಸಂದೇಹಗಳು ಏಳುತ್ತಲೇ ಇದ್ದವು. ನಾನು ಇಪ್ಪತ್ತು ವರ್ಷದವನಾದಾಗ ಗುರುಮುಖವಾಗಿ ವೇದಾಂತದರ್ಶನ ಓದಿದೆ. ಆನಂದಮಯೋsಭ್ಯಾಸಾತ್ - ಪರಬ್ರಹ್ಮ, ಶಾಸ್ತ್ರಗಳಲ್ಲಿ ಬಾರಿ ಬಾರಿ ಆನಂದಮಯವೆಂದು ಹೇಳಲ್ಪಟ್ಟಿದೆ - ಎಂಬ ಸೂತ್ರದೊಂದಿಗೆ, ಸೀತಾಪಹರಣವಾದಾಗ ರಾಮನಿಗುಂಟಾದ ಶೋಚನೀಯಾವಸ್ಥೆಯನ್ನು ಮೇಳವಿಸಿ ನೋಡಿದೆ. ರಾಮ ಆನಂದಮಯನಾದ ಭಗವಂತನಂತೂ ಆಗಿರಲಾರ ಎನಿಸಿತು. ಶ್ರೀರಾಮ ಲೀಲಾಮಾನುಷ ವಿಗ್ರಹ; ಮಾನವರಂತೆಯೇ ಎಲ್ಲ ನಾಟಕಗಳನ್ನೂ ಆಡಿದ್ದಾನೆ - ಸ್ವತಃ ಭಗವಂತನಾಗಿದ್ದರೂ - ಎಂಬ ಸಮಾಧಾನವಾಕ್ಯ ನನ್ನ ಅಂತಃಕರಣಕ್ಕೆ ಶಾಂತಿ ಕೊಡಲಿಲ್ಲ. ಭಗವಂತ ನಾಟಕೀಯ ಪುರುಷ ಎಂದು ನನ್ನ ಹೃದಯ ಒಪ್ಪಿಕೊಳ್ಳಲಿಲ್ಲ. ೨೦ನೆಯ ವರ್ಷದಿಂದಲೇ ಆರಂಭಿಸಿ ನಿರಂತರವಾಗಿ ವೇದಗಳನ್ನೂ, ಪ್ರಾಮಾಣಿಕ ಉಪನಿಷತ್ತುಗಳನ್ನೂ, ಷಡ್ದರ್ಶನಗಳನ್ನೂ ಮಹಾವಿದ್ವಾಂಸರಾದ ಗುರುಜನರ ಚರಣಾರವಿಂದಗಳಲ್ಲಿ ಕುಳಿತು ಅಧ್ಯಯನ ಮಾಡಿದ ಮೇಲೆ, ಭಗವದವತಾರವಾದ ಕೇವಲ ಟೊಳ್ಳು ಕಲ್ಪನೆ; ಶ್ರೀರಾಮ, ಶ್ರೀಕೃಷ್ಣ ಮೊದಲಾದವರೆಲ್ಲಾ ಮಹಾಮಾನವರೇ ಹೊರತು ದೇವರ ಅವತಾರಗಳಲ್ಲ - ಎಂಬಂಶ ನನ್ನ ಹೃದಯವನ್ನು ಸ್ಪರ್ಷಿಸಿತು.
     ವಿವೇವನಾತ್ಮಕ ದೃಷ್ಟಿಯಿಂದ ಶ್ರೀಮದ್ವಾಲ್ಮೀಕಿರಾಮಾಯಣವನ್ನು ಅವಲೋಕಿಸಿದಲ್ಲಿ, ಈ ತಥ್ಯ ಯಾರಿಗಾದರೂ ಅತಿ ಸ್ಪಷ್ಟವಾಗಿಯೇ ಗೊತ್ತಾಗುವುದು. ಈ ಪುಸ್ತಕದಲ್ಲಿ ಶ್ರೀರಾಮನೊಬ್ಬ ಮರ್ಯಾದಾ ಪುರುಷೋತ್ತಮ; ಮಹಾಮಾನವ ಎಂಬುದನ್ನು ಸಪ್ರಮಾಣವಾಗಿ ಪ್ರತಿಪಾದಿಸಲು ಯತ್ನಿಸುತ್ತಿದ್ದೇನೆ. ಈ ಸಂದರ್ಭದಲ್ಲಿ, ಇಂದು ಸಂಸ್ಕೃತದಲ್ಲಿ ಶ್ರೀಮದ್ವಾಲ್ಮೀಕಿ ರಾಮಾಯಣವೆಂದು ಪ್ರಸಿದ್ಧವಾಗಿರುವ ಗ್ರಂಥವೂ ಕೂಡ ಶ್ರೀಮದ್ವಾಲ್ಮೀಕಿಗಳು ಎಷ್ಟು ರಚಿಸಿದ್ದರೋ, ಅಷ್ಟೇ ಇಲ್ಲ; ಹೇಗೆ ರಚಿಸಿದ್ದರೋ ಹಾಗೆಯೇ ಇಲ್ಲ. ಅದರಲ್ಲಿ ಕಾಲಕಾಲಕ್ಕೆ ಅದೆಷ್ಟೋ ಪ್ರಕ್ಷೇಪಗಳಾಗುತ್ತಾ ಬಂದಿದೆ - ಎಂಬಂಶವನ್ನು ಪಾಠಕರ ಗಮನಕ್ಕೆ ತರುವುದು ಅವಶ್ಯಕವೆಂದು ತೋರುತ್ತದೆ. ಬೌದ್ಧಯುಗದಲ್ಲಿಯಂತೂ ಮೂಲ ರಾಮಾಯಣದ ಕಾಯಕಲ್ಪವೇ ಆಗಿಹೋದಂತೆ ಕಾಣುತ್ತದೆ. ರಾಮಾಯಣದಲ್ಲಿನ -
ಯಥಾ ಹಿ ಚೋರಃ ಸ ತಥಾ ಹಿ ಬುದ್ಧಸ್ತಥಾಗತಂ ನಾಸ್ತಕಮತ್ರ ವಿದ್ಧಿ| ತಸ್ಮಾದ್ಧಿ ಯಃ ಶಂಕೃತಮಃ ಪ್ರಜಾನಾಂ ನ ನಾಸ್ತಿಕೇನಾಭಿಮುಖೋ ಬುಧಃ ಸ್ಯಾತ್|| (ಅಯೋಧ್ಯಾ.೧೦೯.೩೪.) ಚೋರನು ಹೇಗೋ ಹಾಗೆಯೇ ತಥಾಗತನನ್ನು ಈ ಲೋಕದಲ್ಲಿ ನಾಸ್ತಿಕನೆಂದೇ ತಿಳಿ. ಜನರಿಗೆ ಅತ್ಯಂತ ಸಂದೇಹಾಸ್ಪದನು ನಾಸ್ತಿಕ. ಎಂದಿಗೂ ವಿದ್ವಾಂಸನು ನಾಸ್ತಿಕನಿಗೆ ಎದುರಾಗಬಾರದು - ಎಂಬ ಶ್ಲೋಕವನ್ನೋದಿದ ಮೇಲೆ, ಬೌದ್ಧಮತದ ಆಕ್ರಮಣದಿಂದ ವೈದಿಕರನ್ನು ರಕ್ಷಿಸುವ ಸಲುವಾಗಿ, ರಾಮಾಯಣದಲ್ಲಿ ಬೌದ್ಧಮತಖಂಡನದ ಶ್ಲೋಕಗಳು ಸೇರಿಸಲ್ಪಟ್ಟಿದೆಯೆಂಬುದರಲ್ಲಿ ಯಾರಿಗೂ ಸಂದೇಹ ಉಳಿಯಲಾರದು. ಅನ್ಯಥಾ, ರಾಮನ ಯುಗವಾವುದು?! ವಾಲ್ಮೀಕಿಗಳ ಕಾಲವಾವುದು?! ಬುದ್ಧನ ಕಾಲವಾವುದು?! ವಸ್ತುತಃ ಸುಪ್ರಸಿದ್ಧ ಸುಧಾರಕನಾದ ಗೌತಮಬುದ್ಧನು ಸ್ವತಃ ದೇವರಾಗಿ ಕುಳಿತು, ಬೌದ್ಧ ದೇಗುಲಗಳಲ್ಲಿ ಷೋಡಶೋಪಚಾರಸಹಿತ ವಿಜೃಂಭಣೆಯ ಪೂಜೆ ಪಡೆಯಲಾರಂಭಿಸಿ ಜನಸಾಧಾರಣರನ್ನು ತನ್ನ ಕಡೆ ಆಕರ್ಷಿಸಹತ್ತಿದಾಗ, ಶ್ರೀರಾಮ, ಶ್ರೀಕೃಷ್ಣಾದಿಗಳನ್ನೂ ದೇವರ ಮಟ್ಟಕ್ಕೋ, ಪಟ್ಟಕ್ಕೋ ಏರಿಸಿ ದೇವಾಲಯಗಳನ್ನು ಸ್ಥಾಪಿಸಿ, ಅತ್ತ ಸರಿಯುವವರನ್ನು ಇತ್ತಲೇ ಒತ್ತಿ ಹಿಡಿಯುವ ಪ್ರಯತ್ನಗಳು ನಡೆದವು. ಶ್ರೀರಾಮ, ವಿಷ್ಣುವಿನ ಅರ್ಧಾಂಶಸಂಭೂತ, ದೇವದಾನವ ಗಂಧರ್ವಾದಿಗಳಿಂದ ಸಾಯದಿದ್ದ ರಾವಣನನ್ನು ಬಲಿಹಾಕಲು ವಿಷ್ಣುವೇ ಮಾನವರೂಪದಲ್ಲಿ ದರೆಗಿಳಿದು ಬಂದ ಎಂಬ ಕೇವಲ ಕಲ್ಪನೆಗಳಿಂದ ಕೂಡಿದ ಶ್ಲೋಕಗಳನ್ನು ಅಲ್ಲಲ್ಲಿ ತೂರಿಸಲಾಯಿತು. ಬೇರಾವುದೋ ಲೋಕದಲ್ಲಿ ಸೇರಿದ ದೇವತೆಗಳ ಸಭೆ, ನಾರಾಯಣನಿಗೆ ಶರಣಾಗತರಾಗುವುದು, ರಾವಣನಿಗೆ ಬ್ರಹ್ಮನಿಂದ ವರಪ್ರಾಪ್ತಿ - ಇತ್ಯಾದಿ ಬುದ್ಧಿವಿರುದ್ದವಾದ, ವೇದವಿರುದ್ಧವಾದ ಅಪಸಿದ್ಧಾಂತಗಳನ್ನು ಗ್ರಂಥದಲ್ಲಿ ತುಂಬಲಾಯಿತು. ಬಾಲಕಾಂಡದ ಪ್ರಥಮಸರ್ಗದಲ್ಲಿನ ಕಥಾಸಂಕ್ಷೇಪವೇ ತೃತೀಯ ಅರ್ಗದಲ್ಲಿ ಬೇರೆ ಶಬ್ದಗಳಲ್ಲಿ ಪುನರುಕ್ತವಾಗಿರುವುದು, ಕಾವ್ಯದಲ್ಲಿ ಏನೇನೋ ಸೇರಿಕೆಗಳಾಗಿವೆ ಎಂಬುದನ್ನು ಸೂಚಿಸುತ್ತಲಿದೆ. ಬೌದ್ಧಮತದ ಅಹಿಂಸಾ ಪ್ರಚಾರದಿಂದ ಮಾಂಸಾಹಾರಿಗಳಾದ ಜನರಲ್ಲಿ ಒಂದು ರೀತಿಯ ಕಳವಳ ತೋರಿಬಂತು. ಮಾಂಸಾಹಾರದಲ್ಲಿ ಏನೇನೂ ದೋಷವಿಲ್ಲ, ಶ್ರೀರಾಮಾದಿಗಳೂ ಮಾಂಸಾಹಾರ ಮಾಡುತ್ತಿದ್ದರು - ಎಂದು ಸಾಧಿಸಲನುಕೂಲಿಸುವಂತೆ:
 ತೌ ತತ್ರ ಹತ್ವಾ ಚತುರೋ ಮಹಾಮೃಗಾನ್ 
ವರಾಹಮೃಶ್ಯಂ ಪ್ರಷತಂ ಮಹಾರುರುಮ್| 
ಆದಾಯ ಮೇಧ್ಯಂ ತ್ವರಿತಂ ಬುಭುಕ್ಷಿತೌ 
ವಾಸಾಯ ಕಾಲೇ ಯಯತುರ್ವನಸ್ಪತಿಮ್|| (ಅಯೋಧ್ಯಾ.೫೨.೧೦೨.)
     ಆ ಹಸಿದ ರಾಮಲಕ್ಷ್ಮಣರು ನಾಲ್ಕು ಮಹಾಮೃಗಗಳನ್ನಲ್ಲಿ ಕೊಂದು ತಿನ್ನಲರ್ಹವಾದ ಮಾಂಸವನ್ನುಂಡು, ವಾಸ ಮಾಡಲು ಮರದಡಿಗೆ ನಡೆದರು - ಈ ಬಗೆಯ ಶ್ಲೋಕಗಳನ್ನೂ ತೂರಿಸಿದರು. ಹಾಗೆಯೇ, ವೇದವಿರುದ್ಧವಾದರೂ ವೇದಗಳ ಹೆಸರಿನಲ್ಲಿಯೇ ಪ್ರಚಲಿತವಾಗಿದ್ದು, ಬೌದ್ಧ, ಜೈನಮತೀಯರಿಂದ ಖಂಡಿಸಲ್ಪಡುತ್ತಿದ್ದ ಪಶುಹಿಂಸಾಮಯವಾದ ಯಜ್ಞಗಳನ್ನೂ, ಧರ್ಮಾನುಕೂಲ ಎಂದು ಸಾಧಿಸಲು ದಶರಥನ ಅಶ್ವಮೇಧ ಯಾಗದಲ್ಲಿಯೂ ಕುದುರೆ ಕೊಲ್ಲಲ್ಪಟ್ಟಿತು - ಎಂಬರ್ಥ ಬರುವ ಶ್ಲೋಕಗಳನ್ನು ರಚಿಸಿ ಸೇರಿಸಿದರು. (ನೋಡಿರಿ. ಬಾಲಕಾಂಡ. ೧೪.೩೬.೩೮.) ಪತತ್ರಿಣಸ್ತಸ್ಯ ವಪಾಮುದ್ಧೃತ್ಯ ನಿಯತೇಂದ್ರಿಯಃ| 
ಋತ್ವಿಕ್ ಪರಮಸಂಪನ್ನಃ ಶ್ರಪಯಾಮಾಸ ಶಾಸ್ತ್ರತಃ ||೩೬|| 
ಹಯಸ್ಯ ಯಾನಿ ಚಾಂಗಾನಿ ತಾನಿ ಸರ್ವಾಣಿ ಭೂಸುರಾಃ|| 
ಅಗ್ನೌ ಪ್ರಾಸ್ಯಂತಿ ವಿಧಿವತ್ ಸಮಸ್ತಾಃ ಷೋಡಷರ್ತ್ವಿಜಃ ||೩೮|| 
     ಚಾರ್ವಾಕರೂ, ಬೌದ್ಧರೂ ಖಂಡಿಸುತ್ತಿದ್ದ ಮೃತಕಶ್ರಾದ್ಧ ಪದ್ಧತಿಯನ್ನು ಸರಿ ಎಂದು ಸಾಧಿಸಲು, ಶ್ರೀರಾಮನ ಬಾಯಿನಿಂದ ಜಾಬಾಲಿಯಾಡಿದ ನಾಸ್ತಿಕ್ಯ ಸೂಚಕ ವಾಕ್ಯಗಳನ್ನು ಖಂಡನೆ ಮಾಡಿಸಿದರು. (ನೋಡಿ, ಅಯೋಧ್ಯಾ.೧೦೮, ೧೦೯ನೆಯ ಸರ್ಗಗಳು). ಬೌದ್ಧರು ಜಾತಿ-ಕುಲ ನೋಡದೆ ಇಚ್ಛುಕರಾದವರಿಗೆಲ್ಲಾ ಭಿಕ್ಷುದೀಕ್ಷೆ ಕೊಡುತ್ತಿದ್ದರು. ಪರಿಣಾಮತಃ ವೈದಿಕರೆನಿಸಿಕೊಂಡವರಿಂದ ಅವಜ್ಞೆಗೆ ಗುರಿಯಾಗಿದ್ದ ಶೂದ್ರರನೇಕರು ಭಿಕ್ಷುಗಳಾಗಹತ್ತಿದರು. ಜನಸಾಧಾರಣರಲ್ಲಿ ಇಂತಹ ಶೂದ್ರಯತಿಗಳಿಗೆ ಗೌರವ ಸಿಕ್ಕದಿರಲಿ ಎಂಬ ಭಾವನೆಯನ್ನಿಟ್ಟುಕೊಂಡು, ಶಂಬೂಕನೆಂಬ ಶೂದ್ರ ತಪಸ್ಸು ಮಾಡುತ್ತಿದ್ದ, ಆ ತಪ್ಪಿಗಾಗಿ ಶ್ರೀರಾಮ ಅವನನ್ನು ಬಲಿಹಾಕಿದ, 
ಭಾಷತಸ್ತಸ್ಯ ಶೂದ್ರಸ್ಯ ಖಡ್ಗಂ ಸುರುಚಿರಪ್ರಭಮ್ | 
ನಿಷ್ಕೃಷ್ಯ ಕೋಶಾದ್ವಮಲಂ ಶಿರಶ್ಚಿಚ್ಛೇದ ರಾಘವಃ || (ಉತ್ತರ.೭೬.೪.) 
-ಎಂದು ಒಂದು ಕಲ್ಪಿತ ಘಟನೆಯನ್ನು ಸೇರಿಸಿಬಿಟ್ಟರು. ರಾಮಾಯಣದ ಕರ್ತೃಗಳಾದ ವಾಲ್ಮೀಕಿಗಳೂ ಬೇಡರೇ ತಾನೇ? ಆದರೂ ತಮ್ಮ ತಪೋಬಲದಿಂದ ಮಹತ್ವಗಳಿಸಿದ ಆ ವಾಲ್ಮೀಕಿಗಳನ್ನು ಗೌರವಿಸುತ್ತಿದ್ದ ಶ್ರೀರಾಮ, ಶಂಬೂಕನನ್ನು ಕೊಲ್ಲಲು ಸಾಧ್ಯವಿತ್ತೇ? ಸಂಪೂರ್ಣ ಉತ್ತರಕಾಂಡವೇ ಪ್ರಕ್ಷಿಪ್ತ. ಅದು ವಾಲ್ಮೀಕಿಕೃತವೇ ಅಲ್ಲ. ಆರನೆಯ ಕಾಂಡವಾದ ಯುದ್ಧಕಾಂಡದ ಕೊನೆಯ ಸರ್ಗದಲ್ಲಿ ಶ್ರೀರಾಮನ ಪಟ್ಟಾಭಿಷೇಕ ಮತ್ತು ರಾಮರಾಜ್ಯದ ವರ್ಣನೆಯಾದ ನಂತರ ಈ ಶ್ಲೋಕ ಕಂಡುಬರುತ್ತದೆ: 
ಧನ್ಯಂ ಯಶಸ್ಯಮಾಯುಷ್ಯಂ ರಾಜ್ಞಾಂ ಚ ವಿಜಯಾವಹಮ್ | 
ಆದಿಕಾವ್ಯಮಿದಂ ತ್ವಾರ್ಷಂ ಪುರಾ ವಾಲ್ಮೀಕಿನಾ ಕೃತಮ್ || (ಯುದ್ಧ.೧೩೧.೧೦೭.)
      ಇದು ಹಿಂದೆ ವಾಲ್ಮೀಕಿಗಳಿಂದ ರಚಿತವಾದ, ಧನಪ್ರದವೂ, ಯಶಃಪ್ರದವೂ, ಆಯುಃಪ್ರದವೂ, ರಾಜರಿಗೆ ವಿಜಯಪ್ರದವೂ, ಆರ್ಷವೂ ಆದ ಆದಿಕಾವ್ಯ. ಈ ಶ್ಲೋಕದವರೆಗೆ ವಾಲ್ಮೀಕಿಕೃತಿ - ಎಂಬುದು ಸ್ಪಷ್ಟವೇ ಆಗಿದೆ. ಬಾಲಕಾಂಡದ ನಾಲ್ಕನೆಯ ಸರ್ಗದಲ್ಲಿ ಷಟ್ಕಾಂಡಾನಿ ತಥೋತ್ತರಮ್| (೪.೨) ಆರು ಕಾಂಡಗಳನ್ನೂ, ಉತ್ತರಕಾಂಡವನ್ನೂ ವಾಲ್ಮೀಕಿಗಳು ಹೇಳಿದರು - ಎನ್ನಲಾಗುತ್ತಿರಲಿಲ್ಲವೇ? ಅದರ ಮುಂದಿನ ಶ್ಲೋಕದಲ್ಲೂ ಸಹೋತ್ತರಂ - ಉತ್ತರಕಾಂಡಸಮೇತ ಎಂದು ಕಥನವಿದೆ, ಮತ್ತು ವಾಲ್ಮೀಕಿಗಳು ಹೇಳಿದರು - ಎಂದಿರುವುದರಿಂದ, ಈ ಶ್ಲೋಕ ಬೇರಾರದೋ - ಎಂಬುದು ಸ್ಪಷ್ಟವೇ. ಮತ್ತೆ ಉತ್ತರಕಾಂಡದಲ್ಲಿ:
 ಏತಾವದೇತದಾಖ್ಯಾನಂ ಸೋತ್ತರಂ ಬ್ರಹ್ಮಪೂಜಿತಮ್ | 
ರಾಮಾಯಣಮಿತಿ ಖ್ಯಾತಂ ಮುಖ್ಯಂ ವಾಲ್ಮೀಕಿನಾ ಕೃತಮ್ || (ಉತ್ತರ.೧೧೧.೧.)
      ಇಲ್ಲಿಯವರೆಗಿನದು, ಬ್ರಹ್ಮಪೂಜಿತವಾದ, ಉತ್ತರಕಾಂಡ ಸಹಿತವಾದ, ರಾಮಾಯಣವೆಂದು ಪ್ರಸಿದ್ದವಾದ ಆಖ್ಯಾನ. ಮುಖ್ಯವಾದುದು ವಾಲ್ಮೀಕಿ ರಚಿತ ಎಂಬ ಶ್ಲೋಕ ಕಂಡುಬರುತ್ತದೆ. ಉತ್ತರಕಾಂಡ ಸಹಿತವಾದ ಮತ್ತು ಮುಖ್ಯವಾದುದು ಈ ಉಕ್ತಿಗಳು. ಉತ್ತರಕಾಂಡ, ಆದಿ ರಾಮಾಯಣದ ಅಭಿನ್ನಾಂಗವಲ್ಲ; ಮೊದಲನೆಯ ಆರು ಕಾಂಡಗಳು ಮಾತ್ರ ಮುಖ್ಯ - ವಾಲ್ಮೀಕಿಕೃತ - ಎಂಬ ನಿರ್ಣಯಕ್ಕೇ ಬೆಂಬಲ ಕೊಡುತ್ತಿದೆ. ನಾನೊಂದು ೨೦ ಅಧ್ಯಾಯಗಳ ಗ್ರಂಥ ರಚಿಸಿದ್ದೇನೆ - ಎಂದಿಟ್ಟುಕೊಳ್ಳೋಣ. ಆಗ ೨೦ ಅದ್ಯಾಯಗಳ ಗ್ರಂಥ ಈ ಲೇಖಕರ ರಚನೆ - ಎನ್ನಬೇಕೋ, ೨೦ನೇ ಅಧ್ಯಾಯಸಮೇತವಾದ, ೧೯ ಅಧ್ಯಾಯಗಳ ಗ್ರಂಥ ಈ ಲೇಖಕರ ರಚನೆ ಎನ್ನಬೇಕೋ? ಎರಡನೆಯ ಹೇಳಿಕೆ - ೨೦ ಅಧ್ಯಾಯಗಳ ಕೃತಿಯಲ್ಲಿ, ೧೯ ಅಧ್ಯಾಯ ನನ್ನದು, ಕೊನೆಯದನ್ನು ಬೇರಾರೋ ಸೇರಿಸಿ, ನನ್ನ ತಲೆಗೆ ಸುತ್ತುತ್ತಿದ್ದಾರೆ - ಎಂಬ ಸಂಶಯಕ್ಕೆಡೆ ಕೊಡುವುದಿಲ್ಲವೇ? ವಸ್ತುತಃ ಮೊದಲ ಆರು ಕಾಂಡಗಳ ಭಾಷಾ ವೈಖರಿಯ ಮುಂದೆ ಉತ್ತರಕಾಂಡದ ಭಾಷೆ ಅತಿ ಸಪ್ಪೆಯಾಗಿದೆ. ಉತ್ತರಕಾಂಡ ಮತ್ತು ಅದರಲ್ಲಿ ಹೇಳಿರುವ ವಿಷಯಗಳು ವಾಲ್ಮೀಕಿ ಪ್ರೋಕ್ತವಂತೂ ಅಲ್ಲವೆಂಬುದು ನಿಶ್ಚಯ. ನಾನು ಇಷ್ಟೆಲ್ಲಾ ಹೇಳಿರುವುದರ ಉದ್ದೇಶ್ಯವಿಷ್ಟೆ. ಯಾರ ಧಾರ್ಮಿಕ ಭಾವನೆಗೂ ಧಕ್ಕೆ ತರುವುದು, ಯಾರ ಮನಸ್ಸನ್ನಾದರೂ ನೋಯಿಸುವುದು ನನ್ನ ಗುರಿಯಲ್ಲ. ಶ್ರೀರಾಮನ ಬಗೆಗೆ ನನ್ನ ಹೃದಯದಲ್ಲಿರುವ ಗೌರವಭಾವನೆ, ಯಾವ ರಾಮಭಕ್ತನ ಹೃದಯದಲ್ಲಿರುವ ಭಾವನೆಗಿಂತಲೂ ಎಳ್ಳಿನ ಕೋಟ್ಯಂಶದಷ್ಟೂ ಕಡಿಮೆಯಲ್ಲ. ರಾಮ ಎಂಬ ಎರಡಕ್ಷರ ಕಿವಿಯ ಮೇಲೆ ಬಿದ್ದೊಡನೆಯೇ ಇಂದೂ ನನ್ನ ತಲೆ ಶ್ರದ್ಧೆಯಿಂದ ಬಾಗಿಹೋಗುತ್ತದೆ. ಆದರೆ ಶ್ರೀರಾಮನನ್ನು ದೇವರೆಂದು ಕರೆದು, ಅತ್ತ ಸರ್ವಶ್ರೇಷ್ಠ-ಸರ್ವಜ್ಯೇಷ್ಠ ಪ್ರಭುವಿನ ನಿಜಸ್ವರೂಪವನ್ನೂ ಮರೆತು, ಅತ್ತ ಆಧ್ಯಾತ್ಮಿಕ ಉತ್ಕರ್ಷ, ಇತ್ತ ಲೌಕಿಕ ಅಭ್ಯುದಯ ಎರಡಕ್ಕೂ ಸೊನ್ನೆ ಸುತ್ತಿಕೊಳ್ಳಲು ಮಾತ್ರ ನಾನು ಸಿದ್ಧನಾಗಿಲ್ಲ. ಸಮಸ್ತ ಪರಂಪರಾಗತ ಪಕ್ಷಪಾತಕ್ಕೂ ಅಂಧವಿಶ್ವಾಸಕ್ಕೂ, ತಿಲಾಂಜಲಿಯಿತ್ತು, ದೇವರ ಜೀವನಚರಿತ್ರೆಯೆಂದಲ್ಲ; ಧರ್ಮಶಾಸ್ತ್ರವೆಂದೂ ಅಲ್ಲ; ಒಬ್ಬ ಮಹಾಪ್ರಗಲ್ಭ, ಕಾವ್ಯಶಾಸ್ತ್ರ ವಿಶಾರದ, ಕವಿಸಾಮ್ರಾಟ್ ಮಹರ್ಷಿ ಪ್ರವರನಿಂದ ರಚಿತವಾದ, ಒಬ್ಬ ಮಹಾಮಾನವ ಆದರ್ಶಮಯ ಜೀವನೇತಿಹಾಸ - ಎಂಬ ಭಾವನೆಯಿಂದ ಎಲ್ಲರೂ ಶ್ರೀಮದ್ರಾಮಾಯಣವನ್ನು ಓದುವಂತಾಗಬೇಕು. ಅದಕ್ಕೆ ಸ್ವಲ್ಪವಾದರೂ ಪ್ರೇರಣೆ ಸಿಕ್ಕಬೇಕು; ಎಲ್ಲರ ಬಾಳಿಗೂ ಬೆಳಕು ಸಿಕ್ಕಬೇಕು ಎನ್ನುವುದೊಂದೇ ಈ ಪುಸ್ತಕ ರಚನೆಯಲ್ಲಿರುವ ನನ್ನ ಉದ್ದೇಶ್ಯ. ಪ್ರಕ್ಷಿಪ್ತ ಭಾಗಗಳನ್ನು ಬಿಟ್ಟರೆ, ಇಂದೂ ಶ್ರೀಮದ್ರಾಮಾಯಣ ಕೇವಲ ಭಾರತೀಯರಿಗಲ್ಲ; ಸಂಪೂರ್ಣ ಮಾನವಜಾತಿಗೆ ಬಾಳಿನ ಕೈಗನ್ನಡಿಯಾಗಿ, ನಡೆನುಡಿಯ ಕೆಡುಕಿಲ್ಲದ ಪಡಿಯಚ್ಚಾಗಿ ಉತ್ಥಾನಪಥದ ಉಜ್ವಲ ಪ್ರದೀಪವಾಗಿ ಸಹಾಯಕವಾಗಬಲ್ಲದು, ಅದು ಹೇಗೆಂಬುದರ ಕಿರುನೋಟವನ್ನೀ ಕೃತಿಯಲ್ಲಿ ಪಾಠಕರು ಕಾಣಬಲ್ಲರು. ಸಂಪೂರ್ಣ ವಿಶ್ವವಂತಿರಲಿ; ಇಂದು ನೆತ್ತಿಯ ಮೇಲೆ ಚೀಣದಿಂದ, ಅಕ್ಕಪಕ್ಕಗಳಿಂದ ಪಾಕಿಸ್ತಾನದಿಂದ, ಕೆನ್ನೆಯ ಮೆಲೆ ಕಾಶ್ಮೀರದ ಒಬ್ಬ ಪಥಭ್ರಷ್ಟ ನಾಯಕನಿಂದ ಪೆಟ್ಟು ತಿನ್ನುತ್ತಿರುವ, ಅಂಗಾಲುಗಳ ಮೇಲೆ ಇಂಡೋನೇಷಿಯದಿಂದ ಮುಳ್ಳು ಚುಚ್ಚಿಸಿಕೊಳ್ಳುತ್ತಿರುವ, ವಿದೇಶಗಳಿಂದ ಬರುವ ದ್ರವ್ಯವನ್ನು ನೀರಿನಂತೆ ಸುರಿದು ಹಸಿದವರ ಮನ ಒಲಿಸಿಕೊಂಡು ದೇಶದ ಜನರ ಧರ್ಮಕ್ಕೇ ಸಂಚಕಾರ ತರುತ್ತಿರುವ ಪಾದರಿಗಳಿಂದ ಕೊಳ್ಳೆ ಹೊಡೆಸಿಕೊಳ್ಳುತ್ತಿರುವ, ಹಾಸಿಗೆಯಲ್ಲೇ ಸೇರಿಕೊಂಡು ರಕ್ತ ಹೀರುವ ತಿಗಣೆಗಳಂತೆ, ದೇಶದಲ್ಲೇ ಸೇರಿಕೊಂಡು ದೇಶದ ಸತ್ವವನ್ನೇ ಹೀರುತ್ತಿರುವ, ಸದಾ ಮತಭ್ರಾಂತರಾಗಿಯೇ ವರ್ತಿಸುತ್ತಿರುವ ವಿಶೇಷ ಕೃಪಾಪಾತ್ರ ಅಲ್ಪಸಂಖ್ಯಾತರಿಂದ ಜರ್ಜರೀಭೂತವಾಗುತ್ತಿರುವ, ನ್ಯಾಯವಾಗಿ ಸಿಕ್ಕಬೇಕಾದ ಸಾಮಾಜಿಕ ಅಧಿಕಾರಿಗಳು ಸಿಕ್ಕದೆ, ಇನ್ನೂ ಚೀತ್ಕರಿಸುತ್ತಿರುವ ಹಿಂದುಳಿದವರ ಶಾಪದ ಕಾರಣದಿಂದ ತತ್ತರಿಸುತ್ತಿರುವ, ಸ್ವಸುಖಸಾಧನ ಸಂಪತ್ತಿನ ಸುಖನಿದ್ರೆಯಲ್ಲಿ ಗೊರಕೆ ಹೊಡೆಯುತ್ತಿರುವ ರಾಷ್ಟ್ರಭಕ್ತರ ಕರುಣೆಯಿಂದ ಕಂಗೆಡುತ್ತಿರುವ, ದಾರಿದ್ರ್ಯ-ರೋಗ-ಅಜ್ಞಾನ-ಭಯಗಳಿಂದ ಹಾಹಾಕಾರ ಮಾಡುತ್ತಿರುವ ಜನರಿಂದ ಕೂಡಿರುವ ಈ ನಮ್ಮ ಮಾತೃಭೂಮಿಯಾದರೂ ಶ್ರೀರಾಮನತ್ತ ತಿರುಗಿ ನೋಡಿದರೆ, ಈಗಲೂ ಆಶಾಸಂಚಾರವಾದೀತು. ನಾನು ಇದೇ ಪವಿತ್ರ ಭಾವನೆಯಿಂದ ಪ್ರೇರಿತನಾಗಿ, ಈ ಪುಸ್ತಕವನ್ನು ಬರೆದಿದ್ದೇನೆ. ನಮ್ಮೆಲ್ಲರ ಪರಮಶಾಸ್ತ್ರವಾದ ವೇದ ಹೇಳುತ್ತಲಿದೆ: 


ಸುಜ್ಞಾನಂ ಚಿಕಿತುಷೇ ಜನಾಯ ಸಚ್ಚಾಸಚ್ಚ ವಚಸೀ ಪಸ್ಪೃಧಾತೇ |
ತಯೋರ್ಯತ್ ಸತ್ಯಂ ಯತರದೃಜೀಯಸ್ತದಿತ್ ಸೋಮೋsವತಿ ಹಂತ್ಯಾಸತ್|| (ಋಕ್.೭.೧೦೪.೧೨.)
      [ಚಿಕಿತುಷೇ ಜನಾಯ] ತಿಳಿಯಬಯಸುವ ಮಾನವನಿಗೆ [ಸುವಿಜ್ಞಾನಮ್] ಒಳ್ಳೆಯ ವಿಜ್ಞಾನವಿದೆ. [ಸತ್ ಚ ಅಸತ್ ಚ] ಸತ್ಯವಾದ ಮತ್ತು ಅಸತ್ಯವಾದ [ವಚಸೀ] ಮಾತುಗಳು [ಪಸ್ಪೃಧಾತೇ] ಪರಸ್ಪರ ಹೋರಾಡುತ್ತಲೇ ಇರುತ್ತವೆ. [ತಯೋಃ] ಅವೆರಡರಲ್ಲಿ [ಯತ್ ಸತ್ಯಮ್] ಯಾವುದು ಸತ್ಯವೋ, ಅದನ್ನು [ಯತರತ್ ಋಜೀಯಃ] ಯಾವುದು ನೇರವಾಗಿದೆಯೋ [ತತ್ ಇತ್] ಅದನ್ನೇ [ಸೋಮಃ] ಉದ್ವೇಗರಹಿತನಾದ, ಶಾಂತಿಗುಣಯುಕ್ತನಾದ ವಿವೇಚಕನು [ಅವತಿ] ಪಾಲಿಸುತ್ತಾನೆ. [ಅಸತ್] ಅಸತ್ಯವನ್ನು [ಅಹಂತಿ] ನಿರಂತರ ಸದೆಬಡಿಯುತ್ತಾನೆ.                      ಈ ಸತ್ಯ ತತ್ತ್ವಗಳನ್ನು ಅರಿತು, ನಮ್ಮ ಬಾಳನ್ನು ಹಸನಾಗಿ ಮಾಡೋಣ. ದೇವಾಸುರ ಸಂಗ್ರಾಮ ಎಂದೋ, ಯಾವುದೋ ಎರಡು ಗುಂಪುಗಳ ನಡುವೆ ನಡೆದು ಅಡಗಿಹೋಯಿತೆಂದು ತಿಳಿದರೆ ತಪ್ಪಾದೀತು. ಸತ್ಯಂ ವೈ ದೇವಾಃ| ಸತ್ಯವೇ ದೇವಜನ; ಅನೃತತಮಸುರಾಃ| - ಅಸತ್ಯವೇ ಅಸುರಗುಣ. ಈ ಸತ್ಯಾಸತ್ಯಗಳ ಸಂಘರ್ಷ ಮಾನವ ಜಾತಿಯ ಉದ್ಭವವಾದ ಕ್ಷಣದಲ್ಲೇ ಆರಂಭವಾಯಿತು. ಇಂದೂ ನಡೆಯುತ್ತಿದೆ; ಮಾನವಜಾತಿ ಇರುವವರೆಗೂ ನಡೆಯುತ್ತಲೇ ಹೋಗುತ್ತದೆ. ಹೊರಗೆ ಸಮಾಜದಲ್ಲೆಂತೋ ಒಳಗೆ ವ್ಯಕ್ತಿ ವ್ಯಕ್ತಿಯ ಹೃದಯದಲ್ಲಿಯೂ ಅಂತೆಯೇ ಈ ಸತ್ಯಾಸತ್ಯಗಳ ತಿಕ್ಕಾಟ ನಿರಂತರವಾಗಿ ಸಾಗುತ್ತಲೇ ಇರುತ್ತದೆ. ಮತ್ತು ಮಾನವನ ಸರ್ವಶ್ರೇಷ್ಠರೂಪ ಅವನ ಸೋಮರೂಪವೇ. ಸೋಮಃ ಸುನೋತೇಃ| ಸಾರ ಹಿಂಡಿ ತೆಗೆಯುವವನೇ ಸೋಮ - ಎಂದರೆ, ವಿವೇಚಕನೇ, ವಿಚಾರಶೀಲನೇ ಸೋಮ. ಸೋಮ - ಎಂಬ ಶಬ್ದಕ್ಕೆ ಶಾಂತ, ಉದ್ರೇಕ ರಹಿತ, ಅನುದ್ವೇಗ ಎಂಬರ್ಥವೂ ಇದೆ. ಈ ರೀತಿ ಉರಿದು ಬೀಳದೆ, ತನಗೆ ಪ್ರತಿಕೂಲವಾದುದು ಕಿವಿಗೆ ಬಿದ್ದಾಗ ಉದ್ರೇಕಗೊಳ್ಳದೆ, ಪಕ್ಷಪಾತಕೆ, ದುರಾಗ್ರಹಕ್ಕೆ ಸಿಲುಕದೆ, ಶಾಂತಿಯಿಂದ ವಿವೇಚನೆ ಮಾಡಿ ಸತ್ಯವನ್ನು ರಕ್ಷಿಸಿ, ಅಸತ್ಯವನ್ನು ಬಲಿ ಹಾಕುವ ಮಾನವನೇ ಸೋಮ. ದೇವಾಸುರ ಸಂಗ್ರಾಮದಲ್ಲಿ, ಸದಸತ್ಸಂಘರ್ಷದಲ್ಲಿ, ದೇವಪಕ್ಷ ವಹಿಸಿ, ಸತ್ಪಕ್ಷಕ್ಕೆ ಸೇರಿ, ಸತ್ಯ ರಕ್ಷಣೆಗಾಗಿ ಹೋರಾಡುವ ಸೋಮರಾಗಬೇಕು. ನಮ್ಮವರೆಲ್ಲಾ ಇದೇ ನಿರೀಕ್ಷಣೆಯಿಂದ ಈ ಪಂಕ್ತಿಗಳನ್ನು ಬರೆದಿದ್ದೇನೆ. ಬನ್ನಿರಿ, ಪಾಠಕ ಬಂಧುಗಳೇ! ನಾವೆಲ್ಲಾ ಈ ಅದ್ಭುತ ದೇವಸೇನೆಯನ್ನು ಸೇರೋಣ: 
ಇಂದ್ರ ಏಷಾಂ ನೇತಾ ಬ್ರಹ್ಮಸ್ಪತಿರ್ದಕ್ಷಿಣಾ
 ಯಜ್ಞಃ ಪುರ ಏತು ಸೋಮಃ|
 ದೇವಸೇನಾನಾಮ್ ಅಭಿಭಂಜತೀನಾಂ 
ಜಯಂತೀನಾಂ ಮರುತೋ ಯಂತು ಮಧ್ಯೇ|| (ಅಥರ್ವ.೧೯.೧೩.೯.)
 [ಏಷಾಂ ನೇತಾ] ಈ ಮಾನವರ ನಾಯಕನು, [ಬ್ರಹಸ್ಪತಿಃ] ವಿಶ್ವಬ್ರಹ್ಮಾಂಡದ ಪತಿಯೂ, ಸರ್ವಜ್ಞನೂ ಆದ, [ಇಂದ್ರ] ಸರ್ವಶಕ್ತಿಮಾನ್ ಪ್ರಭು, [ದಕ್ಷಿಣಾ} ಇವರಿಗೆ ಸಿಕ್ಕುವ ದಕ್ಷಿಣೆ [ಯಜ್ಞಃ] ತ್ಯಾಗ, [ಸೋಮಃ] ಶಾಂತ ವಿವೇಚಕನು, [ಪುರಃ ಏತು] ಮುಂದೆ ನಡೆಯಲಿ. [ಮರುತಃ] ಸಂಯಮಿಗಳಾದ ಮಾನವರು [ಅಭಿಭಂಜತೀನಾಮ್] ಅಸತ್ಯವನ್ನು ತುಂಡರಿಸಿ ಚೆಲ್ಲುತ್ತಾ [ಜಯಂತೀನಾಮ್] ಜಯಗಳಿಸುತ್ತಾ ಸಾಗುತ್ತಿರುವ [ದೇವಸೇನಾನಾಂ ಮಧ್ಯೇ] ದೇವಸೇನೆಗಳ ನಡುವೆ, [ಯಂತು] ನಡೆಯಲಿ. 
     ಸತ್ಯಾಸತ್ಯ ವಿವೇಚನೆ ಇಂದು ವ್ಯಕ್ತಿ ವ್ಯಕ್ತಿಯ ಆಧ್ಯಾತ್ಮಿಕ ಉನ್ನತಿಗೆ ಎಷ್ಟು ಆವಶ್ಯಕವೋ, ಸಾಮಾಜಿಕ, ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಕಲ್ಯಾಣಕ್ಕೂ ಅಷ್ಟೇ ಆವಶ್ಯಕ. ಸತ್ಯರಕ್ಷಣೆಗಾಗಿ ನಾವೆಲ್ಲಾ ಉದಾರಮನಸ್ಕರಾಗಿ, ಪಕ್ಷಪಾತರಹಿತರಾಗಿ, ಸ್ವತಃ ದೇವಜನರಾಗಿ ದೇವ ಸೈನ್ಯದ ಸೈನಿಕರಾಗೋಣ. ಕೇಳಿರಿ: ಇಂದ್ರಸ್ಯ ವೃಷ್ಣೋ ವರುಣಸ್ಯ ರಾಜ್ಞ ಆದಿತ್ಯಾನಾಂ ಮರುತಾಂ ಶರ್ಧ ಉಗ್ರಮ್| ಮಹಾಮನಸಾಂ ಭುವನಚ್ಯವಾನಾಂ ಘೋಷೋ ದೇವಾನಾಂ ಜಯತಾಮುದಸ್ಥಾತ್|| (ಅಥರ್ವ.೧೯.೧೩.೧೦.) [ವೃಷ್ಣಃ] ಸುಖವರ್ಷಕನೂ, ಧರ್ಮರೂಪನೂ [ವರುಣಸ್ಯ] ದುಃಖನಿವಾರಕನೂ, ವರಣೀಯನೂ [ರಾಜ್ಯಃ] ಜಗತ್ಸಾಮ್ರಾಟನೂ ಆದ, [ಇಂದ್ರಸ್ಯ] ಸರ್ವಶಕ್ತಿಮಾನ್ ಪ್ರಭುವಿನ [ಆದಿತ್ಯಾನಾಮ್] ಅಖಂಡ ಚಾರಿತ್ರರಾದ, ಪ್ರಾಮಾಣಿಕರಾದ [ಮರುತಾಮ್] ಸಂಯಮೀ ಮನವರ [ಶರ್ಧಃ] ಪ್ರತಿರಕ್ಷಣಾಸಾಮರ್ಥ್ಯ [ಉಗ್ರಮ್] ಉಗ್ರವಾಗಿರುತ್ತದೆ. [ಮಹಾಮನಸಾಮ್] ಮಹಾಮನಸ್ಕರಾದ [ಭುವನಚ್ಯವಾನಾಮ್] ಮಹಾನ್ ಕ್ರಾಂತಿಕಾರರಾದ [ಜಯತಾಮ್] ಗೆಲ್ಲುತ್ತಲೇ ಸಾಗುವ [ದೇವಾನಮ್] ದೇವಜನರ [ಘೋಷಃ] ಜಯಘೋಷವು [ಉತ ಅಸ್ಥಾತ್] ಆಗಸಕ್ಕೇರುತ್ತದೆ. 
      ಸ್ವತಃ ದೇವಜನರಾಗಿ, ದೇವ ಸೈನ್ಯದ ಸೈನಿಕರಾದ ಮಾನವರು ಎಂತಹ ಮಹಿಮಾ ಸಂಪನ್ನರಾಗುವರೆಂಬುದನ್ನು ಸ್ವಯಂ ಋಗ್ವೇದ ಸ್ಪಷ್ಟವಾದ ಮಾತಿನಲ್ಲಿ ಹೇಳುತ್ತಿದೆ: ಋತಸ್ಯ ಗೋಪಾ ನ ದಭಾಯ ಸುಕ್ರತುಸ್ತ್ರೀ ಷ ಪವಿತ್ರಾ ಹೃದ್ಯಂತರಾ ದಧೇ| ವಿದ್ವಾನ್ ತ್ಸ ವಿಶ್ವಾ ಭುವನಾಭಿ ಪಶ್ಯತ್ಯವಾಜುಷ್ಟಾನ್ ವಿಧ್ಯತಿ ಕರ್ತೇ ಆವ್ರತಾನ್|| (ಋಕ್.೯.೭೩.೮.) [ಋತಸ್ಯ ಗೋಪಾ] ಋತದ, ಈಶ್ವರೀಯ ವಿಧಾನದ ಧರ್ಮದ ರಕ್ಷಕನು [ನ ದಭಾಯ] ಎಂದಿಗೂ ತುಳಿಯಲ್ಪಡಲಿಕ್ಕಿಲ್ಲ. [ಸ ಸುಕ್ರತುಃ] ಆ ಉತ್ತಮ ವಿಚಾರಶೀಲನೂ, ಆಚರಣವಂತನೂ ಆದ ಮಾನವನು [ಹೃದಿ ಅಂತಃ] ತನ್ನ ಹೃದಯದಲ್ಲಿ [ಸ್ತ್ರೀ ಪವಿತ್ರಾ] ಮೂರು ಪವಿತ್ರ ತತ್ತ್ವಗಳನ್ನು ಜ್ಞಾನ-ಕರ್ಮ-ಉಪಾಸನೆಗಳನ್ನು [ಆದಧೇ] ಸದಾ ಧರಿಸಿರುತ್ತಾನೆ. [ಸ ವಿದ್ವಾನ್] ಆ ಜ್ಞಾನಿಯಾದ ಮಾನವನು [ವಿಶ್ವಾಭುವನಾ ಅಭಿಪಶ್ಯತಿ] ಸಮಸ್ತ ಲೋಕಗಳನ್ನೂ ಎಲ್ಲಡೆಯಿಂದಲೂ ಯಥಾರ್ಥ ರೂಪದಲ್ಲಿ ನೋಡುತ್ತಾನೆ. [ಅಜುಷ್ಟಾನ್ ಅವ್ರತಾನ್] ಅಪ್ರಿಯರಾದ ವ್ರತರಹಿತರನ್ನು [ಕರ್ತೇ ಅವ ವಿಧ್ಯತಿ] ಪತನಕೂಪದಲ್ಲಿ ಕೆಳಗೆ ಬಿದ್ದವರನ್ನು ಕೂಡ ಉತ್ತಮ ಶಾಸನಕ್ಕೆ ಗುರಿಪಡಿಸುತ್ತಾನೆ.
      ಶ್ರೀರಾಮನ ಮುಂದಿದ್ದ ಆದರ್ಶವಿದೇ. ಆ ಮಹಾಮಾನವ ಭಗವಂತನನ್ನೇ ನಾಯಕನನ್ನಾಗಿ ಆರಿಸಿಕೊಂಡು, ಮಹಾಮನಸ್ಕನಾಗಿ, ಅದ್ಭುತ ಕ್ರಾಂತಿಕಾರಿಯಾಗಿ, ಅಸಚ್ಛಕ್ತಿಗಳೊಂದಿಗೆ ನಿರಂತರ ಹೋರಾಡಿದನು. ಕೊನೆಗೆ ಜಯಗಳಿಸಿದನು. ಆ ಪುರುಷನ ದಿವ್ಯ ಜೀವನದ ವೈಖರಿಯನ್ನು ಈ ಸಣ್ಣ ಪುಸ್ತಕದಲ್ಲಿ ವಿವರಿಸಲು ಯತ್ನಿಸಿದ್ದೇನೆ. ವಿಶ್ಲೇಷಣಾತ್ಮಕವೂ, ವಿಚಾರಪ್ರಚೋದಕವೂ ಆದ ಈ ರಚನೆ ಕೇವಲ ಸತ್ಯಾಸತ್ಯವಿವೇಚನೆಗಾಗಿ ಪಾಠಕರ ಕರಕಮಲಗಳಲ್ಲಿ ಸಮರ್ಪಿಸಲ್ಪಟ್ಟಿದೆ. ಪರಂಪರಾಗತ ನಂಬಿಕೆಗಳನ್ನೂ, ಸಾಂಪ್ರದಾಯಿಕ ಮನೋಭಾವವನ್ನೂ ಬದಿಗೊತ್ತುವುದು ಅಷ್ಟು ಸುಲಭವಲ್ಲ; ಅದಕ್ಕೆ ಉಕ್ಕಿನಂತಹ ಆತ್ಮಬಲ ಬೇಕು - ಎಂಬುದನ್ನು ನಾನು ಬಲ್ಲೆ. ಈ ಹಾಳೆಗಳನ್ನು ತಿರುವಿಹಕುವುದರಿಂದ ಪಾಠಕರ ಮನಸ್ಸಿನಲ್ಲಿ ಈವರೆಗೆ ಉದಿಸದಿದ್ದ ಪ್ರಶ್ನೆಗಳು ಉದ್ಭವಿಸತೊಡಗಿದರೆ, ನನ್ನ ಈ ಪರಿಶ್ರಮ ಸಾರ್ಥಕವಾಯಿತೆಂದೇ ನಾನು ತಿಳಿಯುತ್ತೇನೆ. ದಯಾಮಯನಾದ ದೇವದೇವನು ತನ್ನ ಒಬ್ಬ ನೆಚ್ಚಿನ ಮಗ ಮಹಾಮಾನವ ಶ್ರೀರಾಮನ ಪದ ಚಿಹ್ನೆಯಲ್ಲಿ ನಡೆಯಲು ಬೇಕಾದ ಮನೋಬಲವನ್ನು ನಮ್ಮೆಲ್ಲರಿಗೂ ಕರುಣಿಸಲಿ.
 ಶ್ರೀರಾಮನ ಒಬ್ಬ ಅನುಯಾಯಿ 
 -ಸುಧಾಕರ ಚತುರ್ವೇದಿ.
*************
[ವೇದಸುಧೆಯ ಗೌರವ ಸಂಪಾದಕರಾದ ಶ್ರೀ ಕವಿ ನಾಗರಾಜರು ತಮ್ಮ ಸ್ವಂತ  ಬ್ಲಾಗ್  "ವೇದಜೀವನ"ದಲ್ಲಿ ಪ್ರಕಟಿಸಿರುವ ಲೇಖನವನ್ನು ಇಲ್ಲಿ ಪುನರ್ ಪ್ರಕಟಿಸಲಾಗಿದೆ]

Friday, March 23, 2012

ಒಳ್ಳೆಯದು ಅಂದರೆ ಯಾವುದು? - ವೇದಸುಧೆ » Vedasudhe

ಒಳ್ ಅಂದರೆ ಇರುವುದು. ಅಂದರೆ ಯಾವಾಗಲೂ ಶಾಶ್ವತವಾಗಿ ಇರುವುದು. ಉಪನಿಷತ್ತಿನಲ್ಲಿ ಇದನ್ನು ಸತ್ ಎನ್ನುವರು. ಅಶಾಶ್ವತವಾದ ಜಗತ್ತಿನಲ್ಲಿ ಶಾಶ್ವತವಾದದ್ದು ಬ್ರಹ್ಮತತ್ವ ಮಾತ್ರ. ಅಂದರೆ ದೇವರು. ಡಿವಿಜಿಯವರ ಮಾತುಗಳನ್ನು ಡಾ.ಗುರುರಾಜ ಕರ್ಜಗಿಯವರ ಧ್ವನಿಯಲ್ಲಿ ಕೇಳಿ.

Thursday, March 22, 2012

ಪುಸ್ತಕದಿ ದೊರೆತರಿವು - ವೇದಸುಧೆ » Vedasudhe

ಪುಸ್ತಕದಿ ದೊರೆತರಿವು - ವೇದಸುಧೆ » Vedasudhe



ಪುಸ್ತಕದಿ ದೊರೆತರಿವು ಮಸ್ತಕದಿ ತಳೆದ ಮಣಿ
ಚಿತ್ತದೊಳು ಬೆಳೆದರಿವು ತರು ತಳೆದ ಪುಷ್ಪ|
ವಸ್ತು ಸಾಕ್ಷಾತ್ಕಾರವಂತರೀಕ್ಷಣೆಯಿಂದ
ಶಾಸ್ತ್ರಿತನದಿಂದಲ್ಲ -ಮಂಕುತಿಮ್ಮ||

ಪುಸ್ತಕದಿಂದ ದೊರೆತ ಜ್ಞಾನವು ತಲೆಯ ಮೇಲಿರುವ ಮಣಿಯಂತೆ [ಮಣಿಯು ಸದಾಕಾಲವೂ ತಲೆಯ ಮೇಲಿರಲು ಸಾಧ್ಯವಿಲ್ಲ, ಅದು ಬೀಳಲೇ ಬೇಕು, ಅಥವಾ ಕಿರೀಟದಲ್ಲಿರುವ ಮಣಿಯಾದರೆ ಮಲಗುವಾಗಲಾದರೂ ತೆಗೆದಿದಲೇ ಬೇಕು]
ಆದರೆ ಮನಸ್ಸಿನಲ್ಲಿ ಬೆಳೆದ ಅರಿವು ಗಿಡದಲ್ಲಿ ಅರಳಿದ ಹೂವಿನಂತೆ. ಗಿಡದಲ್ಲಿ ಹೂ ಅರಳಬೇಕಾದರೆ ಅದು ಗಿಡದ ಸಾರ ಸರ್ವಸ್ವವನ್ನು ಹೀರಿ ಅರಳಿರುತ್ತದೆ. ಹಾಗೆಯೇ ಮನಸ್ಸಿನಲ್ಲಿ ಅರಿವು ಮೂಡಬೇಕಾದರೆ ಜೀವನದ ಅನುಭವ ಆಗಿ ಮನದಲ್ಲಿ ಅರಿವು ಮೂಡಿರುತ್ತದೆ. ವಸ್ತು ಸಾಕ್ಷಾತ್ಕಾರವಾಗುವುದು ಒಳಮುಖದ ಚಿಂತನೆಯಿಂದ ಹೊರತು ಪಾಂಡಿತ್ಯದಿಂದ ಅಲ್ಲ.


Wednesday, March 14, 2012

ಶುಭೋದಯ ಶುಭವಾಗಲೆಂದು ಹರಸು ಓ ಶುಭವೇ  

ಶುಭವಾಗಲೆಂದು ಹರಸು ಓ ಶುಭವೇ ನಿನ್ನ 

ಹಾರೈಕೆಯೇ ನೀಡಿ ಎನಗೆ ಶುಭವ ಅಶುಭವಳಿಯೆ 

ಶುಭವಿಂದು ಹೊಳೆಯೆ ದಿನವೆಲ್ಲ ಮಂಗಳದಿ ಕಳೆಯೆ 

ಶುಭವಾಗಲೆಂದು ಹರಸು

ಓ ಶುಭವೇ ಮನದ ಕಶ್ಮಲವನು ತೊಳೆದು

ಸತ್ವದ ಜ್ಞಾನವದು ಬೆಳೆದುತತ್ವವದು ಬೆಳಕಾಗಿ

 ಹೊಳೆದುನಾನೆತ್ತರಕೆ ಬೆಳೆದು, 

ಬಾಳುವಂತೆ ಶುಭವಾಗಲೆಂದು ಹರಸು

 ಓ ಶುಭವೇ ಕೊರಗುವ ಮನವಿಂದು ತಿಳಿಯಾಗಲೆಂದು

 ದ್ವೇಷಾಸೂಯಗಳು ಅಳಿಯಲೆಂದು

 ಪ್ರೇಮಾಭಿಮಾನಗಳು ಬೆಳೆಯಲೆಂದು ನಾ, 

ಎಲ್ಲರೊಳು ಒಂದಾಗಿ ಬಾಳಲೆಂದು

ಶುಭವಾಗಲೆಂದು ಹರಸು

 ಓ ಶುಭವೇ ಶುಭವಾಗಲೆಂದು ಹರಸು ಓ ಪ್ರಭುವೇ


ಶ್ರದ್ಧಾಂಜಲಿ



"ಅನಾಯಾಸೇನ ಮರಣಂ ವಿನಾಧೈನ್ಯೇನ ಜೀವನಂ " -ಅನ್ನೋ ಮಾತು ಕೇಳಿದ್ದೆ. ನಿನ್ನೆ ನಮ್ಮನ್ನಗಲಿದ ನನ್ನ ಮಿತ್ರ ಶ್ರೀ ದಾಸೇಗೌಡರ ವಿಷಯದಲ್ಲಿ    ಆ  ಮಾತು  ನಿಜವಾಯ್ತು. ಜೀವವಿರುವಾಗ ದೇಹೀ ಅನ್ನುವ ಪರಿಸ್ಥಿತಿ ಬರಲಿಲ್ಲ. ಅನಾಯಾಸವಾಗಿ ಐದು ನಿಮಿಷದಲ್ಲಿ ಅವರ ಪ್ರಾಣಪಕ್ಷಿ ಹಾರಿಹೋಯ್ತು.

ಶ್ರೀ ದಾಸೇಗೌಡರು ಬಲು ಅಪರೂಪದ ವ್ಯಕ್ತಿ. ಅವರ ಬಗ್ಗೆ ನಾನು ಮಾತನಾಡುವ ಮುಂಚೆ ಅವರ ಬಗ್ಗೆ ಈಗ ತಾನೇ ಬಂದ ಒಂದು ಎಸ್.ಎಂ.ಎಸ್  ಸಂದೇಶವನ್ನು  ಯಥಾವತ್ತಾಗಿ ನಿಮ್ಮ ಗಮನಕ್ಕೆ ತಂದು ಬಿಡುವೆ. ಸಂದೇಶವನ್ನು ಕಳಿಸಿದವರು ರಾಷ್ಟ್ರೀಯ ಸ್ವಯಂಸೇವಕ ಸಂಘದ [R.S.S]  ಅಖಿಲ ಭಾರತ ಸಹ ಸರಕಾರ್ಯವಾಹ [All India  Joint General Secretary] ಮಾನನೀಯ ಶ್ರೀ ದತ್ತಾತ್ರೇಯ ಹೊಸಬಾಳೆ ಅವರು-" It is a personal loss to me" 

 ಶ್ರೀ ದತ್ತಾತ್ರೇಯ ಹೊಸಬಾಳೆಯವರು ಸಂಘದ ಪೂರ್ಣಾವಧಿ ಪ್ರಚಾರಕರು. ಅಷ್ಟೇ ಅಲ್ಲ.ಸಂಘದಲ್ಲಿ  ಅತ್ಯಂತ  ಉನ್ನತ ಜವಾಬ್ದಾರಿಯನ್ನು ಹೊತ್ತಿರುವವರು. ಅವರಿಗೆ "ಸ್ವಂತಕ್ಕೆ ನಷ್ಟ" ಎಂದರೆ ನಾವಾದರೂ ಊಹಿಸಬೇಕು. ಅವರಿಗೆ ಸ್ವಂತದ್ದು ಅಂತಾ ಏನೂ ಬಯಕೆಗಳಿಲ್ಲ. ಎಲ್ಲವೂ ಸಂಘಕ್ಕಾಗಿ, ಸಮಾಜಕ್ಕಾಗಿ. ಅಂತವರು ಈ ಮಾತು ಹೇಳಬೇಕೆಂದರೆ ಅದು ರಾಷ್ಟ್ರೀಯ ನಷ್ಟವೆಂದೆ ಭಾವಿಸ ಬೇಡವೇ.

ಕಳೆದ ಆರೇಳು ತಿಂಗಳಲ್ಲಿ  ಹಾಸನಕ್ಕೆ ಆಗಮಿಸಿದ್ದ ಕರ್ನಾಟಕ ಸರ್ಕಾರದ ಮಂತ್ರಿಗಳಾದ ಶ್ರೀ ವಿಶ್ವೇಶ್ವರ ಹೆಗ್ಡೆ ಕಾಗೇರಿಯವರು ಶ್ರೀ ದಾಸೆಗೌದರ ಬಗ್ಗೆ ಹೇಳಿದ ಮಾತು"  ಶ್ರೀ ದಾಸೆಗೌಡರು ಸಮಾಜದ ಕೆಲಸದಲ್ಲಿ ನನಗಿಂತ ಹಿರಿಯರು. ನನಗಿಂತ ಮುಂಚಿನಿಂದಲೂ ಸಂಘಕಾರ್ಯ, ABVP ಕೆಲಸ  ನಂತರ BJP ಯ ಹೊಣೆಯನ್ನು ಪ್ರಾಮಾಣಿಕವಾಗಿ ನಿರ್ವಹಿಸಿ ಬಂದ ಶ್ರೀ ದಾಸೆಗೌಡರಿಗೆ ರಾಜಕೀಯ ಸ್ಥಾನಮಾನವೇನೂ ಇಲ್ಲ ಎಂದರೆ ಆಶ್ಚರ್ಯವಾಗುತ್ತೆ.

 1975 ರ ಸುಮಾರಿನಲ್ಲಿ ದೇಶಕ್ಕೆ ತುರ್ತುಪರಿಸ್ಥಿತಿ ಬಂದಾಗ ದಾಸೇಗೌಡರು  ABVP [ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ] ನ  ಪೂರ್ಣಾವಧಿ ಕಾರ್ಯ ಕರ್ತರು.ನಾನು ಸಂಘದ ಕಾರ್ಯಕರ್ತ. ಅಬ್ಭಾ! ಅದೆಷ್ಟು ಕ್ರಿಯಾಶೀಲ ವ್ಯಕ್ತಿ! ಅದ್ಭುತ! ಅದ್ಭುತ!!  ಕಾರ್ಯಕರ್ತರ  ನಡುವೆ ಅವರು ಬೆರೆಯುತ್ತಿದ್ದ ಅವರ ಸ್ವಭಾವವಂತೂ ಎಲ್ಲರನ್ನೂ ಆಕರ್ಶಿಸಿತ್ತು .  ಕರ್ನಾಟಕದ ಮೂಲೆ ಮೂಲೆಗಳಲ್ಲಿ ದಾಸೆಗೌಡರ ಪರಿಚಿತರು ಈಗಲೂ ಇದ್ದಾರೆ. 

ಅವರು ನಡೆಸುತ್ತಿದ್ದ  ಹೊಯ್ಸಳ ಟೂರಿಸಂ  ಪತ್ರಿಕೆಗಾಗಿ ಬೇಲೂರಿನ ಡಾ.ಶ್ರೀವತ್ಸವಟಿಯವರೊಡನೆ ನಾವುಗಳು ಹಾಸನ ಜಿಲ್ಲೆಯ ಹಲವು ಊರುಗಳನ್ನು ಭೇಟಿ ಮಾಡಿ ಅಲ್ಲಿನ ದೇವಾಲಯಗಳ ಬಗ್ಗೆ ಮಾಹಿತಿ ತಂದು ಅವರ ಪತ್ರಿಕೆಯಲ್ಲಿ ಬರೆಯುತ್ತಿದ್ದೆವು.  ಅವರ ಕಲ್ಪನೆಯಾದರೋ ಬಲು ದೊಡ್ಡದು. ಹೊಯ್ಸಳ ಅಧ್ಯಯನ  ಕೆಂದ್ರವನ್ನು ತಮ್ಮ ಮನೆಯಲ್ಲೇ ತೆರೆಯ ಬೇಕೆಂದು ಅದಕ್ಕೆ ಪೂರಕವಾಗಿ ಅವರ ಮನೆಯನ್ನೂ ಸಹ ಇತ್ತೀಚಿಗೆ ಕಟ್ಟಿದ್ದರು. ಮನೆಯ ಮೇಲೊಂದು ಪಿರಿಮಿಡ್ ಧ್ಯಾನ ಮಂದಿರ. ಅಧ್ಯಯನ ಕೇಂದ್ರಕ್ಕೆ ಅಗತ್ಯವಾದ ಕೊಠಡಿಗಳು, ಸಭಾಂಗಣ. ಅವರ ಕಲ್ಪನೆಯ ಎಲ್ಲವೂ ಸಾಕಾರಗೊಳ್ಳುವ ಹಂತಕ್ಕೆ  ಬಂದಿತ್ತು. ಅಷ್ಟರಲ್ಲಿ  ಗೆಳೆಯ ಕಣ್ಮರೆಯಾದರು. ವೇದಸುಧೆಯನ್ನು ಬಹುವಾಗಿ ಪ್ರೀತಿಸುತ್ತಿದ್ದ  ಶ್ರೀ ದಾಸೆಗೌಡರಿಗೆ ವೇದಸುಧೆಯ ಪರವಾಗಿ ಸದ್ಗತಿಯನ್ನು ಕೋರುತ್ತೇನೆ. ಪತ್ನಿ ಒಬ್ಬ ಪುತ್ರ ನನ್ನು ಅಷ್ಟೇ ಅಲ್ಲ, ನನ್ನಂತಹ  ಸಹಸ್ರಾರು ಅಭಿಮಾನಿಗಳನ್ನು ಬಿಟ್ಟು ಹೋಗಿರುವ ದಾಸೇಗೌಡ ರ ಕುಟುಂಬಕ್ಕೆ ಅವರು ಇಲ್ಲದಿರುವಿಕೆಯನ್ನು ಸಹಿಸುವ ಶಕ್ತಿಯನ್ನು ದೇವರು ಕೊಡಲೆಂದು ಭಗವಂತನಲ್ಲಿ ಪ್ರಾರ್ಥಿಸುವೆ. 
ದಾಸೆಗೌಡರೊಡನೆ ಕಳೆದ ಕ್ಷಣಗಳ ಸ್ಮರಣೆ 


 
ನಮ್ಮ ಮನೆಯಲ್ಲಿ   ಡಾ.ಶ್ರೀವತ್ಸ ಎಸ್.ವಟಿಯರ ಸಂದರ್ಶನ ಮಾಡಿದಾಗ. 


 



 

ಕೊನೆಯ ನಗುವೆಂದು ನಾನಂದು ಭಾವಿಸಿರಲಿಲ್ಲ. 

Tuesday, March 13, 2012

ಆರ್ಯರು ಭಾರತಕ್ಕೆ ವಲಸೆ ಬಂದವರೇ ?(ವೇದದ ನೆರಳಿನಲ್ಲಿರುವ ವಾದ)

ಆರ್ಯರು ಭಾರತಕ್ಕೆ ವಲಸೆ ಬಂದವರೆ ? ಈ ಪ್ರಶ್ನೆಯನ್ನು ಕೇಳೆದೊಡನೆ ಕೆಲವರಿಗೆ ಸಿಟ್ಟು ಬರುತ್ತದೆ, ಮತ್ತೆ ಕೆಲವರಿಗೆ ರೋಮಾಚನವಾಗುತ್ತದೆ. ಯಾರಿಗೆ ಸಿಟ್ಟು ಯಾರಿಗೆ ರೋಮಾಂಚನ ಎಂದು ಗೊತ್ತಿದ್ದವರಿಗೆ ತಿಳಿಸಿ ಹೇಳಬೇಕಾಗಿಲ್ಲ. ಸರಳವಾಗಿ ಹೇಳಬೇಕೆಂದರೆ ಕೆಲವು ಸಮುದಾಯದವರಿಗೆ ಇದನ್ನು ಒಪ್ಪಿಕೊಂಡರೆ ನಾವು ವಿದೇಶೀಯರಾಗುತ್ತೇವೆ ಎಂದು ಕೋಪ, ಕೆಲವು ಸಮುದಾಯದವರಿಗೆ ಇದರಿಂದ ನಾವು ಈ ದೇಶದ ಮೂಲನಿವಾಸಿಗಳು ಎಂದು ಸಿದ್ದವಾಯಿತು ಎಂದು ರೋಮಾಂಚನ, ಈ ಸಮುದಾಯದವರಲ್ಲದೆ ಬಲ ಪಂಥಿಯರ ಮಸಸ್ಸಿನ ಮೇಲೆ ಇದು ಉಂಟು ಮಾಡುವ ಗಾಯ ಅಷ್ಟಿಷ್ಟಲ್ಲ ಮತ್ತು ಇದರಿಂದ ಎಡ ಪಂಥೀಯರಿಗಾಗುವ ಉನ್ಮಾದಾನಂದಕ್ಕೇನು ಕಡಿಮೆಯಿಲ್ಲ. ಇದಕ್ಕೆಲ್ಲ ಕಾರಣ ತಿಳಿದೇ ಇದೆ.
ಬ್ರಿಟೀಷರು ಭಾರತವನ್ನು ಒಡೆದು ಆಳಲು ಸೃಷ್ಟಿಸಿದ ಸಿದ್ದಾಂತ ಎಂದು ಕೆಲವರ ಭಾವನೆ. ಹಾಗದರೆ ಇದು ಬ್ರಿಟೀಷರ ಸೃಷ್ಟಿಯೇ ? ಇತಿಹಾಸವನ್ನು ಪಾರದರ್ಶಕವಾಗಿ ನೋಡಿದರೆ ಇದು ಬ್ರಿಟೀಷರು ಸೃಷ್ಟಿಸಿದ ಸಿದ್ದಾಂತ ಎಂಬುದಕ್ಕೆ ಎಲ್ಲೂ ಆಧಾರ ದೊರೆಯುವುದಿಲ್ಲ. ನಮ್ಮನ್ನು ಒಡೆದು ಆಳಲು ಇಂತಹ ಒಂದು ಸಿದ್ದಾಂತವನ್ನು ಸೃಷ್ಟಿಸುವ ಅಗತ್ಯ ಬ್ರಿಟೀಷರಿಗೇನು ಇರಲಿಲ್ಲ, ನಮ್ಮನು ಒಡೆದು ಆಳಲು ಬೇಕಾದ ಪರಿಸರ ನಮ್ಮಲ್ಲಿ ಬಹಳವಿತ್ತು ಇಂದಿಗೂ ಇದೆ. ಆದರೆ ಬ್ರಿಟೀಷರು ನಮ್ಮನ್ನು ಒಡೆದು ಆಳಲು ಈ ಸಿದ್ದಾಂತವನ್ನು ಬಳಸಿಕೊಂಡರಲ್ಲ ಅದಕ್ಕೆ ಬೇಕಾದಷ್ಟು ಪುರಾವೆಗಳು ಇತಿಹಾಸದಲ್ಲಿ ದೊರೆಯುತ್ತವಲ್ಲ ಎಂದರೆ ಹೌದು ಎಂದು ಹೇಳಲೇಬೇಕು, ಬ್ರಿಟೀಷರು ಸೃಷ್ಟಿಸಿದರು ಮತ್ತು ಉಪಯೋಗಿಸಿಕೊಂಡರು ಎನ್ನುವುದರ ನಡುವೆ ಬಹಳಷ್ಟು ಅರ್ಥ ವ್ಯತ್ಯಾಸವು ಎಂತಹವರಿಗೂ ಗೊತ್ತಾಗುತ್ತದೆ, ಅಲ್ಲವೇ ಉಪಯೋಗಿಸಲು ನಾವು ಏನನ್ನೂ ಸೃಷ್ಟಿಸಬೇಕಾಗಿಲ್ಲ ಮತ್ತೊಬ್ಬರದನ್ನೂ ಉಪಯೋಗಿಸಲು ಬರುತ್ತದೆ. ಇತಿಹಾಸದಲ್ಲಿ ಬ್ರಿಟೀಷರು ಬೇರಯವರ ಸಿದ್ದಾಂತವನ್ನು ಉಪಯೋಗಿಸಿದ್ದಕ್ಕೆ ಆಧಾರ ದೊರೆಯುತ್ತದೆಯೇ ಹೊರತು ಸೃಷ್ಟಿಸಿ ಉಪಯೋಗಿಸಿದರು ಎನ್ನುವುದಕ್ಕಲ್ಲ.
ಹಾಗಾದರೆ ಈ ಸಿದ್ದಾಂತ ಹೇಗೆ ಸೃಷ್ಟಿಯಾಯಿತು ? ಯಾವುದೇ ಜ್ಞಾನ ಶಾಖೆಯ ಪರಿಧಿಯಲ್ಲಿ ಬರುವ ಯಾವುದೇ ಸಿದ್ದಾಂತ/ವಾದ ರಾತ್ರಿ ಬೆಳಗಾಗುವುದೊರಳಗೆ ಸೃಷ್ಟಿಯಾಗಲು ಸಾಧ್ಯವಿಲ್ಲ, ವಾಸ್ತವವಾಗಿ ಈ ಸಿದ್ದಾಂತವು/ವಾದವು ಬಾರತದ ಚರಿತ್ರೆಯ ಪರಿಧಿಯಲ್ಲಿ ಬರುವಂತಹದ್ದು. ಆದ್ದರಿಂದ ಸಿದ್ದಾಂತವನ್ನು ಪ್ರತಿಪಾದಿಸುವವರೂ ಅದಕ್ಕೆ ಬೇಕಾದ ಬಲವಾದ ಆಧಾರ ಸಾಮಗ್ರಿಗಳನ್ನು ಹೊಂದಿರಬೇಕಾಗುತ್ತದೆ, ಮತ್ತು ಅದನ್ನು ತಕ್ಕ ಸಮರ್ಥನೆಗಳೊಂದಿಗೆ ಚರಿತ್ರೆಯ ಶಿಸ್ತಿನ ಚೌಕಟ್ಟಿನಲ್ಲಿ ಸಾಧಿಸಬೇಕಾಗುತ್ತದೆ. ಆರ್ಯ ವಲಸೆ ಸಿದ್ದಾಂತ ದಂತಕಥೆಯಲ್ಲದಂತಕಥೆಗಳುನ್ನು ದಿನ ಬೆಳಗಾಗುವುದೊರಳಗೆ ಹೇಣೆಯಬಹುದು, ಚರಿತ್ರೆಯ ಸಿದ್ದಾಂತವನ್ನು ಹಾಗೆ ಎಣೆಯಲಾಗದು, ಅದೂ ಚರಿತ್ರೆಯ ಶಿಸ್ತಿನ ಪರಿಧಿಯಲ್ಲಿ ಬರುವ ಒಂದು ಸಿದ್ದಾಂತ/ವಾದವನ್ನು ಮನಸೋ ಇಚ್ಛೇ ಪೂರ್ವಾಗ್ರಹ ಪೀಡಿತವಾಗಿ, ದ್ವೇಷದಿಂದ ಮಂಡಿಸಲು ಸಾಧ್ಯವಿಲ್ಲ ಎಂದು ಚರಿತ್ರೆಯನ್ನು ಓದಿದ ಎಲ್ಲರೂ ಬಲ್ಲ ಸತ್ಯ.
ಹಾಗಾದರೆ ಈ ಸಿದ್ದಾಂತ ಸತ್ಯವೇ ? ಚರಿತ್ರೆಯಲ್ಲಿ ಸತ್ಯ ಎಂದು ಹೇಳಲು ಬೇಕಾದ ಅಗತ್ಯವಾದ ಪರಿಪೂರ್ಣ ಆಧಾರಗಳು ದೊರೆತ ಮೇಲೆ ಸಂಶೋಧಕರು ಅದನ್ನು ಪರ್ಯಾಲೋಚಿಸಿ ಮಂಡಿಸಿ ನಿಷ್ಕರ್ಷಿಸದ ಮೇಲೆಯೇ ಯಾವುದೇ ಒಂದು ಸಿದ್ದಾಂತದ ಸತ್ಯಾಸತ್ಯತೆ ಗೊತ್ತಾಗುವುದು ಅಂದರೆ ಅಂತಹ ಸಿದ್ದಾಂತವನ್ನು ಮಂಡಿಸಲು ಪರಿಪೂರ್ಣವಾದ ಆಧಾರಗಳು ದೊರೆಯಲೇಬೇಕು, ಪರಿಪೂರ್ಣ ಆಧಾರ ದೊರೆಯದ ಹೊರತೂ ಚರಿತ್ರೆಯ ಯಾವೊಂದು ಸಿದ್ದಾಂತವು ಪರಿಪೂರ್ಣವಾಗುವುದಿಲ್ಲ, ಅದರಂತೆ ಆರ್ಯರ ವಲಸೇ ಸಿದ್ದಾಂತವೂ ಕೂಡ,
ಆರ್ಯ ವಲಸೆ ಸಿದ್ದಾಂತ ಕೆಲವರಿಗೆ ಚರ್ವಣ ಚರ್ವಿತ ಹಳಸಲು ಸಿದ್ದಾಂತ, ಇನ್ನು ಕೆಲವರಿಗೆ ಸಂಶೋಧನೆ ಮಾಡಲು ಉತ್ತವವಾದ ಪೂರಕ ವಸ್ತು, ಇವೆಲ್ಲಕ್ಕಿಂತ ಹೆಚ್ಚಾಗಿ ಇದು ಬಳಕೆಯಾದದ್ದು ಸಮುದಾಯದ ನಡುವೆ ದ್ವೇಷ ಹುಟ್ಟಿಸಲು, ಒಡೆದು ಆಳಲು ಎಂಬುದಂತು ಚಾರಿತ್ರಿಕ ಸತ್ಯ, ಒಟ್ಟಿನಲ್ಲಿ ಸ್ವಾರ್ಥಿಗಳಿಗೆ, ಭಾರತ ವಿರೋಧಿಗಳಿಗೆ/ದ್ವೇಷಿಗಳಿಗೆ ಕಾಮಧೇನು, ಕಲ್ಪವೃಕ್ಷ ಎಲ್ಲವೂ ಹಿಂದೆಯೂ ಮುಂದೆಯೂ ಕೂಡ.
ಹಾಗಾದರೆ ನೀವು ಇಲ್ಲಿ ಏನನ್ನು ಹೇಳಲು ಹೊರಟಿದ್ದೀರಿ ಎಂದು ನನ್ನನ್ನು ಪ್ರಶ್ನಿಸಬಹುದು. ನಾನು ಇಲ್ಲಿ ಬರೆಯಹೊರಡಟಿರುವುದು ಆರ್ಯ ವಲಸೆ ಸಿದ್ದಾಂತದ ಪ್ರಾಮಾಣಿಕತೆಯನ್ನು ಕುರಿತಲ್ಲ, ಸಮರ್ಥನೆಯನ್ನಲ್ಲ, ಖಂಡನೆಯನ್ನಲ್ಲ, ಪರಾನರ್ಶೆ, ಪರೀಕ್ಷೆ, ನಿಷ್ಕರ್ಷೆ, ಚರ್ಚೆ ಯಾವುದನ್ನೂ ಅಲ್ಲ. ಹಾಗಾದರೆ ಏನನ್ನು ? ವಾಸ್ತವನ್ನು ಮಾತ್ರ, ಹಾಗಾದರೆ ಏನು ಈ ವಾಸ್ತವ ?
ನಾನು ಮೊದಲೇ ಹೇಳಿದಂತೆ ಚರಿತ್ರೆಯ ಶಿಸ್ತಿನ ಪರಿಧಿಯಲ್ಲಿ ಬರುವ ಯಾವುದೇ ಸಿದ್ದಾಂತ/ವಾದ ರಾತ್ರಿ ಕಳೆದು ಬೆಳಗಾಗುವುದೊರಳಗೆ ಹುಟ್ಟುಲು ಸಾಧ್ಯವಿಲ್ಲ, ನಿಜವಾಗಿ ಆರ್ಯ ವಲಸೆ ಸಿದ್ದಾಂತವು/ವಾದವು ಮೊಳಕೆಯೊಡೆದದ್ದು ಭಾರತೀಯ ಭಾಷೆಗಳನ್ನು ಅದರನ್ನು ಮುಖ್ಯವಾಗಿ ಸಂಸ್ಕೃತವನ್ನು ಮತ್ತು ಅದರಲ್ಲಿರುವ ಶಾಸ್ತ್ರಗಳನ್ನು ಅಧ್ಯಯನ ಮಾಡಲು ಹೊರಟ ವಿದೇಶೀ ವಿದ್ವಾಂಸರಲ್ಲಿ, ಕಾರಣ ಸಂಸ್ಕೃತವನ್ನು ಒಳಗೊಂಡಂತೆ ಭಾರತೀಯ ಆರ್ಯಭಾಷೆಗಳಿಗೂ ಮತ್ತು ವಿದೇಶೀ ಭಾಷೆಗಳಿಗೂ ಇರುವು ತುಲಾನಾತ್ಮಕ ಸಾದೃಶ್ಯ, ಗ್ರೀಕ್ ಕಾವ್ಯಗಳಿಗೂ ಭಾರತದ ರಾಮಾಯಣ ಮಹಾ ಭಾರತಾದಿ ಕಾವ್ಯಗಳಿಗೂ ಕಥೆಯಲ್ಲಿ ಕಂಡು ಬರುವ ಹೋಲಿಕೆ, ಪೌರ್ವಾತ್ಯ ಹಾಗೂ ಪಾಶ್ಚಾತ್ಯದ ಅನೇಕ ಜ್ಞಾನ ಶಾಖೆಗಳ ಮತ್ತು ಕಲೆಗಳ ನಡುವೆ ಕಂಡು ಬಂದ ಸಾದೃಶ್ಯಗಳು ಮತ್ತು ಅದಕ್ಕೆ ವೇದದಲ್ಲೇ ಆಧಾರ ಎಂದು ಹೇಳಲಾಗುವ ಕೆಲವು ಮಂತ್ರಗಳು ಇವೆಲ್ಲವೂ ಸೇರೆ ಅವರಲ್ಲಿ ಆರ್ಯ ವಲಸೆ ಸಿದ್ದಾಂತ/ವಾದ ಮೊಳಕೆಯೊಡೆಯಲು ಕಾರಣವಾದವು. ಆದ್ದರಿಂದ ಈ ಸಿದ್ದಾಂತದ ಸತ್ಯಾಸತ್ಯತೆ ಏನೇ ಇದ್ದರೂ ವಿದ್ವಾಂಸರು ಈ ಸಿದ್ದಾಂತವನ್ನು ಮಂಡಿಸಲು ವೇದದ ನೆರಳಿನಲ್ಲಿ ಉಪಯೋಗಿಸಿದ ಆಧಾರಗಳನ್ನು ಡಾ. ಎನ್ ಎಸ್ ಅನಂತರಂಚಾರ್ ಅವರು ತಮ್ಮ ವೈದಿಕ ಸಾಹಿತ್ಯ ಚರಿತ್ರೆ ಎಂಬ ಗ್ರಂಥದಲ್ಲಿ ಸಂಗ್ರಹಿಸಿದ್ದಾರೆ, ವೇದದ ನೆರಳಿನಲ್ಲಿ ಇರುವ ವಾದದ ಪರಿಚಯ ಇರಲಿ ಎಂಬುದೇ ನನ್ನ ಉದ್ದೇಶ, ಆದ್ದರಿಂದ ಡಾ. ಅನಂತರಂಗಾಚಾರ್ ಅವರ ಲೇಖನವನ್ನು ಯಥಾವತ್ತಾಗಿ ನೀಡಲಾಗಿದೆ. ಆದರೆ ಒಂದು ಮಾತನ್ನು ನೆನಪಿಪಿರಲಿ ಸಿದ್ದಾಂತ ತಪ್ಪು/ಸರಿ ಎಂದು ಹೇಳವುದಕ್ಕೆ ಆ ಸಿದ್ದಾಂತ/ವಾದದ ಮುಖ್ಯಾಂಶಗಳ ಸಂಪೂರ್ಣ ಪರಿಚಯ ಇರುವುದು ಜ್ಞಾನಿಗಳ ದೃಷ್ಟಿಯಿಂದ ಅತ್ಯವಶ್ಯ, ಏನನ್ನು ಓದದೇ ಮತ್ತೊಂಬ್ಬರು ಹೇಳಿದ್ದನ್ನು ಕೇಳಿಕೊಂಡು ಜಾಗಟೆ ಬಾರಿಸುವವರಿಗೆ ಇದರ ಅಗತ್ಯ ಇರುವುದಿಲ್ಲ. ಇಷ್ಟು ಸಾಕು ಇನ್ನು ಡಾ. ಅನಂತರಂಗಾಚಾರ್ ಅವರ ಲೇಖನವನ್ನು ನೋಡೋಣ.

ಆರ್ಯರು ಭಾರತಕ್ಕೆ ವಲಸೆ ಬಂದವರೇ ?
(ವೈದಿಕ ಸಾಹಿತ್ಯ ಚರಿತ್ರೆ ಪುಟ ೧೪ ರಿಂದ ೨೧ - ಡಾ. ಅನಂತರಂಗಾಚಾರ್)
ಭಾರತದ ಪ್ರಾಚೀನೇತಿಹಾಸವನ್ನು ನಿರೂಪಿಸುವಾಗ ಭಾರತ ದೇಶಕ್ಕೆ ಆರ್ಯರು ಮತ್ತೆಲ್ಲಿಂದಲೋ ವಲಸೆ ಬಂದವರೆಂದು ಚರಿತ್ರಕಾರರು ಅಭಿಪ್ರಾಯ ಪಡುತ್ತಾರೆ. ಭಾರತಕ್ಕೆ ಬರುವ ಮೊದಲು ಆರ್ಯರು ಎಲ್ಲಿದ್ದರೆಂಬ ಅಂಶ ನಿಶ್ಚಯವಾಗಿಲ್ಲ. ಅನೇಕ ವಿದ್ವಾಂಸರುಗಳು ಈ ವಿಚಾರವನ್ನು ಚರ್ಚಿಸಿದ್ದಾರೆ; ಹಾಗೂ ಬೇರೆ ಬೇರೆ ವಿಧವಾಗಿ ತೀರ್ಮಾನಿಸಿದ್ದಾರೆ.
ಆಧುನಿಕ ಚರಿತ್ರಕಾರರು ವೇದಮಂತ್ರಗಳನ್ನು ಆಧಾರವಾಗಿ ತೋರಿ ಆರ್ಯರು ವಲಸೆ ಬಂದವರೆಂಬ ತೀರ್ಮಾನಕ್ಕೆ ಬಂದಿದ್ದಾರೆ. ವೇದಮಂತ್ರಗಳ ಅರ್ಥವೃತ್ತಿ ಬಹಳ ಸಂಧಿಗ್ಧವಾಗಿರುವುದರಿಂದ ಇಂಥ ನಿರ್ಣಯ ಸುಲಭವಾಗಿ ಆಗುವುದಿಲ್ಲ. ನಮ್ಮ ಪ್ರಾಚೀನ ಸಾಹಿತ್ಯದ ಮಟ್ಟಿಗೆ ಹೇಳುವುದಾದರೆ ಸಂಹಿತೆ, ಬ್ರಾಹ್ಮಣ, ಅರಣ್ಯಕ, ಉಪನಿಷತ್ತು, ಇತಿಹಾಸ ಪುರಾಣಗಳು ಮುಂತಾದವುಗಳಲ್ಲೆಲ್ಲಿಯೂ ಆರ್ಯರು ಮತ್ತೇಲ್ಲಿಂದಲೋ ಬಂದರೆಂಬ ಸೂಚನೆ ಕಂಡುಬರುವುದಿಲ್ಲ. ಒಂದು ಭೂಭಾಗದಿಂದ ಮತ್ತೊಂದು ಭೂಭಾಗಕ್ಕೆ ವಲಸೆ ಹೋಗಿ ಬಿಡುವಂತಹ ಮಹತ್ತರವದ ಈ ಅಂಶವನ್ನು ಪೂರ್ಣವಾಗಿ ಜಾನಾಂಗವೇ ಮರೆತು ಬಿಟ್ಟಿತೆಂದು ಹೇಳಬಹುದೇ ? ಹಾಗೆ ವಲಸೆ ಬಂದುದು ನಿಜವಾದರೆ ಜನಾಂಗದ ಸ್ಮೃತಿ ಪರಂಪರೆಗೆ ನಿಲುಕದ ಈ ಘಟನೆ ಮತ್ತೇಷ್ಟು ಹಿಂದೆ ನಡಿದಿರಬೇಕು ?
ನಿಪುಣರಾದ ವಿದ್ವಾಂಸರು ಈ ವಿಚಾರವನ್ನು ಕುರಿತು ಚರ್ಚಿಸಿದ್ದಾರೆ. ಅವರೂ ಬೇರೆ ಬೇರೆ ನಿರ್ಣಯಗಳಿಗೆ ಬಂದಿದ್ದಾರೆ. ಅವರ ಅಭಿಪ್ರಾಯಗಳನ್ನು ಮುಂದೆ ಸಂಗ್ರಹಿಸಿಕೊಟ್ಟಿದೆ.
ಆಧುನಿಕ ವಿಮರ್ಶಕರ ಹಾಗೂ ಐತಿಹಾಸಿಕರ ವಾದಸರಣಿ ಹೀಗೆದೆ.
೧) ಆರ್ಯರ ಪೂರ್ವಜರು ಆರ್ಯಾವರ್ತದ ಆರ್ಯಾವರ್ತದ ಹೊರಗಿನ ಪ್ರದೇಶದಿಂದಲೇ ಬಂದಿರಬೇಕು, ಅವರ ಮೂಲ ನಿವಾಸ ಮಧ್ಯ ಏಷ್ಯಾ ಇರಬಹುದು. ಅಲ್ಲಿಂದ ವಲಸೆ ಹೊರಟು ಭಾರತ, ಇರಾನ್ ಯುರೋಪು ಮೊದಲಾದ ಪ್ರದೇಶಗಳಿಗೆ ಅವರು ತಂಡ ತಂಡವಾಗಿ ಬಂದು ನೆಲಸಿದರು. ವೇದದಲ್ಲಿ ಅನೇಕ ಕಡೆ ಅವರ ಪೂರ್ವನಿವಾಸದ ಪ್ರಸ್ತಾಪವಿದೆ.
"ಅನು ಪ್ರತ್ನಸ್ಯೌಕಸೋ ಹುವೇ ತುವಿ ಪ್ರತಿಂ ನರಂ
ಯಂ ತೇ ಪೂರ್ವಂ ಪಿತಾ ಹುವೇ " || (ಋ.ಸಂ- ೧-೩೦-೯)
ಈ ಮಂತ್ರದಲ್ಲಿ ಬರುವ 'ಪ್ರತ್ನಸ್ಯೌಕಸಃ' ಎಂಬ ಶಬ್ದ ಇವರ ಪುರಾತನವಾದ ವಾಸ ಸ್ಥಳವನ್ನು ಸೂಚಿಸುತ್ತದೆ. ಇಂಥ ಉಲ್ಲೇಖಗಳು ಹೇರಳವಾಗಿವೆ.
೨) ಮಧ್ಯ ಏಷ್ಯಾದಿಂದ ವಲಸೆ ಬಂದ ಆರ್ಯರೇ ಯುರೋಪು, ಇರಾನ್, ಭಾರತ ಮೊದಲಾದ ದೇಶಗಳಲ್ಲಿ ನೆಲೆಸಿದರು, ಇವರು ಬೇರೆ ಬೇರೆ ದೇಶಗಳಲ್ಲಿ ನೆಲಸಿ ಬೆಳಸಿದ ಬೇರೆ ಬೇರೆ ಭಾಷೆಗಳಲ್ಲಿ ಗಮನಾರ್ಹವಾದ ಸಾದೃಶ್ಯವಿದೆ. ಇದರ ಆಧಾರದಿಂದ ಬೇರೆ ಬೇರೆಯಾಗಿ ತೋರುವ ಈ ಭಾಷೆಗಳು ಒಂದೆ ವಂಶಕ್ಕೆ ಸೇರಿದವೆಂದೂ ಈ ಮೂಲಭಾಷೆ ಒಂದೇ ಎಂದೂ ಊಹಿಸಬಹುದು. ಆ ಮೂಲಭಾಷೆಯೇ ಇಂಡೋ ಯೂರೋಪಿಯನ್ ಭಾಷೆ. ಅದು ಬೇರೆ ಬೇರೆ ದೇಶಗಳಲ್ಲಿ ಭಿನ್ನ ಭಿನ್ನ ಪರಿಸ್ಥಿಗಳಲ್ಲಿ ಭಿನ್ನ ಭಿನ್ನ ಸಂಪರ್ಕಕ್ಕೊಳಗಾಗಿ ಕಾಲ ಕಳೆದಂತೆ ಒಂದಕ್ಕೊಂದಕ್ಕೆ ಸಂಬಂಧವೂ ಇಲ್ಲವೆಂಬಂತೆ ಬೇರೆ ಬೇರೆಯಾಗಬಿ ಬೆಳದವು, ಹೀಗಾಗಿ 'ತುಲನಾತ್ಮಕ ಭಾಷಾಶಾಸ್ತ್ರ' ಬೇರೆ ಬೇರೆ ದೇಶಗಳಲ್ಲಿ ನೆಲಸಿ ಬೇರೆ ಬೇರೆ ಭಾಷೆಗಳನ್ನಾಡುತ್ತಿರುವ ಈ ಜನ ಒಂದೇ ಬುಡಕಟ್ಟಿನವರೆಂದು ಸಮರ್ಥಿಸುತ್ತದೆ.
೩) ಪರ್ಷಿಯನ್ನರ 'ಜೆಂಡಾ ಅವೆಸ್ತಾ' ಗ್ರಂಥದಲ್ಲಿ 'ವೇಂದಿದಾದ್' ಪ್ರಕರಣದಲ್ಲಿ ದೇಶವರ್ಣನೆಯ ಪ್ರಸಂಗ ಬರುತ್ತದೆ. ಇಲ್ಲಿ
ಐರ್ಯೆನಂಬೇಜೋ ಎಂಬ ದೇಶದ ವರ್ಣನೆ ಮಾಡುತ್ತಾ ಇದು ಹೊಮರ್ತುಪ್ರಧಾನವಾದುದೆಂದು ಹೇಳಿದೆ, ಇದು ಪಾರಸೀಕರ
ಮೂಲದೇಶ, ಈ ಅವೆಸ್ತಾದಲ್ಲಿ ಪ್ರತಿಪಾದಿಸಿರುವ ಅಂಶಗಳಿಗೂ ವೇದದಲ್ಲಿ ಬರುವ ಅಂಶಗಳಿಗೂ ನಿಕಟವಾದ ಸಾಮ್ಯವಿದೆ.
ಅಗ್ನಿಪೂಜೆ, ಮೊದಲಾದವು ಇದಕ್ಕೆ ನಿದರ್ಶನ. ವೇದದಲ್ಲಿ ಬರುವ ದೇವತೆಗಳ ಹೆಸರುಗಳೇ ಅವೆಸ್ತಾದಲ್ಲಿಯೂ ಬರುತ್ತದೆ.
ಆದುದರಿಂದ ಇವರೂ 'ಐರ್ಯೆನಂಬೇಜೋ' ನಿವಾಸಿಗಳಾಗಿದ್ದಿರಬಹುದು.
೪) ಆರ್ಯರು ಪದೇ ಪದೇ ಹಿಮಾಲಯದ ಉತ್ತರಪ್ರದೇಶವನ್ನು ಪರಮಪವಿತ್ರವೆಂದು ಎಣಿಸಿರುವುದೂ ಸಹ ಮಧ್ಯ ಏಷ್ಯಾದಿಂದಲೇ
ಅವರು ವಲಸೆ ಬಂದವರೆಂಬುದನ್ನು ಸಮರ್ಥಿಸುತ್ತದೆ. ಕೆಳಗಿನ ಮಂತ್ರದಲ್ಲಿ ಇಂಥ ಉಲ್ಲೇಖವನ್ನು ಕಾಣಬಹುದು.
"ಉದೀಚ್ಯಾಂ ದಿಶಿ ಪ್ರಜ್ಞಾತತರಾ ವಾಗುತ್ಪದ್ಯತೇ ಉದಂಚ ಉ ವಾವ
ಯಂತಿ ವಾಚಂ ಶಿಕ್ಷಿತಂ ಯೋ ವಾ ತತ ಆಗಚ್ಛತಿ ತಸ್ಯ ವಾ
ಶುಶ್ರೂಷತಿ ಇತಿ ಹ ಸ್ಮಾ ಹೈಷಾ ಹಿ ವಾಚೋ ದಿಕ್ ಪ್ರಜ್ಞಾತಾ" (ಕೌಶೀತಕೀ ಬ್ರಾಹ್ಮಣ- ೧-೭-೬)
೫) ಋಗ್ವೇದದಲ್ಲಿನ 'ತೋಕಂ ಪುಷ್ಯೇಮ ತನಯಂ ಶತಂ ಹಿಮಾಃ', "ಸುಮ್ನಂ ಮದೇಮ ಶತಹಿಮಂ ಸುವೀರಾಃ ಮೊದಲಾದ
ವಾಕ್ಯಗಳು ಆರ್ಯರ ಮೂಲ ವಸತಿ ಹಿಮರ್ತು ಪ್ರಧಾನವಾದ ದೇಶವೆಂದು ಸೂಚಿಸುತ್ತದೆ. ಹಿಮ ಪ್ರಪಾತ ಅಧಿಕವಾಗಿದರುವ
ಮಧ್ಯ ಏಷ್ಯಾ ಭಾಗದಲ್ಲಿ ವರ್ಷಾರಂಭವನ್ನು ಹಿಮರ್ತುವಿನಿಂದ ಆರಂಭ ಮಾಡುತ್ತಿದ್ದರು. ಆದ್ದರಿಂದ ಆರ್ಯರು ಅಲ್ಲಿನ
ಮೂಲನಿವಾಸಿಗಳೇ ಇರಬಹುದು.
೬) ಶತಪಥ ಬ್ರಾಹ್ಮಣದಲ್ಲಿನ 'ಉತ್ತರಂ ಗಿರಿಮತಿದುದ್ರಾವ' ಎಂಬ ನುಡಿ ಹಿಮಾಲಯನ್ನಿವರು ದಾಟಿ ಬಂದರೆಂಬುದನ್ನು
ಸೂಚಿಸುತ್ತದೆ. ಆದುದರಿಂದಲೂ ಅವರ ಮೂಲನಿವಾಸ ಮಧ್ಯ ಏಷ್ಯಾ ಇರಬೇಕು.
೭) ಗ್ರೀಕ್ ಮತ್ತು ರೋಮನ್ ಜನರ ಮೂಲಬುಡಕಟ್ಟಿನವರು ಈಶಾನ್ಯ ಭೂಭಾಗದಿಂದ ಬಂದು ಇಟಲಿ ಮುಂತಾದ ಕಡೆಗಳಲ್ಲಿ
ನೆಲಸಿದರೆಂಬ ಅಂಶವೂ ಆರ್ಯರು ಮಧ್ಯ ಏಷ್ಯಾದಿಂದ ಬಂದರೆಂಬುದನ್ನು ಪುಷ್ಟೀಕರಿಸುವುದು.
ಹೀಗೆ ಐತಿಹಾಸಿಕರು ಮತ್ತು ಆಧುನಿಕ ವಿಮರ್ಶಕರು ಈ ಸಮಸ್ಯೆಯನ್ನು ವಿವೇಚಿಸಿದ್ದಾರೆ.
ಬಾಲಗಂಗಾಧರ ತಿಲಕರ ವಾದ
ಬಾಲಗಂಗಾಧರ ತಿಲಕರವರು ಆರ್ಯರ ಮೂಲನಿವಾಸಿಗಳು ಪ್ರಥಮತಃ ಉತ್ತರ ಧ್ರುವನಿವಾಸಿಗಳೆಂದು ಅಲ್ಲಿಂದ ಅವರು ಭಾರತ ಮೊದಲಾದ ವಿವಿಧ ದೇಶಗಳಿಗೆ ವಲಸೆ ಬಂದರೆಂದೂ ಸಿದ್ಧಾಂತ ಮಾಡಿ ವೇದ ಮಂತ್ರಗಳನ್ನೇ ಆಧಾರವಾಗಿ ತೋರಿದ್ದಾರೆ. ಅವರ ವಾದ ಹೀಗಿದೆ.
ಪ್ರಾಚೀನಾಚಾರ್ಯರು ಉತ್ತರ ಧ್ರುವ ನಿವಾಸಿಗಳು, ಈ ಧ್ರುವದ ವೈಶಿಷ್ಟ್ಯವೇನೆಂದರೆ -
೧) ಸೂರ್ಯ ದಕ್ಷಿಣದಲ್ಲಿ ಉದಿಸುವನು.
೨) ನಕ್ಷತ್ರಗಳು ಉದಿಸಿ ಮುಳುಗುವುದಿಲ್ಲ, ಆದರೆ ೨೪ ಘಂಟೆಗಳಿಗೊಮ್ಮೆ ಧ್ರುವದ ಸುತ್ತಲೂ ಪ್ರದಕ್ಷೆಣೆ ಮಾಡುವುವು.
೩) ವರ್ಷದಲ್ಲಿ ೬(ಆರು) ತಿಂಗಳು ಕಾಲದ ಒಂದು ರಾತ್ರಿಯೂ ಇನ್ನಾರು ತಿಂಗಳ ಕಾಲದ ಒಂದು ಹಗಲೂ ಆಗುವುವು.
೪) ಸಂವತ್ಸರಕ್ಕೆಲ್ಲಾ ಒಂದೇ ಒಂದು ಪ್ರಭಾತವೂ ಒಂದೇ ಒಂದು ಸಂಜೆಯೂ ಆಗುವುವು. ಉದಯಾಸ್ತಗಳ ಅರುಣಕಾಂತಿ
ಇಪ್ಪತ್ತು ನಾಲ್ಕು ಘಂಟೆಗಳಿಗೊಂದಾವರ್ತಿ ಕ್ಷಿತಿಜದ ಸುತ್ತ ಸುತ್ತುತ್ತಾ ಎರಡು ತಿಂಗಳ ಕಾಲ ಇರುತ್ತದೆ.
೫) ಇಲ್ಲಿ ವರ್ಷ ಮೂರು ಭಾಗವಾಗಿರುತ್ತದೆ. ಅಖಂಡವಾದ ಒಂದು ದೀರ್ಘದಿವಸ, ಒಂದು ದೀರ್ಘ ರಾತ್ರಿ ಮತ್ತು ಇವುಗಳ
ಸಂಧಿಕಾಲವಾದ ಅಹೋರಾತ್ರ. ಈ ಅಂಶಗಳೆಲ್ಲಾ ಇಂದಿನಂತೆ ಸಹಸ್ರಾರು ವರ್ಷಗಳ ಹಿಂದೆಯೂ ಅಚಲವಾದ
ಧ್ರುವಪ್ರದೇಶದಲ್ಲಿ ಇದ್ದವು. ಇವುಗಳ ಉಲ್ಲೇಖ ವೇದಗಳಲ್ಲಿ ಕಂಡುಬರುತ್ತದೆ. ಆದುದರಿಂದ ಆರ್ಯರು ಮೂಲತಃ
ಧ್ರುವನಿವಾಸಿಗಳು. ಈ ಅಂಶಗಳನ್ನು ಸೂಚಿಸುವ ಕೆಲವು ಮಂತ್ರಗಳನ್ನೂ ಸೂಚಿಸಬಹುದು.
" ಅಮೀ ಯ ಋಕ್ಷಾ ನಿಹಿತಾಸ ಉಚ್ಛಾ
ನಕ್ತಂ ದದೃಶ್ರೇ ಕುಹಚಿದ್ದಿವೇಯುಃ |
ಅದಬ್ಧಾನಿ ವರುಣಸ್ಯ ವ್ರತಾನಿ
ವಿಚಾಕಶಚ್ಚಂದ್ರಮಾ ನಕ್ತಮೇತಿ || (ಋ.ಸಂ -೧-೨೪-೧೦)
"ಋಕ್ಷಾಃ ಎಂದರೆ ಸಪ್ತರ್ಷಿಗಣವು ಸೃಷ್ಟಿಕರ್ತನಿಂದ ನಮ್ಮ ತಲೆಯ ಮೇಲೆ ಇಡಲ್ಪಟ್ಟಿದೆ. ಇವು ರಾತ್ರಿಯಲ್ಲಿ ಕಾಣುತ್ತದೆ.
ಹಗಲಿನಲ್ಲಿ ಎಲ್ಲಿಯೋ ಮಾಯವಾಗುತ್ತದೆ. ಚಂದ್ರನೂ ರಾತ್ರಿಯಲ್ಲಿಯೇ ಪ್ರಕಾಶಿಸುತ್ತಾನೆ. ಇವೆಲ್ಲಾ ವರುಣನ
ಶಾಶ್ವತವಾದ ಕರ್ಮ"
ಈ ಮಂತ್ರದಲ್ಲಿ ಸಪ್ತರ್ಷಿಮಂಡಲ ಸರ್ವದಾ ನಮ್ಮ ತಲೆಯ ಮೇಲೆಯೇ ಕಾಣುವುದೆಂದು ಹೇಳಲಾಗಿದೆ.
ಸ ಸೂರ್ಯಃ ಪರ್ಯುರೂ ವರಾಂಸ್ಯೇಂದ್ರೋ
ವವೃತ್ಯಾದ್ರಥ್ಯೇವಚಕ್ರಾಃ | (ಋ.ಸಂ--೧೦-೮೯-೨)
ಸಾರಥಿಯು ರಥಕ್ಕೆ ಸಂಬಂಧಿಸಿದ ಚಕ್ರಗಳನ್ನು ಆವರ್ತಗೊಳಿಸುವಂತೆ ಸುವೀರ್ಯನೂ ಪ್ರಸಿದ್ದನೂ ಆದ ಇಂದ್ರನು ಅನೇಕ ಗ್ರಹಗಳನ್ನು ಭ್ರಮಣಗೊಳಿಸುತ್ತಾನೆ. ಇಲ್ಲಿ ಬರುವ ನಕ್ಸತ್ರ ಭ್ರಮಣ ಧ್ರುವಪ್ರದೇಶವನ್ನು ಬಿಟ್ಟು ಮತ್ತಾವ ಪ್ರದೇಶಕ್ಕೂ ಅನ್ವಯಿಸುವುದಿಲ್ಲ.
ಉಷಃ ಕಾಲದ ಸುಧೀರ್ಘತ್ವವನ್ನು ಮಂತ್ರಗಳು ಹೇಳುತ್ತವೆ. ಕೆಳಗಿನ ಮಂತ್ರಗಳಲ್ಲಿ ಈ ಅಂಶ ಇದೆ.
ತಾನೀದಹಾನಿ ಬಹುಲಾನ್ಯಾಸನ್
ಯಾ ಪ್ರಾಚೀನಮುದಿತಾ ಸೂರ್ಯಸ್ಯ |
ಯತಃ ಪರಿಚಾರ ಇವಾಚರಂ
ತ್ಯುಷೋ ದದೃಕ್ಷೇ ನ ಪುನರ್ಯತೀವ || (ಋ.ಸಂ- ೭-೭೬-೩)
ಉಷಃ ಕಾಲ ಆರಂಭವಾದ ಮೇಲೆ ಸೂರ್ಯೋದಯದವರೆಗೆ ಎಷ್ಟು ದಿನಗಳು ಕಳೆದು ಹೋದವು.! ಪ್ರಿಯನ ಸುತ್ತಲೂ ಪ್ರಿಯೆ ಚರಿಸುವಂತೆ ಉಷೆಯೂ ಸುತ್ತುತ್ತಾಳೆ. ಎಂದು ಇಲ್ಲಿ ಹೇಳಿದೆ.
ತಸ್ಯ ವೇನೀರನುವ್ರತಮುಷಸ್ತಿಸ್ರೋ
ಅವರ್ಧಯನ್ನಭಂತಾಮನ್ನಯಕೇ ಸಮೇ || (ಋ.ಸಂ ೮-೪೧-೩)
ಎಂಬ ಮಂತ್ರದಲ್ಲಿ ಮೂವತ್ತು ಉಷೆಯರ ವರ್ಣನೆಯಿದೆ. ಇವು ಒಂದೇ ಧೀರ್ಘವಾದ ಉಷಃಕಾಲದ ಮೂವತ್ತು ಭಾಗಗಳೆಂದು ಹೇಳಬಹುದು.
ಪ್ರಾತರನುವಾಕವನ್ನು 'ಪುರಾ ಶಕುನಿವಾದಾದನುಬ್ರೂಯಾತ್ ' ಎಂದು ವಿಧಿಸಿದೆ. ಈ ಮಂತ್ರವನ್ನು ಸಾವಿರ ಸಲ ಪಠಿಸಬೇಕೆಂಬ ವಿಧಿಯಿದೆ. ಬೇರೆ ಯಾವ ಪ್ರದೇಶದ ಉಷಃಕಾಲದಲ್ಲಿಯೂ ಈ ಪ್ರಾತರನುವಾಕವನ್ನು ಸಾವಿರ ಸಲ ಪಠಿಸುವುದು ಸಾಧ್ಯವಿಲ್ಲ. ಉತ್ತರ ಧ್ರುವದ ಪ್ರದೇಶದ ಉಷಃ ಕಾಲದಲ್ಲಿ ಮಾತ್ರ ಇದು ಸಾಧ್ಯ.
ವೇದದಲ್ಲಿ ಬರುವ ಉಷೋದೇವಿಯ ಮೂವತ್ತು ಅಡಿಗಳ ವಿಚಾರ ಇಪ್ಪತ್ತಾನಾಲ್ಕು ಗಂಟೆಗಳ ಮೂವತ್ತು ದಿನಗಳಿಗೆ ಸ್ಪಷ್ಟವಾಗಿ ಅನ್ವಯಿಸುತ್ತದೆ.
ವೇದದಲ್ಲಿ ಬರುವ ದೀರ್ಘ ದಿವಸ ಮತ್ತು ದೀರ್ಘರಾತ್ರಿಯ ವರ್ಣನೆಯೂ ಧ್ರುವ ಪ್ರದೇಶಕ್ಕೆ ಅನ್ವಯಿಸುತ್ತದೆ.
ವೃತ್ರವಧವರ್ಣನೆ ದೀರ್ಘರಾತ್ರಿಯ ನಂತರ ಉದಿಸುವ ಪ್ರಕಾಶಕ್ಕೆ ಸಂಬಂದಿಸಿದೆ. ಆವಿಯ ರೂಪದಲ್ಲಿ ಗಗನಗಾಮಿಯಾಗುವ ಜಲ, ಸೂರ್ಯ ಮತ್ತು ಉಷಸ್ಸುಗಳು ಕೆಳಲೋಕದಿಂದ ಮೇಲಕ್ಕೆ ಬರದಂತೆ ತಡೆಯಲ್ಪಟ್ಟಿದ್ದವೆಂದು ನಂಬಲಾಗಿತ್ತು. ವೃತ್ರವಧವಾದ ಮೇಲೆ ಸೂರ್ಯನ ಅಭಿವ್ಯಕ್ತಿಯೂ ವಾತಾವರಣದ ಜಲನಿರ್ಗಮವೂ ಆಯಿತೆಂದು ವರ್ಣಿಸಿದೆ.
ಇವೆಲ್ಲ ಆಧಾರಗಳಿಂದ ಆರ್ಯರು ಉತ್ತರಧ್ರುವದ ಮೂಲನಿವಾಸಿಗಳಾದ್ದರೆಂದೂ ಹಿಮಪ್ರಪಾತವಾದ ಮೇಲೆ ಆ ಪ್ರದೇಶದಿಂದ ಹೊರಟುಬಂದು ಭಾರತ ದೇಶದಲ್ಲಿ ನೆಲಸಿದರೆಂದು ಸಿದ್ಧವಾಗುತ್ತದೆ.

ಅವಿನಾಶ ಚಂದ್ರದಾಸರ ವಾದ
ಅನೇಕ ವಿದ್ವಾಂಸರು ಆರ್ಯರು ಬೇರೆಲ್ಲಿಂದಲೋ ಭಾರತಕ್ಕೆ ಬಂದರೆಂಬ ವಾದವನ್ನು ಮುಂದಿಟ್ಟಿದ್ದಾರೆ. ಆದರೆ ಶ್ರೀಯುತ ಅವಿನಾಶ ಚಂದ್ರದಾಸ್ ಅವರು ಆರ್ಯರ ಮೂಲವಸತಿಯನ್ನು ಚರ್ಚಿಸುತ್ತ ಆರ್ಯರು ಆರ್ಯಾವರ್ತದ ಮೂಲನಿವಾಸಿಗಳೇ ವಿನಾ ಬೇರೆ ಕಡೆಯಿಂದ ಬಂದವರಲ್ಲವೆಂದು ಅಭಿಪ್ರಾಯಕ್ಕೆ ಬಂದಿದ್ದಾರೆ. ಇವರ ವಾದ ಹೀಗೆದೆ.
ಅ) ಸಪ್ತಸಿಂಧು ಎಂದು ಕರೆಯಲಾದ ಪಂಜಾಬು ಪ್ರಾಂತವೇ ಆರ್ಯರ ಮೂಲಸ್ಥಾನ. ಋಗ್ವೇದದ ಕಾಲದಲ್ಲಿ ಈಗಿನ ರಾಜಪುಟಾಣ ಪ್ರಾಂತದಿಂದ ಹಿಡಿದು ಅಸ್ಸಾಮಿನವರೆಗೂ ಸಾಗರ ಹರಡಿಕೊಂಡಿದ್ದಿತ್ತು. ಆಗ ದಕ್ಷಿಣ ಭಾರತ ಮಹಾದ್ವೀಪವಾಗಿದ್ದಿತ್ತು. ಆಗ್ಗೆ ಭಾರತ ಪ್ರಾಯಃ ಆಸ್ಟ್ರೇಲಿಯಾದವರೆಗೂ ಹರಡಿಕೊಂಡಿದ್ದಿರಬಹುದು. ಋಗ್ವೇದಕಾಲವಾದ ನಂತರ ಎಂದೋ ಸಂಬವಿಸಿದ ಕೆಲವು ಭೂಕಂಪಗಳ ಪರಿಣಾಮವಾಗಿ ದಕ್ಷಿಣ ಭಾರತದ ದಕ್ಷಿಣ ಭಾಗಗಳನೇಕ ಸಮುದ್ರದಲ್ಲಿ ಲೀನವಾಗಿಹೋದವು; ಹಾಗೂ ಇಂದಿನ ಭಾರತದ ರೂಪ ಬಂದಿತು. ಅಥ ಭೂಕಂಪದ ಪರಿಣಾಮವಾಗಿಯೇ ರಾಜಪುಟಾಣವು ಸಮುದ್ರಗರ್ಭದಿಂದ ಮೇಲಕ್ಕೆದ್ದಿರಬೇಕು. ಇದರಿಂದ ಆರ್ಯರಿಗೆ ದಕ್ಷಿಣಕ್ಕೆ ಹೋಗಲು ಮಾರ್ಗವೊಂದು ತೆರೆಯಿತು. ಪುರಾಣದಲ್ಲಿ ಬರುವ ಅಗಸ್ತ್ಯರ ಸಮುದ್ರ ಪಾನದ ಕಥೆ ಪ್ರಾಯಃ ರಾಜಪುಟಾಣಾ ಸಾಗರದ ಶೋಷಣೆಗೆ ಅನ್ವಯಿಸಬಹುದು.
ಆ) ಭೂಗರ್ಭಶಾಸ್ತ್ರಜ್ಞರ ಅಭಿಪ್ರಾಯದಂತೆ ಸಪ್ತಸಿಂಧು ಪ್ರದೇಶದಲ್ಲಿ ಪ್ರಾಚೀನ ಕಾಲದಿಂದ ಮಾನವಸೃಷ್ಟಿಯವರೆಗೂ ಮತ್ತೆ ಮುಂದಕ್ಕೂ ಅನ್ವಯಿಸಿದ ವಿಚಾರಗಳು ಉಪಲಬ್ಧವಾಗಿವೆ. ಇಲ್ಲಿ ಆರ್ಯರು ಎಂದಿನಿಂದ ಎಂದಿನವರೆಗೆ ಇದ್ದರೆಂದು ನಿರ್ಧರಿಸಲು ಸಾಧ್ಯವಿಲ್ಲದ ಕಾರಣ ಇದೇ ಅವರ ಮೂಲಸ್ಥಾನವಾಗಿದ್ದಿರಬಹುದು. ದುಸ್ತರವಾದ ಸಮುದ್ರವನ್ನು ದುರ್ಲಂಘ್ಯವಾದ ಪರ್ವತ ಮಾಲೆಯನ್ನು ನೆನೆದರೆ ಆರ್ಯರು ಮಧ್ಯ ಏಷ್ಯಾದಿಂದಲೋ ಉತ್ತರ ಧ್ರುವದಿಂದಲೋ ಬಂದರೆಂಬುದನ್ನು ನಂಬುವುದಕ್ಕಾಗುವುದಿಲ್ಲ. ಕೋಲರೂ, ದ್ರಾವಿಡರೂ ಹೇಗೆ ದಕ್ಷಿಣ ಭಾರತದ ಮೂಲನಿವಾಸಿಗಳೋ ಹಾಗೆಯೇ ಆರ್ಯರು ಸಪ್ತಸಿಂಧೂ ಪ್ರದೇಶದ ನಿವಾಸಿಗಳು.
ಇ) ರಾಜಪುಟಾಣಾ ಸಮುದ್ರ ಪರಿವರ್ತನೆಗೊಂಡು ಸ್ಥೂಲವಾಗಿ ಮಾರ್ಪಾಡಾದಾಗ ಮಹಾಪ್ರಳಯವೊಂದು ಸಪ್ತ ಸಿಂಧು ಪ್ರದೇಶದಲ್ಲಿ ಆಗಿರಬೇಕು. ಮನುವಿನ ಜಲಪ್ರಳಯವೆಂದು ಇದನ್ನೇ ವರ್ಣಿಸಿಬೇಕು. ಈ ಅಪಾರವಾದ ಜಲರಾಶಿ ಪ್ರಾಯಃ ಉತ್ತರದ ಕಡೆ ಕೊಚ್ಚಿ ಹರಿದು 'ಐರ್ಯನೆಂಬೇಜೋ' ಅಥವಾ ಉತ್ತರ ಧ್ರುವದವರೆಗೂ ವಿನಾಶಕಾರಿಯಾಗಿ ಸಾರಿರಬಹುದು. ಯಮನೂ ಅವನ ಸಹಚರರೂ ತಮ್ಮ ಪ್ರಜೆಗಳನ್ನು ಉತ್ತರ ದಿಕ್ಕಿಗೆ ಓಡಿಸಿದರೆಂದು ಇದನ್ನೇ ವರ್ಣಿಸಿರಬಹುದು. ಋಗ್ವೇದ ಕಾಲವಾದ ಮೇಲೆ ಆರ್ಯ ಕೆಲವು ತಂಡಗಳು ಉತ್ತರ ಧ್ರುವದ ಕಡೆ ಹೋಗಿರಬಹುದೇ ವಿನಾ ಋಗ್ವೇದ ಕಾಲದಲ್ಲಿ ಆರ್ಯರು ಎಲ್ಲಿಗೂ ಹೋಗಲೂ ಇಲ್ಲ. ಎಲ್ಲಿಂದಲೂ ಬರಲೂ ಇಲ್ಲ.
ಈ) ಪ್ರಥಮತಃ ಸಮುದ್ರವಿದ್ದ ಕಾರಣ ಸಪ್ತ ಸಿಂಧುಪ್ರದೇಶ ಶೀತಲವಾಗಿದ್ದಿರಬೇಕು. ಆದುದರಿಂದ ವರ್ಷದ ಆದಿಯಲ್ಲಿ ಹಿಮರ್ತುವನ್ನು ಹೇಳಿರಬೇಕು. ರಾಜಪುಟಾಣ ಸಾಗರ ಹೋಗಿ ಪ್ರದೇಶವಾಗಿ ಪರಿವರ್ತನೆಯಾದ ಮೇಲೆ 'ಶರತ್' ಎಂದು ಬದಲಾಯಿಸಿದ್ದಾರೆ. ಆ ಪ್ರಾಂತದಲ್ಲಿ ಔಷ್ಣ್ಯವು ಅಧಿಕವಾದುದು ಇದಕ್ಕೆ ಕಾರಣ ಇರಬೇಕು. ಸರಸ್ವತೀ ಮತ್ತು ದೃಷದ್ವತೀಗಳೂ ಬತ್ತಿ ಹೋಗಲೂ ಇದೇ ಕಾರಣವೆನ್ನಬಹುದು.
ಉ) ಋಗ್ವೇದದಲ್ಲಿ ಬರುವ 'ದಾಸು' ಅಥವಾ 'ದಸ್ಯುಗಳು' ಆ ಕಾಲದಲ್ಲಿದ್ದ ಹಲ ಕೆಲ ಕಾಡುಜನರನ್ನೋ ಅಥವಾ ಯಾಗಾದಿಗಳನ್ನಾಚರಿಸದ ನಾಸ್ತಿಕರನ್ನೋ ಹೇಳುತ್ತದೆಯೇ ವಿನಾ ಇಲ್ಲಿನ ನಿವಾಸಿಗಳಾಗಿದ್ದ ದ್ರಾವಿಡ ಭೀಲಕೋಲರನ್ನು ಹೇಳುವುದಿಲ್ಲ.
ಊ) ಸಪ್ತ ಸಿಂಧು ಪ್ರದೇಶದಲ್ಲಿಯೇ ಇದ್ದ ಪಣಿಗಳೆಂಬ ವ್ಯಾಪಾರಿಗಳು ಪಶು ಚೌರ್ಯಾದಿಗಳನ್ನು ಮಾಡುತ್ತಾ ಕ್ರೂರಿಗಳಾಗಿದ್ದರು. ವೇದಧರ್ಮದಲ್ಲಿಯಾಗಲಿ ದೇವತೆಗಳಲ್ಲಿಯಾಗಲೀ ಇವರಿಗೆ ಆಸಕ್ತಿ ಇರಲಿಲ್ಲ. ಆರ್ಯರಿಂದ ಪರಾಜಿತರಾದ ಇವರು ನಾವಿಕರಾಗಿ ಸಾಗರದ ಮೇಲೆಯೇ ಇರತೊಡಗಿದರು. ರಾಜಪುಟಾಣಾ ಸಾಗರ ಬತ್ತಿದ ಮೇಲೆ ಇವರು ಗುಜರಾತು, ಮಲಬಾರ್ ಮೊದಲಾದ ಭಾಗಗಳಲ್ಲಿ ನೆಲಸಿರಬೇಕು. ಹೀಗೆ ಇವರಿಗೆ ಮೊದಮೊದಲು ಪಾಂಡ್ಯರು, ಕೋಲರು, ಮೊದಲಾದವರ ಸಹವಾಸವೇರ್ಪಟ್ಟಿರಬೇಕು. ಹೀಗೆ ಪಣಿಗಳೂ, ಕೋಲರೂ, ಚಾಲ್ಡಿಯಾ ಪ್ರಾಂತಕ್ಕೆ ಬಂದಿರಬೇಕು. ಮೆಸಪಟೋಮಿಯಾದಲ್ಲಿ ಸ್ವತಂತ್ರವಾದ ಬ್ಯಾಬಿಲೋನಿಯನ್ ಸಾಮ್ರಾಜ್ಯ ಕಟ್ಟಿದವರಿವರು. ಇವರದೇ ಆದ ಮತ್ತೊಂದು ಶಾಖೆ ಪಾಂಡ್ಯರೊಡನೆ ಇರಾನ್, ಅರೇಬಿಯಾ ಕಡೆ ಹೋಗಿ ಈಜಿಪ್ಟಿನಲ್ಲಿ ನೆಲಸಿತು.
ಹೀಗೆ ವಲಸೆ ಹೋದವರೆಂದರೆ ಆರ್ಯರ ಪಣಿಗಳ ವಿನಾ ಇತರರಲ್ಲವೆಂಬುದೂ , ವಲಸೆ ಹೊರಟ್ಟಿದ್ದು ಭಾರತದಿಂದಲೇ ಎಂಬುದೂ ಸಿದ್ಧವಾಗುತ್ತದೆ.
ಋ) ಪರ್ಷಿಯನ್ನರ ಮೂಲಪುರುಷರಾದ ಇರಾನಿಯನ್ನರು ಮೂಲತಃ ಶುದ್ಧ ಆರ್ಯರು. ಆರ್ಯ ಭಾಷೆಯನ್ನೇ ನುಡಿಯುತ್ತಿದ್ದರು. ಪಶುಯಜ್ಞ ಅವರಿಗೆ ಅಭಿಮತವಿರಲಿಲ್ಲ. ಈ ಜನ ಆರ್ಯರಿಂದ ಬೇರೆಯಾಗಿ ಕವಲೊಡೆದರು. ಇವರ ಕಲಹಗಳನ್ನೇ ದೇವಾಸುರ ಯುದ್ಧಗಳೆಂದು ವರ್ಣಿಸಿದ್ದಾರೆ. ಕೊನೆಯಲ್ಲಿ ಇವರು ಸಪ್ತಸಿಂಧು ಪ್ರದೇಶವನ್ನು ಬಿಟ್ಟು ಬಿಟ್ಟು 'ಐರ್ಯನಂಬೇಜೋ' ಪ್ರಾಂತದಲ್ಲಿ ನಿಂತರು.
ಇವೆಲ್ಲವನ್ನೂ ವಿಮರ್ಶಿಸಿದರೆ ಆರ್ಯರು ಸಪ್ತಸಿಂಧು ಪ್ರದೇಶದಲ್ಲಿ ಮೊದಲಿಂದ ವಾಸವಾಗಿದ್ದರೆಂದೂ, ಇಲ್ಲಿಂದಲೇ ಇತರ ಪ್ರದೇಶಗಳಿಗೆ ವಲಸೆ ಹೋದರೆಂದೂ ಸಿದ್ಧವಾಗುತ್ತದೆ.
ಸತ್ಯವ್ರತ ಸಾಮಶ್ರಮಿಗಳೂ ಮತ್ತು ಧರ್ಮಮಾರ್ತಂಡ ಲೇಲೇ ಅವರ ವಾದ.
ಸತ್ಯವ್ರತ ಸಾಮಶ್ರಮಿಗಳು ಮತ್ತು ಧರ್ಮಮಾರ್ತಂಡ ಲೇಲೇ ಅವರೂ ಉತ್ತರ ಧ್ರುವವು ಆರ್ಯರ ಮೂಲವಸತಿಯೆಂಬ ವಾದವನ್ನು ತೀವ್ರವಾಗಿ ವಿರೋಧಿಸಿ ಆರ್ಯರ ಮೂಲವಸತಿ ಆರ್ಯಾವರ್ತವೆಂದೇ ಸಮರ್ಥಿಸಿದ್ದಾರೆ. ಅವರ ವಾದಸರಣಿ ಕೆಳಕಂಡಂತೆ ಇದೆ.
೧) ಆರ್ಯರು ಮೊದಲಿನಿಂದಲೂ ಭಾರತದಲ್ಲಿಯೇ ಇದ್ದರು. ವೇದಗಳಲ್ಲಿ ಹೆಸರಿಸಿರುವ ನದಿಗಳೂ ಪರ್ವತಗಳೂ ಪ್ರದೇಶಗಳೂ ಉತ್ತರ ಧ್ರುವದಲ್ಲಿಲ್ಲ. ಅವೆಲ್ಲಾ ಭಾರತದಲ್ಲಿಯೇ ಇವೆ.
೨) ಉತ್ತರಧ್ರುವ ಆರ್ಯರ ಮೂಲಸ್ಥಾನವೆಂದೂ ಸಮರ್ಥಿಸಲು ಉದಾಹರಿಸಿರುವ ಮಂತ್ರಗಳಿಗೆ ಬೇರೆ ಬೇರೆ ಅರ್ಥವೇ ವಿನಾ ತಿಲಕರು ಹೇಳುವ ಅರ್ಥ ಹೊಂದುವುದಿಲ್ಲ. ಸಪ್ತರ್ಷಿಗಣವನ್ನಾಗಲಿ, ನಕ್ಷತ್ರ ಭ್ರಮಣವನ್ನಾಗಲಿ ಆ ಮಂತ್ರಗಳು ಹೇಳುವುದಿಲ್ಲ.
೩) ಪ್ರಾತರನುವಾಕವನ್ನು ಸಹಸ್ರಶಃ ಪಠಿಸುವ ವಿಚಾರ ಋಗ್ವೇದಲ್ಲಿಲ್ಲ. ಇದು ಐತರೇಯ ಬ್ರಾಹ್ಮಣದಲ್ಲಿರುವುದರಿಂದ ಐತರೇಯ ಬ್ರಾಹ್ಮಣಕಾರರು ಉತ್ತರ ಧ್ರುವದಲ್ಲಿದ್ದರೆಂದು ಹೇಳಬಹುದೇ ? ಪಕ್ಷಿಕೂಜನಕ್ಕೂ ಮೊದಲು ಪ್ರಾತರನುವಾಕವನ್ನು ಪಠಿಸಬೇಕೆಂದು ಹೇಳಿರುವುದು ಮಂತ್ರದ ಮುಖ್ಯವಾದ ಭಾಗಕ್ಕನ್ವಯಿಸುತ್ತಿತ್ತು. ಉಳಿದ ಭಾಗಗಳನ್ನು ಅನಂತರ ಪಠಿಸುತ್ತಿದ್ದರು.
೪) ಧ್ರುವಪ್ರದೇಶದಲ್ಲಿ ಒಂದು ರಾತ್ರಿಯೂ ಒಂದು ಹಗಲೂ ಸೇರೆದರೆ ಒಂದು ವರ್ಷವಾಗುವುದು. ಹೀಗಿರಲು ಶ್ರುತಿಸಿದ್ಧವಾದ ನೂರು ವರ್ಷಗಳ ನೂರು ವರ್ಷಗಳ ಆಯುಸ್ಸಿನ ಗಣನೆ ಹೇಗೆ ಸಾಧ್ಯವಾಗುತ್ತದೆ. ಮಾಸದ ಪರಿಮಿತಿ ಹೇಗೆ ? ವರ್ಷದ ಅವಧಿ ಎಷ್ಟಿರಬೇಕು ? ಮಾವನರ ಒಂದು ವರ್ಷ ದೇವತೆಗಳ ಒಂದು ದಿನವೆಂದು ಹೇಳಿರುವಲ್ಲಿಯೂ ಧ್ರವಪ್ರದೇಶದ ಸೋಂಕಿಲ್ಲ.
ಈ ಕಾರಣಗಳಿಂದ ಧ್ರವಪ್ರದೇಶ ಆರ್ಯರ ಮೂಲ ವಸತಿಯಲ್ಲವೆಂದೂ ಸೂಚಿಸಿ ಆರ್ಯರ ಮೂಲಸ್ಥಾನ ಆರ್ಯಾವರ್ತವೆಂದು ಸಮರ್ಥಿಸಲು ಕೆಳಗಿನ ಕಾರಣಗಳನ್ನು ಹೇಳುತ್ತಾರೆ.
೧) ಆರ್ಯರ ಮೂಲವಸತಿ ಹಿಮಾಲಯದ ದಕ್ಷಿನಕ್ಕಿರುವ ಸುವಾಸ್ತು ಪ್ರದೇಶವೇ. 'ಸುವಾಸ್ತ್ವಾ ಅಧಿ ತುಗ್ವನಿ'(ಋ.ಸಂ- ೮-೧೯-೩೭) ಎಂದು ಇದನ್ನು ನಿರ್ದೇಶಿಸಲಾಗಿದೆ. 'ಸುವಾಸ್ತುರ್ನದೀ ತುಗ್ವತೀರ್ಥಂಭವತಿ' ಎಂದು ಯಾಸ್ಕರು ತಿಳಿಸಿದ್ದಾರೆ. (ನಿರುಕ್ತ- ೪-೧೫-೨). ಸುವಾಸ್ತು ಪ್ರದೇಶ ವಾಸಕ್ಕೆ ಅತ್ಯಂತ ಪ್ರಶಸ್ತವಾದ ಪ್ರದೇಶವೆಂದೂ ತಿಳಿಸಿದ್ದಾರೆ. ಈಗಿನ 'ಸ್ವಾತ್' ನದೀ ಪುರಾತನ ಸುವಾಸ್ತು ಆಗಿರಬೇಕೆಂದು ಕನ್ನಿಂಗ್ ಹ್ಯಾಂ ಅಭಿಪ್ರಾಯಪಡುತ್ತಾರೆ.
೨) ಅತಿ ಪ್ರಭಾವಶಾಲಿಯಾದ ರಸಾನದೀ ಆರ್ಯಾವರ್ತದ ಉತ್ತರ ಸೀಮೆಯಾಗಿಯೂ ಕುಭಾನದಿಯು (ಈಗಿನ ಕಾಬೂಲ್ ನದೀ ?) ಪಶ್ಚಿಮದ ಎಲ್ಲೆಯಾಗಿಯೂ ಇದ್ದಿರಬೇಕು. ಸರಯೂ ನದೀ ಪೂರ್ವದ ಎಲ್ಲೆಯಾಗಿರಬೇಕು. ಕುಭಾದ ಕೆಳಗೆ ಇರುವ ಕ್ರಮು ಸಿಂಧುಗಳ ಸಂಗಮವೇ ದಕ್ಷಿಣದ ಎಲ್ಲೆ ಇರಬೇಕು.
" ಮಾ ವೋ ರಸಾ ನಿತಭಾ ಕುಭಾ, ಕ್ರುಮುರ್ಮಾ ವಃ ಸಿಂಧುರ್ನಿರೀರಮತ್ |
ಮಾ ವಃ ಪರಿಷ್ಠಾತ್ಸರಯುಃ ಪುರೀಷಿಣ್ಯಸ್ಮೇ ಇತ್ಸುಮ್ನಮಸ್ತುಮಃ " || ( ಋ.ಸಂ ೫-೫೩-೯ ಮತ್ತು ೧-೧೦೪-೪)
೩) ಈ ಆರ್ಯರ ವಾಸಸ್ಥಳ ಕ್ರಮೇಣ ಸಾರಸ್ವತ ಪ್ರದೇಶದ ಕಡೆಗೆ ಹರಡಿತು. ನಿರುಕ್ತದಲ್ಲಿ ಯಾಸ್ಕರು ವಿಪಾಟ್ ಶುತದ್ರುಗಳ ಸಂಗಮ ಸ್ಥಳಕ್ಕೆ ವಿಶ್ವಾಮಿತ್ರರು ಸುದಾಸನೊಡನೆ ಬಂದರೆಂದೂ ಇತರರು ಅವರನ್ನೂ ಅನುಸರಿಸಿದರೆಂದೂ ಹೇಳಿದ್ದಾರೆ. ಋಗ್ವೇದದಲ್ಲಿ ಬರುವ ವಿಶ್ವಾಮಿತ್ರ ಮತ್ತು ನದಿಗಳ ಸಂವಾದ ಈ ಹಿನ್ನೆಲೆಯಲ್ಲಿ ಆದುದು. ಈ ಸಾರಸ್ವತ ಪ್ರದೇಶವು ಯಾಗಭೂಮಿಯೆಂದು ಪಾವನತಮವಾದುದೆಂದೂ ಪ್ರಶಂಶಿಸಲ್ಪಟ್ಟಿದೆ. " ಧಾನ್ಯ ಬಹುಳವೂ ಪೃಥ್ವಿಯಲ್ಲಿ ಸುಂದರವೂ ಆದ ಈ ಪ್ರದೇಶದಲ್ಲಿ ಅಗ್ನಿಯನ್ನು ವಿಶೇಷ ರೂಪದಿಂದ ಸ್ಥಾಪನೆ ಮಾಡಿರುತ್ತೇನೆ. ಈ ಪಾವನತಮವಾದ ಪ್ರದೇಶವಾದರೋ ದೃಷದ್ವತೀ ಮತ್ತು ಸರಸ್ವತೀ ನದಿಗಳ ಮಧ್ಯಪ್ರದೇಶವೇ. ಇಲ್ಲಿ ನೀನು ಸ್ವಚ್ಛಂದವಾಗಿ ಪ್ರಕಾಶ ಬೀರು " ಎಂದು ಈ ಕೆಳಗಿನ ಮಂತ್ರದಲ್ಲಿ ಹೇಳಿದೆ.
ನಿ ತ್ವಾ ದಧೇ ವರ ಆ ಪೃಥಿವ್ಯಾ, ಇಳಾಯಾಸ್ಪದೇ ಸುದಿನತ್ವೇ ಅಹ್ನಾಮ್ |
ದೃಷದ್ವತ್ಯಾಂ ಮಾನುಷ ಅಪಯಾಯಾಂ ಸರಸ್ವತ್ಯಾಂ ರೇವದಗ್ನೇ ದಿದೀಹಿ || (ಋ.ಸಂ. ೩-೨೩-೪)
ಸರಮಾ ಪಣಿಗಳ ಸಂವಾದದಲ್ಲಿ ಬರವು ರಸಾನದೀ ಆರ್ಯಾವರ್ತದ ಉತ್ತರ ದಿಕ್ಕಿನ ಎಲ್ಲೆಯಾಗಿದ್ದಿತೆಂಬುದನ್ನೇ ಸೂಚಿಸುತ್ತದೆ.
ಋಗ್ವೇದದಲ್ಲಿ ಮೊಜವಾನ್ ಪರ್ವತದ ಉಲ್ಲೇಖವಿರುವುದರಿಂದ ಆರ್ಯರು ಅಲ್ಲಿ ಮೊದಲು ವಾಸವಾಗಿದ್ದರೆಂದು ಹೇಳುವುದು ಸರಿಯಾಗದು. ಋಕ್ ಸಂಹಿತೆಯ ಕಾಲಕ್ಕೆ ಈ ಮೊಜವಾನ್ ಪರ್ವತ, ಇರಾನ್ ದೇಶ ಮೊದಲಾದುವೆಲ್ಲಾ ಆರ್ಯಾವರ್ತದಲ್ಲಿಯೇ ಸೇರಿದ್ದವೆಂದು ಕಂಡುಬರುತ್ತದೆ.
ಆದ್ದರಿಂದ ಆರ್ಯವರ್ತ ಇಂದಿನ ಪರ್ಷಿಯಾದ ಉತ್ತರದಲ್ಲಿರುವ ಏಷ್ಯಾಮೈನರಿನಿಂದ ಪೂರ್ವಕ್ಕೂ ಗಂಗಾಪ್ರದೇಶದ ಪಶ್ಚಿಮಕ್ಕೂ, ಮೊಜವತ್ ಪರ್ವತದ ದಕ್ಷಿಣಕ್ಕೂ ಸಿಂಧೂನದೀ ಸಾಗರದೊಡನೆ ಸಂಗಮವಾಗುವ ಪ್ರದೇಶದಿಂದ ಉತ್ತರಕ್ಕೂ ಹರಡಿತ್ತೆಂದು ಸಿದ್ಧವಾಗುತ್ತದೆ. ಇದೇ ಆರ್ಯರ ಮೂಲವಸತಿಯಾಗಿತ್ತೆಂದು ಇವರ ಮತ.

ಮೇಲ್ಕಂಡ ವಾದಗಳ ಮೇಲೆ ಡಾ. ಎನ್ ಎಸ್ ಅನಂತರಂಗಾಚಾರ್ ಅವರ ತೀರ್ಮಾನ


ಈ ರೀತಿಯಲ್ಲಿ ಆರ್ಯರ ಮೂಲವಸತಿಯ ವಿಚಾರದಲ್ಲಿ ವಿದ್ವಾಂಸರು ಬಗೆಬಗೆಯ ಅಭಿಪ್ರಾಯಗಳನ್ನು ಪ್ರತಿಪಾದಿಸಿದ್ದಾರೆ. ತುಲನಾತ್ಮಕ ದೃಷ್ಟಿಯಿಂದ ಇವುಗಳನ್ನು ವಿಮರ್ಶಿಸಿದರೆ ಈ ವಿವಾದ ಇನ್ನೂ ನಿರ್ಣೀತವಾಗಿಲ್ಲವೆಂದೂ ಹೇಳಬಹುದು. ಆರ್ಯರು ಮಧ್ಯ ಏಷ್ಯಾದಿಂದಲೋ ಉತ್ತರ ಧ್ರುವದಿಂದಲೋ ಬಂದರೆಂಬ ವಾದಕ್ಕೆ ಆಧಾರ ದೊರೆಯುವಂತೆ ಅವರು ಆರ್ಯಾವರ್ತದಲ್ಲಿದ್ದರೆಂಬುದಕ್ಕೂ ಆಧಾರಗಳಿಲ್ಲದೇ ಇಲ್ಲ. ವೇದ ಶಬ್ದಗಳ ಅರ್ಥವೃತ್ತಿ ಸಂದಿಗ್ಧವಾಗಿರುವುದೂ ಅವಕ್ಕೂ ನಮಗೂ ಸಹಸ್ರಾರು ವರ್ಷಗಳ ಅಂತರವಿರುವುದೂ ಈ ವಿಧವಾದ ಭಿನ್ನಾಭಿಪ್ರಾಯಗಳಿಗೆ ಕಾರಣ. ಯಾಸ್ಕಾಚಾರ್ಯರ ಕಾಲಕ್ಕೇ ವೇದಮಂತ್ರಗಳು ಸುಲಭವಾಗಿ ಅರ್ಥವಾಗುತ್ತಿರಲಿಲ್ಲವೆಂದು ಹೇಳಿರುವಾಗ ಈಗ ಆ ಮಂತ್ರಗಳ ಆಧಾರದಿಂದಲೇ ಸಿದ್ಧಾಂತಗಳನ್ನು ಸ್ಥಾಪಿಸಲು ಯತ್ನಿಸುವುದು ಯಶಸ್ವಿಯಾಗದು. ಅಲ್ಲದೇ ವೇದಸೂಕ್ತಗಳು ಒಂದೇ ಕಾಲಕ್ಕೆ ಸೇರಿದವೂ ಅಲ್ಲ. ಭಿನ್ನಭಿನ್ನಕಾಲದಲ್ಲಿ ಭಿನ್ನ ಭಿನ್ನ ಋಷಿಗಳಿಂದ ಬೇರೆ ಬೇರೆ ದೇಶ ಮತ್ತು ಪರಿಸ್ಥಿತಿಗಳಲ್ಲಿ ದೃಷ್ಟವಾದ ಮಂತ್ರಗಳಿವು. ಹೀಗಾಗಿ ವೇದದಲ್ಲಿ ಉತ್ತರ ಧ್ರುವದ ಅಂಶವೂ ಇರಬಹುದು. ಆರ್ಯಾವರ್ತದ ಮೊಜವದಾದಿ ವಿಚಾರಗಳೂ ಇರಬಹುದು. ಅಷ್ಟರಿಂದಲೇ ಆರ್ಯರ ಮೂಲವಸತಿ ಯಾವುದೆಂಬುದನ್ನು ಅವು ಸಾಧಿಸಲಾರವು. ಬೇರೆ ಬೇರೆ ಭೌಗೋಳಿಕ ಪರಿಸ್ಥಿತಿಗಳಲ್ಲಿ ಬೇರೆ ಬೇರೆ ಪ್ರದೇಶಗಳಿಗೆ ಅವು ಹೋಗಿರಬಹುದು.
ಋಗ್ವೇದದಲ್ಲಿ ಬರುವ ಪರ್ವತಗಳು, ನದಿಗಳು, ಮತ್ತು ಪ್ರದೇಶಗಳು ಮೊದಲಾದವೆಲ್ಲಾ ಆರ್ಯಾವರ್ತಕ್ಕೆ ಸಂಬಂಧಿಸಿವೆ. ಇಂದಿನ ಪರ್ಷಿಯಾ, ಇರಾನ್, ಕಾಬೂಲ್ ಪ್ರಾಂತಗಳೆಲ್ಲಾ ಆರ್ಯಾವರ್ತದೊಳಗೆ ಅಡಕವಾಗಿದ್ದವೆಂದೂ ಗೊತ್ತಾಗುತ್ತದೆ. ಆರ್ಯರು ಇಲ್ಲಿಯೇ ಮೊದಲು ವಾಸವಾಗಿದ್ದು ಇಲ್ಲಿಂದಲೇ ಇತರ ಭಾಗಗಳಿಗೆ ವಲಸೆ ಹೋಗೆರಬೇಕೆಂದು ಸಾರುವ ವಾದ ಅಸಂಭವಾದುದಲ್ಲ. ತುಲನಾತ್ಮಕ ಭಾಷಾಶಾಸ್ತ್ರದಂತೆ ಸಂಸ್ಕೃತ, ಇಂಗ್ಲಿಷ್, ಲ್ಯಾಟಿನ್, ಪರ್ಷಿಯನ್, ಮೊದಲಾದ ಭಾಷೆಗಳು ಇಂಡೋ ಜರ್ಮನಿಕ್ ವಂಶಕ್ಕೆ ಸೇರಿದುವೆಂದು ಸಮರ್ಥಿಸಲಾಗಿದೆ. ಇವರೆಲ್ಲಾ ಒಂದೇ ಬುಡಕಟ್ಟಿನವರೆಂದು ಇದರಿಂದ ಸಿದ್ಧವಾಗುತ್ತದೆ. ಈ ಮೂಲ ಬುಡಕಟ್ಟಿನ ಜನ ಆರ್ಯಾವರ್ತದಿಂದಲೇ ಇತರ ಭಾಗಗಳಿಗೆ ವಲಸೆ ಹೋಗಿದ್ದಿರಬಹುದು.; ಮಧ್ಯ ಏಷ್ಯಾದಿಂದಲೇ ಬಂದಿರಬೇಕಾಗಿಲ್ಲ.
ಹರಪ್ಪ ಮತ್ತು ಮೊಹೆಂಜದಾರೋ ಪ್ರದೇಶದಲ್ಲಿ ಉಪಲಬ್ಧವಾಗಿರುವ ನಾಗರಿಕತೆಗೂ ಆರ್ಯರ ಈ ನಾಗರೀಕತೆಗೂ ಸಂಬಂಧವೆದೆಯೇ ? ಅದು ಎಂಥದು ? ಎಂಬ ಬಗೆಯೂ ವಿಚಾರ ವಿವಿಧವಾಗಿ ನಡೆದಿದೆ. ಸಿಂಧೂ ಬಯಲಿನ ಆ ನಾಗರೀಕತೆ ಹೆಚ್ಚೆಂದರೆ ಕ್ರಿ.ಪೂ. ೪೦೦೦ ವರ್ಷಗಳಿಗೆ ಸಂಬಂಧಿಸಿದುದೆನ್ನಲಾಗಿದೆ. ಋಗ್ವೇದದ ಕಾಲ ಕ್ರಿ.ಪೂ ೫೦೦೦ ಕ್ಕೂ ಹಿಂದಿನದೆಂದು ತಜ್ಞರು ಅಭಿಪ್ರಾಯ ಪಡುತ್ತಾರೆ. ಈ ಪರಿಸ್ಥಿತಿಯಲ್ಲಿ ಸಿಂಧೂನದಿ ನಾಗರಿಕತೆಯು ವೇದೋತ್ತರ ಕಾಲೀನವೇ ? ಅಥವಾ ವೇದಗಳ ನಾಗರಿಕತೆಗೆ ಸಮಕಾಲೀನವಾದುದೇ ? ಈ ಅಂಶವೂ ಚರ್ಚೆಗೊಳಗಾಗಿದೆ. ಈ ಪ್ರಶ್ನೆ ಇನ್ನೂ ಜಟಿಲವಾಗಿಯೇ ಉಳಿದಿದೆ. ಆರ್ಯರು ಮಧ್ಯ ಏಷ್ಯಾದಿಂದ ಬಂದವರೆಂದು ಒಂದು ಊಹೆ ಮಾತ್ರ. ಹಾಗೆಯೇ ಆರ್ಯಾವರ್ತದಲ್ಲಿಯೇ ಇದ್ದು ಇತರ ಭಾಗಗಳಿಗೆ ಹೋದರೆಂಬುದೂ ಮತ್ತೊಂದು ಊಹೆ. ಇವುಗಳಲ್ಲಿ ಯಾವುದೊಂದನ್ನೂ ಸ್ಥಾಪಿಸುವ ಪ್ರಬಲ ಪ್ರಮಾಣಗಳು ಉಪಲಬ್ಧವಾಗುವವರೆಗೂ ಈ ಪ್ರಶ್ನೆ ಇನ್ನೂ ನಿರ್ಣೀತವಾಗಿಲ್ಲವೆಂದೇ ಹೇಳಬೇಕಾಗಿದೆ.
(ಇಲ್ಲಿಗೆ ಮುಗಿದಿದೆ)








Monday, March 12, 2012

ಇಂದಿನ ಸಮಾಜದ ದು: ಸ್ಥಿತಿಗೆ ಕಾರಣರಾರು?


ಬೆಂಗಳೂರಿನ ವೇದಾಧ್ಯಾಯೀ ಸುಧಾಕರಶರ್ಮರ ಮನೆಯಲ್ಲಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದಾಗ ಹಲವಾರು ವಿಚಾರಗಳನ್ನು ಶ್ರೀ ಶರ್ಮರು ತಿಳಿಸಿದರು. ಅದರ ಒಂದು ಕಂತು ಇಲ್ಲಿದೆ.
ನನ್ನ ಪ್ರಶ್ನೆ  ಇಂದಿನ ಸಮಾಜದ ದು: ಸ್ಥಿತಿಗೆ ಕಾರಣರಾರು? ಎಂದಾಗಿತ್ತು .

ಯತ್ರ ಬ್ರಹ್ಮ ಚ ಕ್ಷತ್ರಂ ಚ 

ಸಮ್ಯಂಚೌ ಚರತ: ಸಹ:|

ತಲ್ಲೋಕಂ ಪುಣ್ಯಂ ಪ್ರಜ್ಞೇಷಂ 

ಯತ್ರ ದೇವಾ: ಸಮಗ್ನಿನಾ||

[ಯಜು 20.25]

ಯತ್ರ=ಎಲ್ಲಿ

ಬ್ರಹ್ಮ ಚ ಕ್ಷತ್ರಂ ಚ =ಬ್ರಾಹ್ಮೀ ಶಕ್ತಿ  ಮತ್ತು ಕ್ಷಾತ್ರ ಶಕ್ತಿಯು 

ಸಮ್ಯಂಚೌ= ಒಂದಕ್ಕೊಂದು ಆಶ್ರಯ ನೀಡುತ್ತಾ

ಸಹ: ಚರತ: =ಒಟ್ಟಿಗೆ ಪ್ರ ವೃತ್ತವಾಗುತ್ತವೋ

ಯತ್ರ=ಎಲ್ಲಿ

ದೇವಾ:= ಪವಿತ್ರ ಚಾರಿತ್ರ್ಯ ವಂತರಾದ ವಿದ್ವಜ್ಜನರು 

ಅಗ್ನಿನಾ ಸಹ = ರಾಷ್ಟ್ರ ನಾಯಕರೊಂದಿಗೆ ಸಹಕರಿಸಿ ನಡೆಯುತ್ತಾರೋ 

ತಮ್ ಲೋಕಂ = ಆ ಲೋಕವನ್ನೇ 

ಪುಣ್ಯಂ ಪ್ರಜ್ಞೇಷಂ =ಪುಣ್ಯ ಶಾಲಿ ಎಂದು ತಿಳಿಯುತ್ತೇನೆ 

ಶರ್ಮರು ನೀಡಿದ ಉತ್ತರ  ಅವರಧ್ವನಿಯಲ್ಲೇ ಇದೆ ಕೇಳಿ. 


Thursday, March 8, 2012

ಮಾನಸಿಕಬಲ ನೀಡು ಪ್ರಭುವೆ

     ಇತ್ತೀಚೆಗೆ ಬೆಂಗಳೂರಿಗೆ ಹೋಗಿದ್ದಾಗ ಪಂ. ಸುಧಾಕರ ಚತುರ್ವೇದಿಯವರ ಸತ್ಸಂಗದಲ್ಲಿ ಪಾಲುಗೊಂಡು ಅಲ್ಲಿ ನಡೆದ ಅಗ್ನಿಹೋತ್ರ, ಭಜನೆಗಳು, ಪಂಡಿತಜಿಯವರ ವಿಚಾರಧಾರೆಗಳನ್ನು ಕಣ್ಮನಗಳಲ್ಲಿ ತುಂಬಿಕೊಂಡ ಸೌಭಾಗ್ಯ ನನ್ನದಾಯಿತು. ಆ ಸಂದರ್ಭದಲ್ಲಿ ನಡೆದ ಎಲ್ಲಾ ಕಾರ್ಯಕ್ರಮದ ವಿಡಿಯೋ ಚಿತ್ರಣ ಮಾಡಿಕೊಂಡಿದ್ದೇನೆ. ಅಗ್ನಿಹೋತ್ರ ನಡೆದ ನಂತರದಲ್ಲಿ ಹೇಳಿದ ಭಜನೆಯ ವಿಡಿಯೋ ಚಿತ್ರಣವನ್ನು ನಿಮಗಾಗಿ ಇಲ್ಲಿ ಪ್ರಸ್ತುತ ಪಡಿಸಿರುವೆ. ಅಗ್ನಿಹೋತ್ರ, ಯಜ್ಞಗಳ ಹಿರಿಮೆ ಸಾರುವ ಈ ಭಜನೆ ಮನನೀಯವಾಗಿದೆ, ಅರ್ಥಪೂರ್ಣವಾಗಿದೆ.


     ಪದಶಃ ಅಲ್ಲದಿದ್ದರೂ ಮೂಲ ಭಾವಾರ್ಥ ಮೂಡಿಸುವ ಭಜನೆಯ ಕನ್ನಡ ಅನುವಾದ ಮಾಡಿದ್ದೇನೆ. ಆಸಕ್ತರು ಇದನ್ನು ಹಾಡಿ ಧ್ವನಿಮುದ್ರಿಸಿ ಪ್ರಕಟಿಸಲು ವಿನಂತಿಸುವೆ. ಅಂದು ಹೇಳಲಾದ ಇನ್ನೊಂದು ಭಜನೆ 'ತಲೆ ಮಾತ್ರ ಬಾಗದಿರಲಿ'ಗೆ ಲಿಂಕ್: http://kavimana.blogspot.in/2012/03/blog-post_08.html
-.ಕವೆಂ.ನಾಗರಾಜ್.

ಮಾನಸಿಕಬಲ ನೀಡು ಪ್ರಭುವೆ

ಪೂಜನೀಯ ಪ್ರಭುವೆ ನಮ್ಮಯ ಭಾವ ಉಜ್ವಲ ಮಾಡಿರಿ |
ದೂರಗೊಳಿಸಿ ಛಲ ಕಪಟಗಳ ಮಾನಸಿಕ ಬಲ ನೀಡಿರಿ || ೧ ||


ವೇದ ತೋರಿದ ಮಾರ್ಗ ತಿಳಿಸಿ ಸತ್ಯ ಧಾರಣೆ ಮಾಡಿಸಿ |
ಹರ್ಷದಿರಲಿ ಸಕಲರೆಲ್ಲರು ಶೋಕಸಾಗರ ದಾಟಲಿ || ೨ ||


ವಾಸನಾತೀತರಾಗುವ ಯಜ್ಞಕಾರ್ಯವ ಮಾಡುವಾ |
ಧರ್ಮಪಥದಲಿ ಸಾಗಿ ನಾವು ಲೋಕ ಹಿತವನೆ ಸಾರುವಾ || ೩ ||


ನಿತ್ಯ ಶ್ರದ್ಧಾ ಭಕ್ತಿಯಲಿ ಯಜ್ಞಾದಿಗಳ ನಾವ್ ಮಾಡುವಾ |
ರೋಗ ಪೀಡಿತ ಲೋಕದಿರುವ ಸಕಲ ಸಂಕಟ ಕಳೆಯವಾ || ೪ ||


ಪಾಪ ಅತ್ಯಾಚಾರ ಭಾವ ಮನದ ಮೂಲದೆ ಅಳಿಯಲಿ |

ಯಜ್ಞದಿಂದಲಿ ನರರು ಸಕಲರ ಆಸೆಗಳು ಈಡೇರಲಿ || ೫ ||


ಸಕಲಜೀವಿಗೆ ಶುಭವ ತರಲಿ ಹವನ ಸುಖಕರವೆನಿಸಲಿ |
ವಾಯುಜಲ ಶುಭಗಂಧ ಕೂಡಿ ಲೋಕದೆಲ್ಲೆಡೆ ಹರಡಲಿ || ೬ ||


ಸ್ವಾರ್ಥಭಾವವು ಅಳಿದು ಹೋಗಿ ಪ್ರೇಮಪಥದಲಿ ಸಾಗುವಾ |
ನನಗಲ್ಲವಿದು ಎಂಬ ಭಾವದಿ ಸಾರ್ಥಕತೆ ನಾವ್ ಕಾಣುವಾ || ೭ ||


ಪ್ರೇಮರಸದಲಿ ತೃಪ್ತರಾಗಿ ನಾವು ವಂದನೆ ಸಲಿಪೆವು |
ಕರುಣಾನಿಧಿಯೇ ನಿಮ್ಮ ಕರುಣೆ ಸಿಗಲು ಎಲ್ಲರು ಧನ್ಯರು || ೮ ||

ಉದ್ದನೆಯ ಗಡ್ಡದ ತೇಜಸ್ವೀ ವ್ಯಕ್ತಿ

                 ಬಲು ಎತ್ತರದ ನೀಳಶರೀರದ ಉದ್ದನೆಯ ಗಡ್ಡದ ,ಫಳ  ಫಳ  ಹೊಳೆಯುವ ಕಣ್ಣಿನ ತೇಜಸ್ವೀ ವ್ಯಕ್ತಿಯೊಬ್ಬರು ನಿಂತಿದ್ದಾರೆ. ಮಾಸಿದ  ಕಾವಿ ಬಟ್ಟೆ  ಧರಿಸಿದ್ದರೂ  ಅವರ ತೇಜಸ್ಸಿನಿಂದ ಆಕರ್ಶಿತನಾಗುತ್ತೇನೆ. ಅಭಯ ಹಸ್ತ ತೋರಿಸುತ್ತಾ  ನಿಂತಿದ್ದಾರೆ. 


-ಯಾರು ಸ್ವಾಮಿ ನೀವು?


-ಅಯ್ಯೋ ದಡ್ಡ ಗೊತ್ತಾಗಲಿಲ್ಲವೇ?     


-ದಡ್ಡ ನೆಂಬ  ಅರಿವಿದೆ. ನನ್ನ ಮಕ್ಕಳು, ನನ್ನ ಬಂಧುಗಳೆಲ್ಲಾ  ಹೇಳುತ್ತಿರುತ್ತಾರೆ.


-ಅವರು ಹೇಳಲಿ ಬಿಡು. ನಾನು ನಿನಗೆ ಮಾತ್ರ  ದರ್ಶನ ಕೊಟ್ಟೆನೆಂದ ಮೇಲೆ  ನೀನು  ದಡ್ಡ ನೋ    ಬುದ್ಧಿವಂತನೂ, ಏನಾದರಾಗಲಿ, ನೀನು ಪುಣ್ಯವಂತ ನೆನಸಿಲ್ಲವೇ? 


-ಹೌದು ಸ್ವಾಮಿ, ನಾನು  ಪುಣ್ಯ ವಂತನೇ  ಹೌದು. ಜೀವನದಲ್ಲಿ ಕಾಣಬೇಕಾಗಿದ್ದ ಹಲವು ಕಷ್ಟಗಳನ್ನು  ಕಂಡು ಅನುಭವಿಸಿ , ಸುಖವನ್ನೂ ಕಂಡು ಅನುಭವಿಸಿ  ಈಗ  ನಿಮ್ಮಂತವರ  ಸಹವಾಸ ಸಿಗುತ್ತಿದೆ, ಇದಕ್ಕಿಂತ ಇನ್ನೇನು ಬೇಕು? ನಾನು  ಪುಣ್ಯ ವಂತನೇ  ಹೌದು.


- ಹೌದು, ಅದೇನು ಹೀಗೆ ಈ ಹೊತ್ತಿನಲ್ಲಿ ಬಂದಿರಿ?


-ನಿನ್ನ ತೊಳಲಾಟ ನೋಡಲಾರದೆ ಬಂದೆ. ಅದೇನೋ " ಗೊಂದಲ ಗೊಂದಲ " ಎಂದು ಹಲಬುತ್ತಿದ್ದೆಯಲ್ಲಾ!  ಆ ಬಗ್ಗೆ  ನಿನಗೆ ಸತ್ಯ ತಿಳಿಸಲು ಬಂದೆ.


-ಸತ್ಯವನ್ನು ತಿಳಿಸುವಿರಾ? ಯಾರು ಸ್ವಾಮಿ ನೀವು?



-ನಿನಗೆ ನಾನ್ಯಾರೆಂಬುದು ಮುಖ್ಯವೋ? ಅಥವಾ ಸತ್ಯ ದ ವಿಚಾರ ಮುಖ್ಯವೋ?


-ಸತ್ಯ ತಿಳಿಯಬೇಕೆಂಬ ಇಚ್ಛೆ,  ನೀವ್ಯಾರು ತಿಳಿಯಬೇಕೆಂಬ ಕುತೂಹಲ!


-ನೋಡು ನಿನ್ನ ಮನಸ್ಸಿನಲ್ಲಿ  ಎದ್ದಿರುವ  ವಿಚಾರಗಳೆಲ್ಲಾ ಸರಿಯಾಗಿಯೇ ಇದೆ.  ಸತ್ಯ ಎಂಬುದು ಒಂದೆ. ಅದೇ ವೇದ. ವೇದದಲ್ಲಿ  ಹೇಳಿರುವುದೇ ಸತ್ಯ!


-ವೇದದಲ್ಲಿ  ಸಮಾನತೆ ಇದೆ ಎಂದು  ಸುಧಾಕರ ಶರ್ಮರು ವೇದ  ಮಂತ್ರವನ್ನು ಉಧಾಹರಿಸಿ  ಹೇಳುತ್ತಾರೆ. ಆದರೆ  ಆಚರಣೆಯಲ್ಲಿ  ಪ್ರತಿಶತ 99   ಪುರೋಹಿತರು ಹೇಳುವ ಮಾತು ಇದಕ್ಕೆ ಹೊರತಾಗಿಯೇ ಇದೆಯಲ್ಲಾ!  ನಾವು ಮಾಡುತ್ತಿರುವ ಆಚರಣೆಗಳಲ್ಲಿ ಪ್ರತಿಶತ 90 ಕ್ಕಿಂತ ಹೆಚ್ಚು  ವೇದ ಭಾಹಿರವೇ ಎಂದು ಶರ್ಮರು ಹೇಳುತ್ತಾರಲ್ಲಾ!


-ನೋಡು ವೇದವಿರುವುದು  ಸಮಸ್ತ  ಮನುಕುಲದ ಉದ್ಧಾರಕ್ಕಾಗಿ , ಒಂದು ಸುಂದರ ಸಮಾಜಕ್ಕಾಗಿ! ನಿನ್ನ ಅಂತರಂಗದಲ್ಲಿ ಎದ್ದಿರುವ ಪ್ರಶ್ನೆಗಳು ಸರಿಯಾಗಿಯೇ ಇವೆ. ನಿನ್ನ ಅರಿವೇ ನಿನಗೆ ಗುರು ಎಂಬ ಮಾತನ್ನು ನೀನು ಕೇಳಿದ್ದೀಯಾ ತಾನೇ? ಹಾಗಿದ್ದಮೇಲೆ  ನಿನಗೆ ಸತ್ಯವೆಂದು ಕಂಡಿದ್ದನ್ನು  ಆಚರಿಸು, ಅಸತ್ಯವೆಂದು  ಅರಿವಾದದ್ದನ್ನು  ನಿನ್ನ ಅಂತ:ಸ್ಸಾಕ್ಷಿ ಗೆ ವಿರುದ್ಧ ವಾಗಿ  ಅನುಸರಿಸಬೇಡ.


- ನಾನು ಅನುಸರಿಸದಿದ್ದರೆ  ನನ್ನ ಪತ್ನಿ ಪುತ್ರರು  ಬೇಸರ ವ್ಯಕ್ತ ಪಡಿಸುತ್ತಾರಲ್ಲಾ! 


- ಮತ್ತೊಮ್ಮೆ ನಿನ್ನನ್ನು ದಡ್ಡ ನೆಂದೇ ಕರೆಯಬೇಕಾಗಿದೆಯಲ್ಲಾ!


-ಯಾರ್ಯಾರೋ   ಹಾಗೆ  ಕರೆಯುತ್ತಿರುವಾಗ  ನಿಮ್ಮಂತ ಮಹಾನುಭಾವರೆದುರು   ದಡ್ಡ ನೆಂದು ಕರೆಸಿಕೊಳ್ಳಲು ನನಗೆ ಬೇಸರವೆನಿಲ್ಲ.


---------------- ಅರೇ, ಎಲ್ಲಿ ಹೋದಿರಿ ಸ್ವಾಮೀ, ಕಾಣುತ್ತಲೇ ಇಲ್ಲವಲ್ಲಾ? 


" ಯಾಕ್ರೀ ಹೀಗೆ  ಕೂಗುತ್ತಿದ್ದೀರಿ? .....ಪತ್ನಿ  ನನ್ನನ್ನು  ಅಲ್ಲಾಡಿಸಿದಾಗ ಎಚ್ಚೆತ್ತು  ಕಣ್ ಬಿಡುತ್ತೇನೆ, ಪಕ್ಕದಲ್ಲಿ ಪತ್ನಿಯನ್ನು ಬಿಟ್ಟು ಬೇರೆ ಯಾರೂ ಇಲ್ಲ. ಹಾಗಾದರೆ ನಾನು ಕಂಡಿದ್ದು!................... ಎತ್ತರದ ನೀಳಶರೀರದ ಉದ್ದನೆಯ ಗಡ್ಡದ ,ಫಳ  ಫಳ  ಹೊಳೆಯುವ ಕಣ್ಣಿನ,ಮಾಸಿದ  ಕಾವಿ ಬಟ್ಟೆ  ಧರಿಸಿದ್ದ    ತೇಜಸ್ವೀ ವ್ಯಕ್ತಿ ????

Wednesday, March 7, 2012

ವೇದಸುಧೆಯ ಕೃತಜ್ಞತೆಗಳು

ಕಳೆದ ಮೂರ್ನಾಲ್ಕು ದಿನಗಳಿಂದ ವೇದಸುಧೆ ಮತ್ತು ಫೇಸ್ ಬುಕ್ ನ   "ಸುಮನಸ " ಗುಂಪಿನಲ್ಲಿ  ಹಾಗೂ ಕನ್ನಡ ಬ್ಲಾಗ್ ನಲ್ಲಿ  ಅದ್ಭುತವಾದ  " ಚಿಂತನ -ಮಂಥನ " ನಡೆಯಿತು. ವಿಷಯ:  ಯಜ್ಞದಲ್ಲಿ ಪ್ರಾಣಿಬಲಿಯನ್ನು ವೇದವು ಪ್ರೋತ್ಸಾಹಿಸುತ್ತದೆಯೇ? ಎನ್ನುವುದು.
ಚರ್ಚೆಯಲ್ಲಿ  ಪಾಲ್ಗೊಂಡವರು ಶ್ರೀಯುತರುಗಳಾದ 


1. ಭೀಮಸೇನ್ ಪುರೋಹಿತ್
2. ಗಣೇಶ್ ಖರೆ
3. ಕವಿ ನಾಗರಾಜ್
4. ಮ. ವೆಂ. ರಮೇಶ ಜೋಯಿಸ್,
5 ವಸಂತ್
6. ವಿ.ಆರ್. ಭಟ್ 
7.ಕಡತೋಕೆ ರಾಮ ಭಟ್ ಅಗ್ನಿಹೋತ್ರಿ   , ಮುಂತಾದವರು.


               ಬಲು ಆರೋಗ್ಯಕರವಾದ  ಚಿಂತನ-ಮಂಥನ ನಡೆಯಿತು. ಅದಕ್ಕಾಗಿ ಸಹಕರಿಸಿದ "ಸುಮನಸ" ತಂಡದ ಶ್ರೀ ಸದ್ಯೋಜಾತ ಮತ್ತು  ಜೋಯಿಸ್ ಎಂ.ವಿ.ಆರ್ ಇವರಿಗೆ ವೇದಸುಧೆಯ ಪರವಾಗಿ     ಕೃತಜ್ಞತೆಗಳು. ಈ ಸಂದರ್ಭದಲ್ಲಿ  ವಿಶೇಷವಾಗಿ ಈರ್ವರನ್ನು  ವೇದಸುಧೆಗೆ ಪರಿಚಯಿಸಬೇಕೆನಿಸುತ್ತಿದೆ. 


                  ಒಬ್ಬರು     ಹರಿಹರದ  ಶ್ರೀ ಭೀಮಸೇನ ಪುರೋಹಿತ್ . ಇಪ್ಪತ್ತೊಂದು ವರ್ಷದ  ತರುಣ.      ಇಂಜಿನಿಯರಿಂಗ್  ಓದಿರುವ ಇವರು  ಕನ್ನಡ,ಹಿಂದಿ ಸಂಸ್ಕೃತ ಮತ್ತು ಇಂಗ್ಲೀಶ್    ಭಾಷೆಗಳನ್ನು ಬಲ್ಲರು. ವೇದದ ಮತ್ತು ನಮ್ಮ ಸಂಸ್ಕೃತಿ ಪರಂಪರೆಯ ಬಗ್ಗೆ ಇವರಿಗಿರುವ  ಅಗಾಧವಾದ  ಶ್ರದ್ಧೆ  ಮತ್ತು ಆಸಕ್ತಿಯನ್ನು ಕಂಡು ಅಚ್ಚರಿಗೊಂಡೆ. ಶ್ರೀಯುತರನ್ನು ವೇದಸುಧೆಯ ಪರವಾಗಿ ಅಭಿನಂದಿಸುತ್ತೇನೆ.


Bhimasen Purohit
ಶ್ರೀ ಭೀಮಸೇನ ಪುರೋಹಿತ್
        ಇನ್ನೊಬ್ಬ ತರುಣ ಶ್ರೀ ಗಣೇಶ್ ಖರೆ. ಇಪ್ಪತ್ತೆರಡು ವರ್ಷದ ತರುಣ. ಮಹಾರಾಷ್ಟ್ರದ ಪುಣೆಯಲ್ಲಿರುವ ಕನ್ನಡಿಗ. ಇವರು  ಕನ್ನಡ,ಹಿಂದಿ ಸಂಸ್ಕೃತ ಮತ್ತು ಇಂಗ್ಲೀಶ್   ಜೊತೆಗೆ  ಮರಾಠಿ       ಭಾಷೆಗಳನ್ನು ಬಲ್ಲರು. ವೇದದ ಮತ್ತು ನಮ್ಮ ಸಂಸ್ಕೃತಿ ಪರಂಪರೆಯ ಬಗ್ಗೆ ಇವರಿಗಿರುವ  ಅಗಾಧ ವಾದ  ಶ್ರದ್ಧೆ  ಮತ್ತು ಆಸಕ್ತಿಯನ್ನು ಕಂಡು ಅಚ್ಚರಿಗೊಂಡೆ. ಶ್ರೀಯುತರನ್ನು ವೇದಸುಧೆಯ ಪರವಾಗಿ ಅಭಿನಂದಿಸುತ್ತೇನೆ.

ಶ್ರೀ ಗಣೇಶ್ ಖರೆ


ಸಂಸ್ಕೃತ ಸಾಹಿತ್ಯ ಪರ್ವಗಳು

ಆತ್ಮೀಯ ವೇದಾಸಕ್ತರೇ ಪ್ರಸ್ತುತ ಲೇಖನವು ವೇದಗಳ ಬಾಹ್ಯ ಸ್ವರೂಪಕ್ಕೆ ಸಂಬಂದಿಸಿದ್ದು, ವೇದಗಳಲ್ಲಿರುವ ವಿಷಯಗಳೇನು ? ವೇದವು ಏನ್ನನ್ನು ತಿಳಿಸುತ್ತದೆ ? ಎಂಬುದನ್ನು ತಿಳಿಯುವು ವೇದಗಳ ಆಂತರಿಕ ಸ್ವರೂಪ ಜ್ಞಾನವಾದರೇ, ವೇದಗಳು ವಿಭಾಗ, ಒಳವಿಭಾಗ, ಮಂತ್ರಗಳ ಸಂಖ್ಯೆ, ಮಂತ್ರದ್ರಷ್ಟಾರರು, ವೈದಿಕ ದೇವತೆಗಳು, ವೈದಿಕ ಛಂದಸ್ಸು ಮೊದಲಾದವುಗಳ ಬಗ್ಗೆ ತಿಳಿಯುವುದು ವೇದಗಳ ಬಾಹ್ಯ ಸ್ವರೂಪವಾಗಿದೆ, ಇಲ್ಲಿರುವು ವಿಷಯಗಳು ಡಾ. ಅಂನಂತರಂಗಾಚಾರ್ ಅವರಿಂದ ರಚಿತವಾದ ವೈದಿಕ ಸಾಹಿತ್ಯ ಚರಿತ್ರೆಯ ಆಯ್ದ ಭಾಗಗಳಾಗಿವೆ.
ಸಂಸ್ಕೃತ ಸಾಹಿತ್ಯವನ್ನು ಸ್ಥೂಲವಾಗಿ ವೇದಗಳ ಸಂಸ್ಕೃತ ಮತ್ತು ಕಾವ್ಯ ಸಂಸ್ಕೃತ ಎಂದು ಎರಡು ಭಾಗಗಳಾಗಿ ವಿಂಗಡಿಸುತ್ತಾರೆ. ಬಹುಮುಖವಾದ ಮಹತ್ವವನ್ನು ಹೊಂದಿರುವ ಈ ವಿರಾಟ್ ಸಾಹಿತ್ಯದ ಸ್ವರೂಪವನ್ನು ಪರಿಚಯ ಮಾಡಿಕೊಡಲು ಇದನ್ನು ಕಾಲದ ದೃಷ್ಟಿಯಿಂದ ಐದು ಭಾಗಗಳಾಗಿ ವಿಂಗಡಿಸಬಹುದು.

) ಶೃತಿ ಯುಗ ಕ್ರಿ.ಪೂ ೪೫೦೦ ಮತ್ತು ತತ್ಪೂರ್ವ
೨) ಸ್ಮೃತಿ ಯುಗ ಕ್ರಿ.ಪೂ ೫೦೦ ರ ಪೂರ್ವ
೩) ಕಾವ್ಯ ಯುಗ ಕ್ರಿ.ಪೂ ೫೦೦ ರಿಂದ ಕ್ರಿ.ಶ 800
೪) ವ್ಯಾಖ್ಯಾನ ಯುಗ ಕ್ರಿ.ಪೂ ೮೦೦ ರಿಂದ 1400
) ನವೀನ ಕಾಲ ಕ್ರಿ. ೧೪೦೦ ರಿಂದ ಈಚಿನ ಕಾಲ

ಈ ವಿಭಾಗವು ಪ್ರಾಯೋವಿಭಾಗವೆಂಬುದನ್ನು ನಾವು ನೆನಪಿಡಬೇಕು. ಯಾವ ಬಗೆಯ ಕೃತಿಗಳು ಬಹುತರವಾಗಿ ನಿರ್ಮಾಣಗೊಂಡವೋ ಅವುಗಳಿಗನುಸಾರವಾಗಿ ಆ ಕಾಲವನ್ನು ವಿಭಾಗ ಮಾಡಿದೆ. ಒಂದೊಂದು ಕಾಲದಲ್ಲಿಯೂ ಇತರ ಬಗೆಯ ಕೃತಿಗಳೂ ಹುಟ್ಟಿವೆ. ವ್ಯಾಖ್ಯಾನ ಯುಗವೆಂದ ಕಾಲದಲ್ಲಿ ಸ್ವತಂತ್ರ ಕೃತಿಗಳಿರಲೇ ಇಲ್ಲವೆಂದು ಭಾವಿಸಬೇಕಾಗಿಲ್ಲ. ಸ್ವತಂತ್ರವಾದ ಒಂದೊಂದು ಕೃತಿ ಆಗಲೂ ತೋರಿತು. ಹಾಗೆಯೇ ಇತರ ಕಾಲದಲ್ಲಿಯೂ ಬೇರೆಬೇರೆ ಬಗೆಯ ಕೃತಿಗಳು ಬಂದಿರುವುದುಂಟು.


ಶೃತಿಯುಗ ( ಕ್ರಿ.ಪೂ ೪೫೦೦ ಮತ್ತು ಹಿಂದೆ)

ವೇದ ವಾಙ್ಮಯದ ಭಾಷೆ ವೈದಿಕ ಸಂಸ್ಕೃತ. ಪುರಾತನರಾದ ಋಷಿಗಳು ಈ ಭಾಷೆಯನ್ನು ತಮ್ಮ ನಿತ್ಯವ್ಯವಹಾರದಲ್ಲಿ ಬಳಸುತ್ತಿದ್ದರು. ತಾವು ಸಾಕ್ಷಾತ್ಕರಿಸಿಕೊಂಡ ನಿಗೂಢಜ್ಞಾನವನ್ನು ಈ ಮಂತ್ರರಾಶಿಯಲ್ಲಿ ಅಡಗಿಸಿಟ್ಟು ಅವರು ಪರಮೋಪಕಾರ ಮಾಡಿದ್ದಾರೆ. ಈ ವೈದಿಕ ಸಂಸ್ಕೃತ ಕಾಲಕಳೆದಂತೆ ಅನೇಕ ವ್ಯತ್ಯಾಸಗಳನ್ನು ಹೊಂದಿ ಪಾಣಿನಿ ಪತಂಜಲಿಗಳ ಕಾಲಕ್ಕೆ ಸಂಸ್ಕೃತದ ರೂಪವನ್ನು ಹೊಂದಿತು. ಪಾಣಿನಿ ವೇದಸಂಸ್ಕೃತದ ಬಗೆಗೆ ವೈದಿಕ ಪ್ರಕ್ರಿಯೆಯನ್ನು ಪ್ರತ್ಯೇಕವಾಗಿ ರಚಿಸಿದ್ದಾರೆ. ಶ್ರುತಿಗಳ ಸಂಸ್ಕೃತವನ್ನು ಶ್ರುತಿಗಳ ಭಾಷೆ ಅಥವಾ ವೈದಿಕ ಸಂಸ್ಕೃತವೆಂದು ಕರೆಯಲಾಗಿದೆ. ಒಂದೇ ಭಾಷೆ ಬೇರೆಬೇರೆ ಘಟ್ಟಗಳಲ್ಲಿ ಬೇರೆ ಬೇರೆ ರೂಪಗಳನ್ನೂ ವಿಶಿಷ್ಟವಾದ ಲಕ್ಷಣಗಳನ್ನೂ ಪಡೆಯಿತು. ವೇದಭಾಷೆ ವೈದಿಕ ಸಂಸ್ಕೃತವಾಗಿದ್ದು ಪಾಣೀನಿ ಪತಂಜಲಿಗಳ ಕಾಲಕ್ಕೆ ಸಂಸ್ಕೃತವಾಗಿ ಬೆಳೆಯಿತು. ಭಾಷೆಯ ವ್ಯಾಕರಣ ಎಲ್ಲ ಘಟ್ಟಗಳಿಗೂ ಸರಿಸಮಾನವಾಗಿ ಅನ್ವಯಿಸಿ ಭಾಷೆಯ ಏಕರಸತೆಯನ್ನು ನಿರ್ವಿವಾದವಾಗಿ ಸ್ಥಾಪಿಸುತ್ತದೆ. ಶ್ರುತಿಗಳ ಭಾಷೆಯ ವೈಲಕ್ಷಣ್ಯಗಳನ್ನು ಮಾತ್ರ ಪಾಣಿನಿ ತಿಳಿಸಿ 'ಛಂದಸಿ' 'ಭಾಷಾಯಾಂ' ಎಂದು ಅವುಗಳಿಗೆ ಭೇದವನ್ನು ಸೂಚಿಸಿದ್ದಾರೆ. ಅಖಂಡವಾದ ವೇದವಾಙ್ಮಯವೆಲ್ಲಾ ಈ ಶ್ರುತಿಯುಗಕ್ಕೆ ಸೇರುತ್ತವೆ. ನಾಲ್ಕು ವೇದಗಳ ಸಂಹಿತಿಗಳು, ಬ್ರಾಹ್ಮಣಗಳು, ಆರಣ್ಯಕೋಪನಿಷತ್ತುಗಳು ಮಾತ್ರ ಈ ಯುಗಕ್ಕೆ ಸೇರಿದವು.
ಸ್ಮೃತಿ ಯುಗ ಕ್ರಿ.ಪೂ ೫೦೦ ರ ಪೂರ್ವ

ಶ್ರುತಿಗಳ ನಂತರ ಸ್ಮೃತಿಗಳು ಮೂಡಿಬಂದವು ಇವು ಬಹುಮುಖವಾಗಿ ಅನೇಕ ವಿಧವಾದ ಮಹತ್ವವನ್ನು ಹೊಂದಿವೆ. ಸ್ಮೃತಿಯುಗಕ್ಕೆ ವೇದಾಂಗಗಳು. ರಾಮಾಯಣ, ಮಹಾಭಾರತ, ಮೊದಲಾದ ಇತಿಹಾಸಗಳು, ಪ್ರಾಚೀನ ಪುರಾಣಗಳು ಇವು ಸೇರುತ್ತವೆ. ಈ ಕಾಲದಲ್ಲಿನ್ನೂ ಸಂಸ್ಕೃತ ಪ್ರಾಕೃತ ಭೇದಗಳು ಇಷ್ಟು ಗಮನಾರ್ಹವಾಗಿ ತೋರಿರಲಿಲ್ಲವೆಂದು ಕಾಣುತ್ತದೆ. ಆರ್ಯ ಸಂಸ್ಕೃತಿ ಭಾರತದ ಪೂರ್ವ ಹಾಗೂ ದಕ್ಷಿಣ ಭಾಗಗಳಿಗೆ ಈ ಕಾಲದಲ್ಲಿ ಹರಡಿತು. ಅನೇಕ ದಸ್ಯು ಅಥವಾ ದಾಸರು ಈ ಕಾಲದಲ್ಲಿ ಆರ್ಯರ ಗುಂಪಿಗೆ ಸೇರಿಹೋದರು. ಕೆಳಗಿನ ವರ್ಣದ ಸ್ತ್ರೀಯರನ್ನು ಆರ್ಯರು ವರಿಸಿತ್ತಿದ್ದ ಕಾರಣ ಅವರೂ ಸಂಸ್ಕೃತವನ್ನೇ ನುಡಿಯತೊಡಗಿದರು. ತತ್ಪರಿಣಾಮವಾಗಿ ಜನಸಾಮಾನ್ಯರೂ ಮೇಲಿನ ಮೂರು ವರ್ಣಗಳ ಸ್ತ್ರೀಯರೂ ಸಂಸ್ಕೃತ ಭಾಷೆಯಲ್ಲಿನ ಕರ್ಕಶವರ್ಣಗಳನ್ನು ಮೃದುವರ್ಣಗಳನ್ನಾಗಿ ಉಚ್ಛರಿಸತೊಡಗಿದರು. ಹೀಗೆ ಈ ಸಂಧರ್ಭಗಳು ಪ್ರಾಕೃತಗಳ ಉಗಮಕ್ಕೆ ಅನುವು ಮಾಡಿಕೊಟ್ಟವು. ಬೇರೆ ಬೇರೆ ಪ್ರಾಂತಗಳ ಪ್ರಾಕೃಗಳು ಬೇರೆಬೇರೆಯಾಗಿದ್ದ ಕಾರಣ ಆಯಾ ದೇಶಗಳ ರೂಢಿಗನುಸಾರವಾಗಿ ಮಾಗಧಿ, ಶೌರಸೇನಿ, ಮಹಾರಾಷ್ಟ್ರೀ, ಪೈಶಾಚೀ, ಮೊದಲಾದವು ರೂಢಿಗೆ ಬಂದವು. ಈ ಕಾಲದಲ್ಲಿ ಉಚ್ಚವರ್ಗದ ಪುರುಷರ ವ್ಯವಹಾರ ಭಾಷೆ ಸಂಸ್ಕೃತವೇ ಆದಾಗ್ಯೂ ಸ್ತ್ರೀಯರೂ ಕೆಳವರ್ಣದವರೂ ಪ್ರಾಕೃತಗಳನ್ನು ಬಳಸುತ್ತಿದ್ದರು. ಭಗವಾನ್ ಬುದ್ಧನು ತನ್ನ ಮತವನ್ನು ಪಾಳಿಯಲ್ಲಿಯೇ ಬೋದಿಸಿದನು. ಈ ಪ್ರಾಕೃತಗಳು ಸಂಸ್ಕೃತದ ಶಬ್ದಸಂಪತ್ತು ಮತ್ತು ವ್ಯಾಕರಣವನ್ನು ಹೊಂದಿಕ ಸಂಸ್ಕೃತದ ಮೃದ್ವೀಕರಣವೇ ಆಗಿದ್ದವು. ಆಕಾರಣದಿಂದಲೇ ಪುರುಷರು ಸಂಸ್ಕೃತವನ್ನು ಪ್ರಯೋಗಿಸಿದರೆ ಇತರರು ಅದನ್ನು ತಿಳಿಯಬಲ್ಲವರಾಗಿದ್ದರು. ಈ ಸಂಸ್ಕೃತ ವೈಯಾಕರಣರ ಪರಿಶ್ರಮದ ಫಲವಾಗಿ ಪರಿಷ್ಕೃತವಾಗಿ, ನಿರ್ಧರವಾದ ರೂಪವನ್ನು ಪಡೆದು, ಕಾವ್ಯಗಳ ಸಂಸ್ಕೃತವಾಗಿ ಪರಿಣಾಮಗೊಂಡಿತು.

ವೇದವಾಙ್ಮಯದ ವ್ಯಾಪ್ತಿ

ವೇದವಾಙ್ಮಯ ಬಹಳ ವ್ಯಾಪಕವೂ ಮಹತ್ವಪೂರ್ಣವೂ ಆದದು. ಇದರ ಶಾಖೋಪಶಾಖೆಗಳ ಸ್ಥೂಲಪರಿಚಯವನ್ನು ಮೊದಲು ನಾವು ಮಾಡಿಕೊಳ್ಳಬೇಕು.

ವೇದ ಎಂದರೆ ಏನು ಎಂಬುದನ್ನು ಮೊದಲು ತಿಳಿಯೋಣ. ವೇದ ಶಬ್ದದ ಅರ್ಥ ನಿರ್ವಚನವನ್ನು ಪ್ರಾಚೀನರು ಅನೇಕ ರೀತಿಯಾಗಿ ಮಾಡಿದ್ದಾರೆ. ವೇದ ಎಂಬ ಶಬ್ದವು 'ವಿದ್' -ಜ್ಞಾನೇ(ತಿಳಿ) ಎಂಬ ಧಾತುವಿನಿಂದ ಬಂದಿದೆ. ಗೌಣಾರ್ಥದಲ್ಲಿ ಜ್ಞಾನಪ್ರತಿಪಾದಕವಾದ ಗ್ರಂಥಗಳು ಎಂಬ ಅರ್ಥ ಈ ಶಬ್ದಕ್ಕೆ ಬರುತ್ತದೆ. ವೇದದ ಲಕ್ಷಣವನ್ನು ಸರಿಯಾಗಿ ಹೇಳುವುದು ಕಷ್ಟ. ಸಾಯಣಾಚಾರ್ಯರು ತಮ್ಮ ವೇದಭಾಷ್ಯ ಭೂಮಿಕೆಯಲ್ಲಿ ವೇದ ಲಕ್ಷಣವನ್ನು ಸ್ಪಷ್ಟವಾಗಿ ತಿಳಿಸಿವುದು ಕಷ್ಟವೆಂದು ಪೂರ್ವ ಪಕ್ಷ ಮಾಡಿ ಅದಕ್ಕೆ ಉತ್ರರ ರೂಪವಾಗಿ ಮಂತ್ರ ಬ್ರಾಹ್ಮಣಗಳ ಸಮುದಾಯವೇ ವೇದವೆಂಬ ಸಿದ್ದಾಂತಕ್ಕೆ ಬಂದ್ದಿದ್ದಾರೆ. ಶಾಸ್ತ್ರಗಳೆಲ್ಲದರ ಗುರಿಯೂ ಜ್ಞಾನವೇ ಆಗಿರುವಾಗ ವೇದದ ವೈಶಿಷ್ಟ್ಯವೇನು ಎಂಬುದನ್ನು ಮಾಧವಾಚಾರ್ಯರು ವೇದಾರ್ಥ ಪ್ರಕಾಶದಲ್ಲಿ
" ಇಷ್ಟಪ್ರಾಪ್ತ್ಯನಿಷ್ಟಪರಿಹಾರಯೋಃ ಅಲೌಕಿಕಮುಪಾಯಂ ಯೋ ಗ್ರಂಥಃ ವೇದಯತಿ ಸಃ ವೇದಃ | ಅಲೌಕಿಕ ಪದೇನ ಪ್ರತ್ಯಕ್ಷಾನುಮಾನೇ ವ್ಯಾವರ್ತ್ಯತೇ" ಎಂದು ತಿಳಿಸಿದ್ದಾರೆ.

ಸಂಸಾರವೆಂಬ ಜನನ ಮರಣಗಳ ಚಕ್ರಪರಿವರ್ತನೆಯ ಅನಿಷ್ಟವನ್ನು ಪರಿಹರಿಸಿ ಪರಬ್ರಹ್ಮ ಪ್ರಾಪ್ತಿ ಎಂಬ ಇಷ್ಟವನ್ನು ಪಡೆಯಲು ಮಾನವಕೋಟಿ ಅನುಸರಿಸಬೇಕಾದ ವಿಧಾನವನ್ನು ತಿಳಿಸುವುದು ವೇದ. ಆದುದರಿಂದ ವೇದ ಶಬ್ದ ಜ್ಞಾನ ಸಾಮಾನ್ಯಕ್ಕೆ ಅನ್ವಯಿಸದೇ ಬ್ರಹ್ಮ ಜ್ಞಾನಪ್ರತಿಪಾದಕವಾದುದಾಗಿದೆ.
ಭಟ್ಟ ಭಾಸ್ಕರರು "ವಿದ್ಯತೇ ಲಭ್ಯತೇ ಅನೇನ ಇತಿ ವೇದ" ಎಂದು ಹೇಳಿ ಬ್ರಹ್ಮ ಸಾಕ್ಷಾತ್ಕಾರ ಇದರಿಂದ ಉಂಟಾಗುವುದೆಂದಿದ್ದಾರೆ.
"ವಿಂದಂತಿ ಧರ್ಮಾಧಿಕಂ ಅನೇನ ಇತಿ ವೇದಃ" ಧರ್ಮವೇ ಮೊದಲಾದುವನ್ನು ಇದರ ಮೂಲಕ ಅರಿಯುವುದರಿಂದ ಇದು ವೇದ ಎಂದು ಸರ್ವಾನಂದರೂ
"ವಿಂದ್ಯಂತ್ಯನೇನ ಧರ್ಮಂ ವೇದಃ" ಎಂದೂ ಹೇಮಚಂದ್ರರೂ
"ವಿದಂತ್ಯನನ್ಯ ಪ್ರಮಾಣವೇದ್ಯಂ ಧರ್ಮಲಕ್ಷಣಂ ಅಸ್ಮಾತ್ ಇತಿ ವೇದಃ" ಎಂದು ಮೇಧಾತಿಥಿಗಳೂ
"ನಿಶ್ರೇಯಸಕರಾಣಿ ಕರ್ಮಾಣಿ ಆವೇದಯಂತೀತಿ ವೇದಾಃ ಎಂದು ಕಪರ್ದ ಸ್ವಾಮಿಗಳೂ ವೇದ ಶಬ್ದಾರ್ಥವನ್ನು ವಿವರಿಸಿದ್ದಾರೆ.
ದಯಾನಂದ ಸರಸ್ವತಿಯವರೂ " ವಿದಂತಿ, ಜಾನಂತಿ, ವಿದ್ಯಂತೇ, ಭವಂತಿ, ವಿಂದಂತಿ ಅಥವಾ ವಿಂದಂತೇ, ಲಭಂತೇ, ವಿಂದಂತಿ ವಿಚಾರಯಂತಿ ಸರ್ವೇ ಮನುಷ್ಯಾಃ ಸರ್ವಾಃ ಸತ್ಯ ವಿದ್ಯಾಃ ಯೈಃ ಯೇಷು ವಾ ತಥಾ ವಿದ್ವಾಂಸಶ್ಚ ಭವಂತಿ ತೇ ವೇದಾಃ " ಎಲ್ಲಾ ಸತ್ಯ ವಿದ್ಯೆಗಳನ್ನೂ ಯಾವುದರಿಂದ ಪಡೆದುಕೊಳ್ಳುವರೋ ಅದು ವೇದವೆಂದು ವೇದಾರ್ಥ ನಿರೂಪಣೆಮಾಡಿದ್ದಾರೆ.
" ವೇದದಲ್ಲಿ ಗೂಢವಾಗಿ ಬ್ರಹ್ಮಜ್ಞಾನ ಅಡಗಿದೆ" ಎಂಬುದನ್ನು ಸೂಚಿಸಲಾಗಿದೆ.
ಈ ವೇದಗಳು ಶ್ರವಣದ ಮೂಲಕ ಲಭ್ಯವಾದುದರಿಂದ ಶ್ರುತಿಗಳು ಎಂದು ಪ್ರಸಿದ್ಧವಾಗಿವೆ. ಇವುಗಳು ಸ್ವಯಂ ಸಿದ್ಧವಾದುವು. ನಿತ್ಯವಾದುವು, ಅಪೌರುಷೇಯವಾದುವು ಎಂಬುದು ನಮ್ಮ ಸಂಪ್ರದಾಯ.

ಋಷಿಗಳು ತಮ್ಮ ತಮ್ಮ ತಪಶ್ಯಕ್ತಿಯಿಂದ ಇದನ್ನು ತತ್ತದಾನುಪೂರ್ವೀ ವಿಶಿಷ್ಟವಾಗಿಯೇ ಸಾಕ್ಷಾತ್ಕರಿಸಿಕೊಂಡರೆಂದು ಹೇಳಲಾಗಿದೆ.
" ಯುಗಾಂತೇಂತರ್ಹಿತಾನ್ ವೇದಾನ್ ಸೇತಿಹಾಸಾನ್ ಮಹರ್ಷಯಃ |
ಲೇಭಿರೇ ತಪಸಾ ಪೂರ್ವಂ ಅನುಜ್ಞಾತಾ ಸ್ವಯಂಭುವಾ || (ಮಹಾಭಾರತ) "

ಆದುರರಿಂದಲೇ ಅವರುಗಳನ್ನು ಮಂತ್ರ ದ್ರಷ್ಟಾರರೆಂದು ಕರೆದಿದೆ. ಸಾಕ್ಷಾತ್ಕೃತ ಋಷಿಗಳಿಂದ ಶಿಷ್ಯೋಪಾಧ್ಯಾಯಿಕವಾದ ರೀತಿಯಲ್ಲಿ ಇತರರು ಇವುಗಳನ್ನು ಕೇಳಿ ಪಡೆದುಕೊಂಡು ಶ್ರುತರ್ಷಿಗಳಾದರು(ನಿರುಕ್ತ). ಮುಂದಿನ ಜನಾಂಗ ಅಷ್ಟು ಶಕ್ತಿ ಸಾಮರ್ಥಗಳನ್ನು ಹೊಂದಿರದ ಕಾರಣ ಅವರ ಉಪಯೋಗಕ್ಕಾಗಿ ಇವುಗಳನ್ನು ಒಟ್ಟುಗೋಡಿಸಿ ವಿಭಜಿಸಲಾಯಿತು. ವಾಗ್ವ್ಯವಹಾರದಿಂದಲೇ ಜನಾಂಗದಿಂದ ಜನಾಂಗಕ್ಕೆ ಇವು ಧಾರೆ ಎರೆಯಲಾದವು.

ಮೊದಲು ವೇದ ಒಂದೇ ಆಗಿತ್ತೆಂದೂ ಅನಂತರ ಯಾಗದಲ್ಲಿ ಹೋತೃ, ಅದ್ವರ್ಯು, ಉದ್ಗಾತೃ ಮತ್ತು ಬ್ರಹ್ಮ ಎಂಬ ಋತ್ವಿಕ್ಕುಗಳು ಉಪಯೋಗಿಸುವ ಕ್ರಮಕ್ಕನುಗುಣವಾಗಿ ನಾಲ್ಕಾಗಿ ಕವಲೊಡೆಯಿತೆಂದೂ ಹೇಳಲಾಗಿದೆ. ಒಂದಾಗಿದ್ದ ವೇದರಾಶಿಯನ್ನು ನಾಲ್ಕಾಗಿ ವಿಂಗಡಿಸಿದವರು ವೇದವ್ಯಾಸರೆಂದೂ ನಮ್ಮ ಸಂಪ್ರದಾಯಕ್ಕನುಸಾರವಾಗಿ ತಿಳಿಯುತ್ತೇವೆ. ಋಗ್ಯಜುಸ್ಸಾಮಾಥರ್ವವೇದಗಳಲ್ಲಿ ಋಗ್ವೇದಸಂಹಿತೆ ಬಹಳ ಪ್ರಾಚೀನವಾದುದೆಂದು ಆಧುನಿಕ ವಿಮರ್ಶಕರ ಆಬಿಪ್ರಾಯ, ಋಕ್ಸಂಹಿತೆಗೆ ಹೆಚ್ಚಿನ ಪ್ರಾಧಾನ್ಯವನ್ನು ಬಹಳ ಹಿಂದಿನಿಂದಲೂ ನಮ್ಮವರೂ ಕೊಟ್ಟಿದ್ದಾರೆ. ವೇದಗಳನ್ನು ಹೇಳುವಾಗಲ್ಲೆಲ್ಲಾ ಮೊದಲು ಋಗ್ವೇದದ ಉಲ್ಲೇಖ ಬಂದಿದೆ. ಯಜುರ್ವೇದ ಸಾವವೇದಗಳು ತತ್ಪರಿಚರಣಾವಿತರೌ ವೇದೌ ಎಂದು ಹೇಳಿರುವಂತೆ ಕೇವಲ ಯಾಗಗಳಿಗೆ ಸಂಬಂದಿಸಿದ ಮಂತ್ರಗಳನ್ನು ಮಾತ್ರ ಒಳಗೊಂಡಿವೆ. ಆದರೆ ಋಗ್ವೇದ ಸಂಹಿತೆಯಲ್ಲಿ ಯಾಗೋಪಯುಕ್ತವಾದ ಮಂತ್ರರಾಶಿಯೊಡನೆ ಇತರ ವಿಷಯಗಳನ್ನು ಪ್ರತಿಪಾದಿಸುವ ಮಂತ್ರಗಳು ಹೇರಳವಾಗಿವೆ. ಆದುದರಿಂದ ಋಗ್ವೇದ ಸಂಹಿತೆಯನ್ನು ಮೂಲಾಧಾರವಾಗಿಟ್ಟು ಕೊಂಡು ಯಾಗದಲ್ಲಿ ಅಧ್ವರ್ಯು ಬಳಸಬೇಕಾದ ಮಂತ್ರಗಳನ್ನೆಲ್ಲಾ ಕೂಡಿಸಿ ಯಜುರ್ವೇದವನ್ನೂ, ಉದ್ಗಾತೃ ಬಳಸಬೇಕಾದ ಮಂತ್ರಗಳನ್ನೆಲ್ಲಾ ಬೇರೆಯಾಗಿ ಕೂಡಿಸಿ ಸಾಮವೇದವನ್ನೂ ಸಂಗ್ರಹಿಸಲಾಯಿತೆಂದು ವಿಮರ್ಶಕರು ಅಭಿಪ್ರಾಯಪಡುತ್ತಾರೆ.

ಅಥರ್ವ ವೇದವು ಯಾಗಕ್ಕೆ ನೇರವಾಗಿ ಸಂಭಂದಿಸಿಲ್ಲದ ಕಾರಣ ಅದು ಇತರ ವೇದಗಳಿಹಗಿಂತ ಈಚಿನದೆಂದು ಅಭಿಪ್ರಾಯಪಡಲಾಗಿದೆ. ನಮ್ಮ ಪ್ರಾಚೀನರ ಅಭಿಪ್ರಾಯದಲ್ಲಿ ಈ ನಾಲ್ಕು ವೇದಗಳಿಗೂ ಸಮಾನವಾದ ಸ್ಥಾನವಿದೆ. ಇವೆಲ್ಲವನ್ನೂ ಅವರು ಅಪೌರುಷೇಯ, ನಿತ್ಯ ಮತ್ತು ಸ್ವತಃಸಿದ್ದವೆಂದು ಪ್ರತಿಪಾದಿಸಿದ್ದಾರೆ. ಋಗ್ವೇದ ಸಂಹಿತೆಯಲ್ಲಿ ಹೋತಾ, ಉದ್ಗಾತಾ, ಬ್ರಹ್ಮಾ ಮತ್ತು ಅಧ್ವರ್ಯು ಇವರುಗಳು ಕೆಲಸವನ್ನು ಸೂಚಿಸಲಾಗಿದೆ. ಇಲ್ಲಿಯೂ ಅಥರ್ವವೇದದ ಉಲ್ಲೇಖವಿಲ್ಲದಿರುವುದು ಗಮನಾರ್ಹವಾಗಿದೆ. ಈ ಋತ್ವಿಕ್ಕುಗಳು ಬಳಸುತ್ತಿದ್ದ ವೇದಗಳನ್ನು ಆಪಸ್ತಂಬರು -
" ಋಗ್ವೇದೇನ ಹೋತಾ ಕರೋತಿ | ಯಜುರ್ವೇದೇನಾ ಅಧ್ವರ್ಯುಃ |
ಸಾಮವೇದೇನೋದ್ಗಾತಾ | ಸರ್ವೈಃರ್ಬ್ರಹ್ಮಾ || " ಎಂದು ಹೇಳಿದ್ದಾರೆ.

ಐತರೇಯ ಬ್ರಾಹ್ಮಣದಲ್ಲಿ ಯದೃಚೈವ ಹೋತ್ರಂ ಕ್ರಿಯತೇ, ಯಜುಷಾಧ್ವರ್ಯವಂ, ಸಾಮ್ನೋದ್ಗೀಥಂ ವ್ಯಾರಬ್ಧಾ ತ್ರಯೀ ವಿದ್ಯಾ ಭವತೀ | ಅಥ ಕೇನ ಬ್ರಹ್ಮ ತ್ವಂ ಕ್ರಿಯತೇ ಇತಿ ತ್ರಯಾ ವಿದ್ಯಯಾ ಇತಿ ಬ್ರೂಯಾತ್ | ಎಂದೇ ಉಲ್ಲೇಖವಿದೆ. (ಐ.ಬ್ರಾ ೫-೩೩)

ಸ ಚ ಬ್ರಹ್ಮಾ ವೇದತ್ರಯೋಕ್ತಸರ್ವಕರ್ಮಾಭಿಜ್ಞಃ ಎಂದು ಸಾಯಣರು ತಮ್ಮ ಋಗ್ವೇದ ಭಾಷ್ಯ ಭೂಮಿಕೆಯಲ್ಲಿ ಹೇಳುತ್ತಾರೆ. ಇವುಗಳೆಲ್ಲದರಿಂದ ಅಥರ್ವವೇದವು ನೇರವಾಗಿ ಯಾಗಕ್ಕೆ ಸಂಬಂಧಿಸಿರಲಿಲ್ಲವೆಂಬುದು ಸಿದ್ಧವಾಗುತ್ತದೆ. ಆದುದರಿಂದಲೇ ಈ ವೇದ ಇತರ ವೇದಗಳಿಗಿಂತ ಈಚಿನ ಕಾಲಕ್ಕೆ ಸೇರುದುದೆಂದು ಆಧುನಿಕ ವಿಮರ್ಶಕರು ಅಭಿಪ್ರಾಯಪಡುತ್ತಾರೆ.

ಹೀಗೆ ಅಪಾರವಾದ ವೇದವಾಙ್ಮಯವನ್ನು ಸಂಹಿತೆಗಳು, ಬ್ರಾಹ್ಮಣಗಳು, ಅರಣ್ಯಕಗಳು, ಉಪನಿಷತ್ತುಗಳು ಎಂದು ನಾಲ್ಕು ಸ್ಕಂಧಗಳಾಗಿ ವಿಭಾಗಿಸಿದ್ದಾರೆ. ಒಂದೊಂದು ವೇದಕ್ಕೂ ತನ್ನದೇ ಆದ ಸಂಹಿತೆಗಳು, ಬ್ರಾಹ್ಮಣ ಹಾಗೂ ಅರಣ್ಯಕೋಪನಿಷತ್ತುಗಳಿವೆ. ಕೆಳಗೆ ಸಂಗ್ರಹವಾಗಿ ನಿರೂಪಿಸಲಾಗಿದೆ.

ಸಂಹಿತೆಗಳು

ಬೇರೆ ಬೇರೆ ಋಷಿಗಳಿಂದ ದೃಷ್ಟವಾದ ಮಂತ್ರಗಳನ್ನು ಒಂದೇ ಕಡೆ ಸೇರಿಸಿರುವುದು. ಸಂಹಿತೆ ಎನ್ನಿಸಿಕೊಳ್ಳುವುದು. (ನಿರುಕ್ತ ೭-೧೨ ರಲ್ಲಿ ಇವುಗಳ ನಿರ್ವಚನವನ್ನು ನೋಡಬಹುದು). ಋಗ್ವೇದ ಸಂಹಿತೆಯಲ್ಲಿ ೧೦೨೮ ಸೂಕ್ತಗಳಿವೆ. ೧೦೫೫೨ ಮಂತ್ರಗಳವೆ. ಈ ಮಂತ್ರಗಳೆಲ್ಲಾ ಛಂದೋಬದ್ಧವಾಗಿ ತ್ರಿಷ್ಟುಪ್, ಜಗತೀ, ಅನುಷ್ಟುಪ್, ಗಾಯತ್ರಿ ಮೊದಲಾದ ಛಂದಸ್ಸುಗಳಲ್ಲಿವೆ.

ಯಜುರ್ವೇದ ಸಂಹಿತೆ ನಿಯತವಾಗಿ ಛಂದೋಬದ್ಧವಾಗಿಲ್ಲ(ಅನಿಯತಾಕ್ಷರಾವಸಾನೋ ಯಜುಃ, ಗದ್ಯಾತ್ಮಕೋ ಯಜುಃ, ಎಂದು ಇದನ್ನು ಹೇಳಲಾಗಿದೆ). ಈ ವೇದ ಶುಕ್ಲಯಜುರ್ವೇದ ಮತ್ತು ಕೃಷ್ಣ ಯಜುರ್ವೇದ ಎಂದು ಎರಡು ಬಗೆಯಾಗಿದೆ. ಶುಕ್ಲ ಯಜುಸ್ಸಂಹಿತೆ ಕಾಣ್ವ ಮತ್ತು ಮಾಧ್ಯಂದಿನ ಎಂದು ಎರಡು ಪಾಠಗಳಲ್ಲಿ ಉಪಲಭ್ಧವಾಗಿದೆ. ಶುಕ್ಲಯಜುರ್ವೇದ ಸಂಹಿತೆ ಪೂರ್ಣವಾಗಿ ಛಂದೋಬದ್ಧವಾಗಿದೆ. ಇದರಲ್ಲಿ ಇದರಲ್ಲಿ ೪೦ ಅಧ್ಯಾಯಗಳೂ ೩೦೩ ಅನುವಾಕಗಳೂ ೧೯೦೫ ಮಂತ್ರಗಳೂ ಇವೆ. ಕೃಷ್ಣ ಯಜುರ್ವೇದ ಸಂಹಿತೆ ಗದ್ಯ ಪದ್ಯ ಮಿಶ್ರಿತವಾಗಿದೆ. ಇದು ಕಠ, ಕಪಿಸ್ಥಲ, ಕಾಲಾಪ ಅಥವಾ ಮೈತ್ರಾಯಣೀಯ ಮತ್ತು ತೈತ್ರೀಯ ಎಂಬ ಶಾಖೆಗಳಲ್ಲಿ ಉಪಲಬ್ಘವಾಗಿದೆ. ಮೈತ್ರಾಯಣೀಯ ಸಂಹಿತಯಲ್ಲಿ ನಾಲ್ಕು ಕಾಂಡಗಳೂ ೫೪ ಪ್ರಪಾಠಕಗಳೂ, ಇದ್ದೂ ಕಾಠಕ ಸಂಹಿತೆಗಿಂತ ಸ್ವಲ್ಪ ಭಿನ್ನವಾಗಿದೆ. ತೈತ್ತರೀಯ ಶಾಖೆಯ ಸಂಹಿತೆಯಲ್ಲಿ ೭ ಅಷ್ಟಕಗಳೂ (ಅಥವಾ ಕಾಂಡ) ೪ ಪ್ರಪಾಠಕಗಳೂ ಆಥವಾ ಅಧ್ಯಾಯಗಳೂ ಇವೆ. ಈ ಒಂದೊಂದು ಅಧ್ಯಾಯದಲ್ಲಿಯೂ ಅನೇಕಾನೇಕ ಅನುವಾಕಗಳಿವೆ. ಈ ಅನುವಾಕಗಳ ಕೊನೆಯಲ್ಲಿ ಆಯಾ ಅನುವಾಕಗಳ ಪದಸಂಖ್ಯೆಯನ್ನು ಕೊಟ್ಟಿರುವುದು ಇದರ ವೈಶಿಷ್ಟ್ಯ. ಗದ್ಯ ಗಾಥೆಗಳು ಇದರಲ್ಲಿ ಹೆಚ್ಚಾಗಿರುವುದರಿಂದ ಇದಕ್ಕೆ ಅನುಕ್ರಮಣಿಗೆಗಳನ್ನು ರಚಿಸಿಲ್ಲ. ಈ ಸಂಹಿತೆಯಲ್ಲಿ ಒಟ್ಟು ೬೫೧ ಅವುವಾಕಗಳು ೧೧೦೨೯೬ ಪದಗಳೂ ಇವೆ. ಅಧ್ವರ್ಯುವಿಗೆ ಉಪಯುಕ್ತವಾದ ಮಂತ್ರಗಳನ್ನೆಲ್ಲಾ ಈ ಸಂಹಿತೆಯಲ್ಲಿ ಸೇರೆಸಲಾಗಿದೆ. ಕೃಷ್ಣ ಯಜುರ್ವೇದದಲ್ಲಿ ಮಂತ್ರಗಳನ್ನೂ ಅವುಗಳ ವಿನಿಯೋಗವನ್ನೂ ತಿಳಿಸುವ ಬ್ರಾಹ್ಮಣಗಳನ್ನೂ ಜೊತೆಜೊತೆಯಾಗಿ ಕೊಡಲಾಗಿದೆ.

ಸಾಮವೇದ ಉದ್ಗಾತೃವೇದ, ಸೋಮಯಾಗದಲ್ಲಿ ಸೋಮಾಭಿಷವ ಮಾಡುವಾಗ ಸಾಮಗಳನ್ನು ಹಾಡುತ್ತಿದ್ದರು. ಈ ಸಾಮಗಳನ್ನು ಉದ್ಗಾತೃ ಮಧುರವಾಗಿ ಹಾಡುತ್ತಿದ್ದನು. ಸಾಮವೇದ ಸಂಹಿತೆಯಲ್ಲಿ ಒಟ್ಟು ೧೫೪೯ ಮಂತ್ರಗಳಿವೆ. ಇವುಗಳನ್ನು ಅರ್ಚಿಕಾ ಮತ್ತು ಉತ್ತರ ಅರ್ಚಿಕಾ ಎಂದು ಎರಡು ಭಾಗ ಮಾಡಿದ್ದಾರೆ. ಅರ್ಚಿಕೆಯಲ್ಲಿ ೫೮೫ ಮಂತ್ರಗಳೂ ಉತ್ತರ ಅರ್ಚಿಕೆಯಲ್ಲಿ ೯೬೪ ಮಂತ್ರಗಳೂ ಇವೆ. ಇವುಗಳಲ್ಲಿ ೭೫ ಮಂತ್ರಗಳನ್ನು ಬಿಟ್ಟರೆ ಉಳಿದ ೧೪೭೪ ಮಂತ್ರಗಳೂ ಋಗ್ವೇದದೆಂದಲೇ ಆರಿಸಿಕೊಂಡವಾಗಿವೆ. ಈ ಸಾಮಗಾನ ಸಂಗೀತ ಶಾಸ್ತ್ರದ ಮೂಲವೆಂದು ಹೇಳಬಹುದು.

ಅಥರ್ವಸಂಹಿತೆ ಇತರ ಸಂಹಿತೆಗಳಿಗಿಂತ ವಿಲಕ್ಷಣವಾಗಿದೆ. ಇಲ್ಲಿನ ಅನೇಕ ಮಂತ್ರಗಳು ಋಗ್ವೇದ ಮಂತ್ರಗಳೇ ಆಗಿವೆ. ಇನ್ನೂ ಕೆಲವು ಋಗ್ವೇದ ಮಂತ್ರಗಳಿಗಿಂತ ಪ್ರಾಚೀನವಾದವೂ ಇರಬಹುದು. ಈ ಸಂಹಿತೆಯಲ್ಲಿ ಅಭಿಚಾರಪ್ರಯುಕ್ತವಾಧ ಮಂತ್ರಗಳೇ ಹೆಚ್ಚಾಗಿವೆ. ಯಾಜ್ಞಿಕವಾದ ಸೂಕ್ತಗಳೂ ಹಲವಾರಿವೆ. ಈ ಸಂಹಿತೆಗೆ ಅಥರ್ವಾಂಗೀರಸ, ಭೃಗ್ವಂಗೀರಸ ಎಂಬ ಹೆಸರುಗಳೂ ರೂಢಿಯಲ್ಲಿವೆ. ಈ ಸಂಹಿತೆಯ ಶೌನಕೀಯ ಶಾಖೆಯಲ್ಲಿ ೨೦ ಕಾಂಡಗಳೂ ೭೩೧ ಸೂಕ್ತಗಳೂ ೫೦೩೮ ಮಂತ್ರಗಳೂ ಇವೆ.

ಬ್ರಾಹ್ಮಣಗಳು

ಸಂಹಿತೆಯ ಮಂತ್ರಗಳನ್ನು ಯಜ್ಞಗಳಲ್ಲಿ ಉಪಯೋಗಿಸುವ ವಿಧಾನವನ್ನು ಬ್ರಾಹ್ಮಣ ಗ್ರಂಥಗಳುತ ತಿಳಿಸುವುವು.
( "ವಿಧಾಯಕಂ ವಾಕ್ಯಂ ಬ್ರಾಹ್ಮಣಂ" ಮಂತ್ರವಲ್ಲದ್ದು ಬ್ರಾಹ್ಮಣ ಎಂದು ಜೈಮಿನಿಗಳು ಪೂರ್ವಮೀಮಾಂಸಾ ಸೂತ್ರದಲ್ಲಿ "ಶೇಷೇ ಬ್ರಾಹ್ಮಣ ಶಬ್ದಃ (ಜೈ.ಸೂ ೨-೧-೩೩) ಎಂದು ಹೇಳಿದ್ದಾರೆ.
(ಮಂತ್ರ ವ್ಯತಿರಿಕ್ತಭಾಗೇ ತು ಬ್ರಾಹ್ಮಣಶಬ್ದಸ್ತೈರ್ವ್ಯವಹೃತಃ - ಸಾಯಣ ಭಾಷ್ಯ ಭೂಮಿಕೆ)
ಪ್ರತಿಯೊಂದು ವೇದದ ಶಾಖೆಗೂ ಸಂಬಂಧಿಸಿದಂತೆ ಬ್ರಾಹ್ಮಣ ಗ್ರಂಥಗಳಿವೆ. ಋಗ್ವೇದಕ್ಕೆ ಸಂಬಂಧಪಟ್ಟಂತೆ ಐತರೇಯ ಬ್ರಾಹ್ಮಣ, ಕೌಷೀತಕೀ ಬ್ರಾಹ್ಮಣ ಎಂದು ಎರಡು ಬ್ರಾಹ್ಮಣಗಳಿವೆ. ಐತರೇಯ ಬ್ರಾಹ್ಮಣದಲ್ಲಿ ೪೦ ಅಧ್ಯಾಯಗಳಿವೆ. ಅಗ್ನಿಷ್ಟೋಮ, ಉಕ್ಥ್ಯ, ಷೋಡಶ, ಅತಿರಾತ್ರ, ದರ್ಶ- ಪೌರ್ಣಮಾಸ ಮೊದಲಾದ ಯಾಗಗಳ ವಿಚಾರ ಇಲ್ಲಿದೆ. ಕೌಷೀತಕೀ ಬ್ರಾಹ್ಮಣದಲ್ಲಿ ೩೦ ಅಧ್ಯಾಯಗಳಿವೆ. ದರ್ಶಪೌರ್ಣಮಾಸಾದಿ ಯಾಗಗಳ ಮತ್ತು ಸೋಮಯಾಗದ ವಿಧಾನವನ್ನೂ ಇಲ್ಲಿ ಹೇಳಿದೆ.

ಸಾಮವೇದಕ್ಕೆ ತಾಂಡ್ಯ ಬ್ರಾಹ್ಮಣ, ಷಡ್ವಿಂಶ ಬ್ರಾಹ್ಮಣ, ಜೈಮಿನೀಯ ಅಥವಾ ತಲವಕಾರ ಬ್ರಾಹ್ಮಣ, ಮಂತ್ರ ಬ್ರಾಹ್ಮಣ, ದೈವತ ಬ್ರಾಹ್ಮಣ, ಸಾಮವಿಧಾನ ಬ್ರಾಹ್ಮಣ, ಸಂಹಿತೋಪನಿಷದ್ಬ್ರಾಹ್ಮಣ, ಆರ್ಷಬ್ರಾಹ್ಮಣ, ಮತ್ತು ವಂಶ ಬ್ರಾಹ್ಮಣ ಎಂಬ ಬ್ರಾಹ್ಮಣ ಗ್ರಂಥಗಳು ಸೇರಿವೆ. ತಾಂಡ್ಯ ಬ್ರಾಹ್ಮಣದಲ್ಲಿ ೨೫ ಅಧ್ಯಾಯಗಳಿವೆ. ಷಡ್ವಿಂಶ ಬ್ರಾಹ್ಮಣ ಇದರ ಮಂದಿನ ಭಾಗವಾಗಿದೆ.

ಯಜುರ್ವೇದ ಬ್ರಾಹ್ಮಣಗಳಲ್ಲಿ ಶುಕ್ಲಯಜುರ್ವೇದಕ್ಕೆ ಸೇರಿದ ಶತಪಥ ಬ್ರಾಹ್ಮಣ ವೈದಿಕ ಸಾಹಿತ್ಯದಲ್ಲಿ ಪ್ರಧಾನವಾದುದಾಗಿದೆ. ಇದರಲ್ಲಿ ೧೪ ಕಾಂಡಗಳೂ ೧೦೦ ಅಧ್ಯಾಯಗಳೂ ಇವೆ. ಕೃಷ್ಣ ಯಜುರ್ವೇದಕ್ಕೆ ತೈತ್ತರೀಯ ಬ್ರಾಹ್ಮಣ ಸೇರಿದೆ. ಕಠ ಶಾಖೆ ಮತ್ತು ಮೈತ್ರಾಯಣೀಯ ಶಾಕೆಗೆ ಬೇರೆ ಬ್ರಾಹ್ಮಣ ವಿಭಾಗಗಳಿಲ್ಲ ಸಂಹಿತೆಗೆ ಸೇರಿದ ಗದ್ಯ ಭಾಗಗಳೇ ಈ ಶಾಖೆಗಳ ಬ್ರಾಹ್ಮಣಗಳಾಗಿವೆ.

ಅಥರ್ವವೇದಕ್ಕೆ ಸೇರಿರುವ ಬ್ರಾಹ್ಮಣ ಗೋಪಥಬ್ರಾಹ್ಮಣ, ಈ ಬ್ರಾಹ್ಮಣ ಸಂಹಿತೆಯ ಮಂತ್ರಗಳ ವಿನಿಯೋಗವನ್ನು ಕ್ರಮವಾಗಿ ತಿಳಿಸುವ ಬದಲು ಸೂತ್ರಕ್ಕನುಗುಣವಾಗಿರುವುದು ಇದರ ವೈಶಿಷ್ಟ್ಯ.

         ಹೀಗೆ ಈ ಬ್ರಾಹ್ಮಣ ಗ್ರಂಥಗಳು ಸಂಹಿತೆಗಳಿಗಿಂತ ವಿಲಕ್ಷಣವಾದ ಸ್ವರೂಪವನ್ನು ಪ್ರತಿಬಿಂಬಿಸುತ್ತವೆ. ಭಾರತದ ಅತ್ಯಂತ ಪ್ರಾಚೀನವಾದ ಗದ್ಯಸೈಲಿಯ ಪರಿಚಯ ಇದರಿಂದಾಗುತ್ತದೆ, ಸಂಹಿತೆಗಳಲ್ಲಿನ ಮಂತ್ರಗಳ ವಿನಿಯೋಗವನ್ನು ತಿಳಿಸುವ ಸಂದರ್ಭದಲ್ಲಿ ಇವು ಯಾಗಾದಿಗಳನ್ನು ವಿವರಿಸುದಲ್ಲದೆ ಪ್ರಾಸಂಗಿಕವಾಗಿ ಕೆಲವು ಶಬ್ದಗಳ ನಿರ್ವಚನವನ್ನೂ ಮಾಡಿವೆ. ಅವುಗಳ ಗೂಢಾರ್ಥವಿವರಣೆ ಮಾಡಿ ಯಜ್ಞಗಳಲ್ಲಿ ಅವುಗಳನ್ನು ಪ್ರಯೋಗಿಸಿದ  ಆಖ್ಯಾನಗಳನ್ನು ಹೇಳುತ್ತದೆ. ನಿರುಕ್ತಕಾರ ಯಾಸ್ಕರು ಅನೇಕ ಕಡೆ ನಿರ್ವಚನ ಮಾಡುವಾಗ 'ಇತಿ ಹ ಬ್ರಾಹ್ಮಣಮ್' ಎಂದು ಬ್ರಾಹ್ಮಣ ವಾಕ್ಯಗಳನ್ನು ಉದ್ಧರಿಸಿದ್ದಾರೆ.

     ಬ್ರಾಹ್ಮಣ ಸ್ಕಂಧವಾದ ಮೆಲೆ ಬರುವುದು ಆರಣ್ಯಕೋಪನಿಷತ್ತುಗಳ ಸ್ಕಂಧ. ಅರಣ್ಯದಲ್ಲಿ ಅಧ್ಯಯನ ಮಾಡಬೇಕಾದ ಅಂಶಗಳನ್ನು ಆರಣ್ಯಕಗಳು ವಿವೇಚಿಸುವುವು. ವಾನಪ್ರಸ್ಥರು ಅರಣ್ಯದಲ್ಲಿ ಅನುಸರಿಸಬೇಕಾದ ಗೂಢಾರ್ಥಚಿಂತನೆಗಳ ವಿಚಾರ ಇಲ್ಲಿದೆ. ಇವು ಕೇವಲ ಕರ್ಮವನ್ನು ವಿವೇಚಿಸುವ ಬ್ರಾಹ್ಮಣಗಳಿಗಿಂತ ಬೇರೆಯಾಗಿವೆ. ಈ ಅರಣ್ಯಕಗಳು ಒಂದೊಂದು ಬ್ರಾಹ್ಮಣಕ್ಕೂ ಸೇರಿದಂತೆ ಬೇರೆ ಬೇರೆಯಾಗಿವೆ.

        ಈ ಅರಣ್ಯಕಗಳ ಕೊನೆಯ ಭಾಗಗಳೇ ಉಪನಿಷತ್ತುಗಳು, ವೇದಾಂತಗಳೆಂಬ ಹೆಸರು ಇವಕ್ಕಿದೆ. ಇಂದು ಇವೆ ಹೆಚ್ಚಾಗಿ ಪ್ರಚಾರದಲ್ಲಿರುತ್ತಿವೆ. ವೇದಧರ್ಮದ ಅತ್ಯನ್ನತವಾದ ಆದರ್ಶ ಮತ್ತು ಸಿದ್ಧಿಗಳನ್ನು ಪ್ರತಿಪಾದಿಸಿ ಇವು ಮೋಕ್ಷ ಶಾಸ್ತ್ರಗಳೆನಿಸಿವೆ.  ಪ್ರರಬ್ರಹ್ಮ ವಸ್ತುವಿನ ಸ್ವರೂಪಭಾವವನ್ನು ಇರೂಪಿಸುವ ಈ ಭಾಗಗಳು ವೇದಗಳ ಸಾರಸರ್ವಸ್ವವಾಗಿವೆ. ಎಲ್ಲ  ಶಾಸ್ತ್ರಗಳಿಗೂ ಮೂರ್ಧನ್ಯ ಪ್ರಾಯವಾಗಿವೆ. ಈ ಉಪನಿಷತ್ತುಗಳ ವಿಚಾರಧಾರೆ ಉಳಿದ ಭಾಗಗಳಿಗಿಂತ ಭಿನ್ನವಾಗಿ ಆತ್ಮಜ್ಞಾನ ಮತ್ತು ವಿಶ್ವಾತ್ಮಜ್ಞಾನವನ್ನು ಪ್ರತಿಪಾದಿಸಿ ಭಾರತದ ಸಂಸ್ಲೃತಿಯ ಅತ್ಯುನ್ನತ ಮಟ್ಟವನ್ನು ಪ್ರತಿಬಿಂಬಿಸುತ್ತವೆ. ಉಪನಿಷತ್ತುಗಳು ಬ್ರಾಹ್ಮಣ ಗ್ರಂಥಗಳ ಕೊನೆಯ ಭಾಗಗಳಾದರೂ ಕರ್ಮವಿಚಾರವನ್ನು ಬಿಟ್ಟು ಜ್ಞಾನಪ್ರತಿಪಾದಕಗಳಾಗಿವೆ. ಗುರುವಿನ ಸಮೀಪದಲ್ಲಿ ಕುಳಿತು ಭಕ್ತಿಯಿಂದ ಇವನ್ನು  ಕಲಿಯಬೇಕಾದುದರಿಂದ ಇವು ಉಪನಿಷತ್ತುಗಳೆಂಬ ಹೆಸರನ್ನು ಪಡೆದವು. ಪ್ರತಿ ವೇದ ಶಾಖೆಗೂ ಬೇರೆಬೇರೆ ಉಪನಿಷತ್ತುಗಳೆವೆ. ಋಗ್ವೆದಕ್ಕೆ ಐತರೆಯ ಮತ್ತು ಕೌಷೀತಕೀ ಉಪನಿಷತ್ತುಗಳು ಸೇರಿವೆ. ಸಾಮವೇದಲಕ್ಕೆ ಛಾಂದೋಗ್ಯ ಮತ್ತು ಕೇನೋಪನಿಷತ್ತು ಕೃಷ್ಣಯಜುರ್ವೇದಕ್ಕೆ ಕಠ, ಶ್ವೇತಾಶ್ವತರ, ಮೈತ್ರಾಯಣೀಯ, ತೈತ್ತರೀಯ ಮತ್ತು ಮಹಾನಾರಾಯಣೀಯ ಉಪನಿಷತ್ತುಗಳೂ, ಶುಕ್ಲಯುಜುರ್ವೇದಕ್ಕೆ ಬೃಹದಾರಣ್ಯಕ ಮತ್ತು ಈಶಾವಾಸ್ಯೋಪನಿಷತ್ತುಗಳೂ,ಅಥರ್ವವೇದಕ್ಕೆ ಮುಂಡಕ, ಪ್ರಶ್ನ ಮತ್ತು ಮಾಡೂಕ್ಯೋಪನಿಷತ್ತುಗಳೂ ಸೇರಿವೆ.

          ಈ ಉಪನಿಷತ್ತುಗಳ ವಿಚಾರಧಾರೆ ಅನುಪಮವಾಗಿದೆ. ಈ ಪ್ರಪಂಚವೆಂಬುದೆನು ? ನಾವಾರು ? ಮರಣಾನಂತರ ನಮ್ಮ ಸ್ಥಿತಿ ಏನು ? ಇವೆ ಮೊದಲಾದ ಪ್ರಶ್ನೆಗಳಿಗೆ ನಿರ್ಧಿಷ್ಟವಾದ ಉತ್ತರಗಳು ಇಲ್ಲಿವೆ. ಹಿಂದೂದರ್ಶನಗಳಲ್ಲಿ ಮುಖ್ಯವಾದ ಸಾಂಖ್ಯ, ಯೋಗ, ನ್ಯಾಯ, ವೈಷೇಷಿಕ, ಮತ್ತು ವೇದಾಂತ ದರ್ಶನಗಳು ಈ ಉಪನಿಷತ್ತಿನ ತತ್ತ್ವಜ್ಞಾನವನ್ನೇ ಆಧಾರವಾಗಿ ಹೊಂದಿವೆ ಎಂಬುದು ಗಮನಾರ್ಹವಾಗಿದೆ. ಇವುಗಳಲ್ಲಿ ನಾಸ್ತಿಕ ದರ್ಶನಗಳ ಅಂಕುರಗಳೂ ಅಲ್ಲಲ್ಲಿ ತೋರುವುವು.
         (It is generally believed that the Upanishads teach a system of Pantheism ; but a close examination will show that they teach not one. but various systems of doctrines as regards the nature of God, man and the world the relations between then, The Religio- Philosophical system of modern times which are mutually inconsistent, quote texts from the Upanishads as an authority for their special doctrines,)
                                - Vaishnavism,Shaivism and Minor Religious Systems BY Bhandarkar R.G

                      ಹೀಗೆ ವೇದಸಾಹಿತ್ಯ ಸಂಹಿತಾ, ಬ್ರಾಹ್ಮಣ, ಮತ್ತು ಅರಣ್ಯಕೋಪನಿಷತ್ತುಗಳಲ್ಲಿ ಅಗಾಧವಾದ ಗ್ರಂಥ ಭಾಗಗಳನ್ನು ಒಳಗೊಂಡಿವೆ. ನಮಗೆ ಇಂದು ಉಪಲಬ್ಧವಾರಗಿರುವ ಭಾಗಗಳು ಮೂಲವೇದದ ಸಹಸ್ರಾಂಶವೂ ಆಗಿಲ್ಲವೆಂಬುದನ್ನು ನಾವು ನೆನಪಿನಲ್ಲಿಡಬೇಕು. 'ಅನಂತಾ ವೈ ವೇದಾಃ' ಎಂಬ ನುಡಿ ಇದನ್ನು ಸೂಚಿಸುತ್ತದೆ. ಆಧುನಿಕ ವಿಮರ್ಶಕರ ಅಭಿಪ್ರಾಯವೂ ಇದೇ ಆಗಿದೆ. ಈಗ ವೇದ ಭಾಗಗಳ ವಿಚಾರಗಳನ್ನು ಕೆಳಗಿನ ಪಟ್ಟಿಕೆಯಲ್ಲಿ ಸಂಗ್ರಹಿಸಿದೆ.
        (We have no right to suppose that we have even a hundredth part of the religious and popular poetry that existed during the vedic age. - Six Systems of the Indian Philosophy, Maxmuller, p-41)

         ವೇದ ಪ್ರಾಮಾಣ್ಯ - ಪ್ರಾಚೀನ ಮತ 
                 ವೇದ ಪ್ರಾಮಾಣ್ಯವನ್ನು ಅಂಗೀಕರಿಸುವ ದರ್ಶನಗಳನ್ನು ಆಸ್ತಿಕ ದರ್ಶನಗಳೆಂದೂ ವೇದ ಪ್ರಾಮಾಣ್ಯವನ್ನು ಒಪ್ಪದ ದರ್ಶನಗಳು ನಾಸ್ತಿಕದರ್ಶನಗಳೆಂದೂ ಪ್ರಾಚೀನರು ದರ್ಶನಗಳನ್ನು ವಿಭಾಗಮಾಡಿದ್ದಾರೆ. ಚಾರ್ವಾಕ, ಜೈನ ಮತ್ತು ಬೌದ್ಧ ದರ್ಶನಗಳು ವೇದ ಪ್ರಾಮಾಣ್ಯವನ್ನಂಗೀಕರಿಸುವುದಿಲ್ಲ. ಉಳಿದ ದರ್ಶನಗಳು ಬಹಳ ಹಿಂದಿನಿಂದಲೂ ವೇದಗಳ ಪ್ರಾಮಾಣ್ಯವನ್ನು ಅಂಗೀಕರಿಸಿವೆ. ಷಡ್ದರ್ಶಗಳೆಂದು ಪ್ರಸಿದ್ಧವಾಗಿರುವ ಸಾಂಖ್ಯ, ಯೋಗ, ನ್ಯಾಯ, ವೈಶೇಷಿಕ, ಪೂರ್ವಮೀಮಾಂಸಾ, ಉತ್ತರಮೀಮಾಂಸಾ ದರ್ಶನಗಳಲ್ಲಿ ಕೊನೆಯ ಎರಡು ದರ್ಶನಗಳು ನೇರವಾಗಿ ವೇದಗಳ ಆಧಾರದಿಂದಲೇ ಮೂಡಿವೆ. ಪೂರ್ವಮೀಮಾಂಸಾ ದರ್ಶನಕ್ಕೆ ಬ್ರಾಹ್ಮಣ ಭಾಗಗಳು ಪರಮಾಧಾರವಾದರೆ ಉತ್ತರ ಮೀಮಾಂಸಾ ದರ್ಶನಕ್ಕೆ ಉಪನಿಷತ್ತುಗಳು ಪರಮಾಧಾರವಾಗಿವೆ. ಈ ದರ್ಶನಗಳೆಲ್ಲವಲೂ ತಮ್ಮದೇ ಆದ ರೀತಿಯಲ್ಲಿ ವೇದಪ್ರಾಮಾಣ್ಯವನ್ನು ಅಂಗೀಕರಿಸಿವೆ.
          
           ಶ್ರೀಮತ್ಸಾಯಣಾಚಾರ್ಯರು ತಮ್ಮ ಋಗ್ವೆದ ಭಾಷ್ಯಭೂಮಿಕೆಯಲ್ಲಿ ವೇದ ಪ್ರಾಮಾಣ್ಯದ ವಿಚಾರವನ್ನು ಚರ್ಚಿಸಿದ್ದಾರೆ. ಪೂರ್ವಮೀಮಾಂಸಾ ದರ್ಶನಕಾರರಾದ ಜೈಮಿನಿಗಳು ತಮ್ಮ ಜೈಮಿನಿಸೂತ್ರಗಳಲ್ಲಿ ವೇದ ಪ್ರಾಮಾಣ್ಯವನ್ನು ಕುರಿತು ವಿವೇಚಿಸಿದ್ದಾರೆ. ಇವರುಗಳ ಅಭಿಪ್ರಾಯದಂತೆ ಮಂತ್ರಬ್ರಾಹ್ಮಣಾತ್ಮಕವಾದ ಶಬ್ದರಾಶಿಯೇ ವೇದ.ಇದು ಸಮಗ್ರವಾಗಿ ಪರಮ ಪ್ರಮಾಣ. ವೇದಪ್ರಾಮಾಣ್ಯವನ್ನು ಒಪ್ಪದವರ ವಾದ ಕೆಳಗೆ ಕಂಡಂತೆ ಇದೆ;
           ಅ) ಯಾವ ಸಾಧನವು ನಮ್ಮ ಅನುಭವಕ್ಕೊಳಪಡುವುದೋ ಅದು ಪ್ರಮಾಣ(ಸಮ್ಯಗನುಭವಸಾಧನಂ ಪ್ರಮಾಣಂ),
                ಮತ್ತೊಂದು ಸಾಧನದಿಂದ ತಿಳಿಯಲಾಗದ ಅರ್ಥಗಳನ್ನು ಯಾವ ಸಾಧನವು ಬೋಧಿಸುವುದೋ ಅದು ಪ್ರಮಾಣ  
                (ಅನಧಿಗತಾರ್ಥಗಂತೃಪ್ರಮಾಣಂ), ಮಂತ್ರಬ್ರಾಹ್ಮಣಾತ್ಮಕವಾದ ವೇದರಾಶಿಯಿಂದ ಇಂಥ ಯಾವ ವಿಧವಾದ 
                ಪ್ರಯೋಜನವೂ ದೊರೆಯದ ಕಾರಣ ಅದು ಪ್ರಮಾಣವಲ್ಲ.
           ಆ) ಯಾವ ಅರ್ಥವನ್ನು ಬೋಧಿಸದ ಮಂತ್ರಗಳು ವೇದದಲ್ಲಿ ಅನೇಕವಿವೆ. 'ಸೃಣ್ಯೇವ ಜರ್ಭರೀ ತುರ್ಫರೀತೂ' 
                ಮೊದಲಾದವು ಇಂಥವು. ಇವುಗಳಿಗೆ ಅರ್ಥವೇ ಇಲ್ಲವೆಂದ ಮೇಲೆ ಯಾವುದನ್ನು ತಾನೆ ಇವು 
                 ಅನುಭವಕ್ಕೊಳಪಡಿಸುವುವು ?
            ಇ) ಕೆಲವು ಮಂತ್ರಗಳಿಗೆ ಸಮೀಚೀನವಾದ ಅರ್ಥವಿಲ್ಲ ; ಕೆಲವಕ್ಕೆ ವಿರುದ್ಧಾರ್ಥವೇ ಉಂಟಾಗುತ್ತದೆ. ಮತ್ತೆ ಕೆಲವು
                 ಮಂತ್ರಗಳ ಅರ್ಥ ಅನುಪಪನ್ನವಾಗುತ್ತದೆ; ಕೆಲವು ಮಂತ್ರಗಳಂತೂ ಸರ್ವಜನವಿಧಿತವಾದ  ಸಾಮಾನ್ಯವಾದ 
                ಅರ್ಥಗಳನ್ನೇ ಹೇಳುತ್ತವೆಯೇ ವಿನಾ ಅಪೂರ್ವವಾದ ಅರ್ಥವನ್ನು ಹೇಳುವುದೇ ಇಲ್ಲ.  ಈ ಎಲ್ಲಾ ಕಾರಣಗಳಿಂದ
                 ಮಂತ್ರಭಾಗಗಳು ಅಪ್ರಮಾಣ ; ಮಂತ್ರಗಳು ಹೇಗೋ ಹಾಗೆ ಬ್ರಾಹ್ಮಣಭಾಗಗಳೂ ಪ್ರಮಾಣವಲ್ಲ. ಬ್ರಾಹ್ಮಣ
                 ಭಾಗಗಳು ಎರಡು ಬಗೆ ವಿಧಿ ಮತ್ತು ಅರ್ಥವಾದ ಎಂಬುದಾಗಿ ಇವೆರಡೂ ಅಪ್ರಮಾಣವೇ.
                 (ಕರ್ಮಚೋದನಾ ಬ್ರಾಹ್ಮಣಾನಿ, ಬ್ರಾಹ್ಮಣಶೇಷೋ ಅರ್ಥವಾದ - ಆಪಸ್ತಂಭ ಪರಿಭಾಷಾ 34-35)
                 ವಿಧಿಗಳು ಅಪ್ರವೃತ್ತಪ್ರವರ್ತನ ಮತ್ತು ಅಜ್ಞಾತಾರ್ಥಜ್ಞಾಪನ ಎಂದು ಎರಡು ಬಗೆ. ಕಾಡಿನಲ್ಲಿ ಬೆಳೆದ 
                 ಎಳ್ಳಿನಿದಾಗಲಿ ಗೋಧಿಯ ಹೊಟ್ಟಿನಿಂದಾಗಲೀ ಹೋಮ ಮಾಡಬಹುದೆಂದು ವಿಧಿಸುವ ವಿಧಿ ಬಂದಿದೆ.
                                   ( 'ಜರ್ತಿಲಯವಾಗ್ವಾ ಜುಹುಯಾತ್ ಗವವೀಧುಕಯವಾಗ್ವಾ')
                ಈ ವಿಧಿ ಸರಿಯಲ್ಲ.ಏಕೆಂದರೆ ಇದು ಪ್ರವೃತ್ತಿಗೆ ಯೋಗ್ಯವಲ್ಲದ ದ್ರವ್ಯವನ್ನು ವಿಧಿಸಿದೆ.  'ಅನಾಹುತಿರ್ವೈ 
                ಜರ್ತಿಲಾಶ್ಚ ಗವೀಧುಕಾಶ್ಚ' ಎಂದು ಅದೇ ವೇದ ಅರಣ್ಯತಿಲಗಳ ಮತ್ತು ಅರಣ್ಯಗೋಧೂಮಗಳ ಹೋಮವವನ್ನು
                ನಿಷೇಧಿಸುತ್ತದೆ. ಇದು ಮೊದಲು ಹೇಳಿದ ವಿಧಿಯನ್ನು ಬಾಧಿಸುತ್ತದೆ. ಇದರಂತೆಯೇ ಅಜ್ಞಾತಜ್ಞಾಪನರೂಪವಾದ
                ವಿಧಿಗಳೂ ಪ್ರಮಾಣವಲ್ಲ. ಒಂದು ಕಡೆ 'ಸವೇದಮಗ್ರ ಆಸೀತ್' ಎಂದೂ ಮತ್ತೊಂದು ಕಡೆ 'ಅಸದ್ವಾ ಇದಮಗ್ರ
                ಆಸೀತ್'' ಎಂದೂ ಬಂದಿದೆ. ಇವುಗಳೆರಡಕ್ಕೂ ವಿರೋಧ ಅಪರಿಹಾರ್ಯ, ವಿಧಿವಾಕ್ಯಗಳು ಹೇಗೆ ಅಪ್ರಮಾಣವೋ
               ಅರ್ಥವಾದ ಭಾಗಗಳೂ ಹಾಗೆಯೇ ಅಪ್ರಮಾಣ. ಅನೇಕ ಅರ್ಥವಾದದ ವಾಕ್ಯಗಳಿಗೆ ವಿವಕ್ಷಿತವಾದ ಅರ್ಥವೇ ಇಲ್ಲ.
               'ಸೋsರೋದೀತ್ ಯದರೋದೀತ್ ತದ್ರುದ್ರಸ್ಯ ರುದ್ರತ್ವಂ'  'ಸ ಆತ್ಮನೋ ವಪಾಮುದಖಿದತ್' ಮೊದಲಾದುವು 
               ಇದಕ್ಕೆ ನಿದರ್ಶನ ಮತ್ತೆ ಕೆಲವು ಅರ್ಥವಾದವಾಕ್ಯಗಳು ಶಾಸ್ತ್ರವಿರೋಧ ಮತ್ತು ದೃಷ್ಟವಿರೋಧವಾಗಳಾಗಿವೆ.
               'ನ ಚೈತದ್ವಿದ್ಮೋ ವಯಂ ಬ್ರಾಹ್ಮಣಾ ವಾಸ್ಮೋ ಬ್ರಾಹ್ಮಣಾ ವಾ' ಎಂಬ ವಾಕ್ಯ ಇಂಥದು. ಆದುದರಿಂದ 
                ಅರ್ಥವಾದ ರೂಪವಾದ ಬ್ರಾಹ್ಮಣ ಭಾಗಗಳೂ ಅಪ್ರಮಾಣವೇ ಸರಿ.

               ಈ ಆಕ್ಷೇಪಗಳಿಗೆ ಜೈಮಿನಿಗಳು ಸಮಾಧಾನವನ್ನು ಹೇಳಿದ್ದಾರೆ. (ಜೈ.ಸೂ 1-2-31 ರಿಂದ 1-2-53) ಮಂತ್ರ ಭಾಗಗಳೂ ಅನರ್ಥಕ, ವಿರುದ್ಧಾರ್ಥಕ, ಅನುಪಪನ್ನಾರ್ಥಕ ಎಂದು ಹೇಳುವ ಆಕ್ಷೇಪ ಸಲ್ಲದು. 'ಜರ್ಭರೀ ತುರ್ಪರೀತೂ' ಮುಂತಾದವಕ್ಕೆ ಯಾಸ್ಕರು ಅರ್ಥನಿರೂಪಣೆ ಮಾಡಿದ್ದಾರೆ. ಆಚಾರ್ಯರುಗಳ ಮೂಲಕ ಜ್ಞಾನಸಾಕ್ಷಾತ್ಕಾರ ಪಡೆದ ಬಹುಶ್ರುತರು ಮಂತ್ರಾರ್ಥ ವಿಜ್ಞಾನಶಾಲಿಗಳಾಗಿ ಎಲ್ಲ ಅರ್ಥಗಳನ್ನೂ ತಿಳಿಯಬಲ್ಲರು. ಆದುದರಿಂದ ಮಂತ್ರಭಾಗದ ಪ್ರಾಮಾಣ್ಯವನ್ನು ಅಲ್ಲಗಳೆಯಲಾಗುವುದಿಲ್ಲ.
     (ಯಾಸ್ಕರೂ ಮಂತ್ರಗಳ ಅರ್ಥವತ್ತ್ವವನ್ನು ಸ್ಥಾಪಿಸಿದ್ದಾರೆ- ನಿರುಕ್ತ 1-16-1 ರಿಂದ 1-016-10)

                                                                                ಮುಂದುವರೆಯುವುದು.......................